ಸಂಕ್ರಾಂತಿ ಹಬ್ಬದ ಹಿಂದೆ ಮುಂದೆ ಅಯ್ಯಪ್ಪನ ಭಕ್ತರು ಮಾಲೆ ಧರಿಸುತ್ತಾರೆ. 41 ದಿನಗಳ ಕಾಲ ಭಕ್ತಿಯಿಂದ, ಮಡಿ ಮೈಲಿಗೆಯನ್ನ ಪಾಲನೆ ಮಾಡಿಕೊಂಡು ಪೂಜೆ ಸಲ್ಲಿಸುತ್ತಾರೆ. ಅಯ್ಯಪ್ಪನ ಮಾಲೆ ದೇಹದ ಮೇಲಿರುವಾಗ ಯಾರು ಕೂಡ ಕಾಲಿಗೆ ಚಪ್ಪಲಿ ಧರಿಸಲ್ಲ. ಇದು ಅಪಾರವಾದ ನಂಬಿಕೆ. ಶಬರಿ ಮಲೆಗೆ ಹೋಗಿ ಮಾಲೆ ಬಿಡುವ ತನಕವೂ ಚಪ್ಪಲಿ ಹಾಕಲ್ಲ. ಆದ್ರೆ ಇತ್ತೀಚೆಗೆ ಸಂಸದ ತೇಜಸ್ವಿ ಸೂರ್ಯ ಅವರ ಒಂದು ಫೋಟೋ ಭಕ್ತರ ಮನಸ್ಸಿಗೆ ನೋವುಂಟು ಮಾಡಿದೆ.
ಹೌದು, ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ನೀವೂ ನೋಡಿಯೇ ಇರ್ತೀರಾ. ಸಂಸದ ತೇಜಸ್ವಿ ಸೂರ್ಗ ಅವರು ಅಯ್ಯಪ್ಪನ ಮಾಲೆ ಧರಿಸಿ, ಕಾಲಿಗೆ ಪಾದರಕ್ಷೆ ಹಾಕಿದ್ದಾರೆ. ಈ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಅಯ್ಯಪ್ಪನ ಭಕ್ತರು ಕೂಡ ಕೆಂಡಾಮಂಡಲಾರಾಗಿದ್ದಾರೆ. ಅಷ್ಟೆ ಅಲ್ಲ ಕಾಂಗ್ರೆಸ್ ನ ನಾಯಕರು ಕಿಡಿಕಾರಿದ್ದಾರೆ.
ಮುಖ್ಯವಾಗಿ ಚಪ್ಪಲಿ ಧರಿಸುವ ಸಂಪ್ರದಾಯವಿಲ್ಲ. ಅದನ್ನೇ ತೇಜಸ್ವಿ ಸೂರ್ಯ ಅವರು ಮುರಿದಿದ್ದಾರೆ ಎಂಬ ಆಕ್ರೋಶ ಭಕ್ತರನ್ನ ಕಾಡುತ್ತಿದೆ. ನಂಬಿಕೆಯನ್ನೇ ಮುರಿದರಲ್ಲ ಎಂಬ ಬೇಸರ ಭಕ್ತರಿಗೆ ಸಹಿಸಲು ಆಗುತ್ತಿಲ್ಲ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಚರ್ಚೆಗಳು ಶುರುವಾಗಿವೆ.