Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಚಿತ್ರದುರ್ಗದ ಎಸ್ಪಿ ಕಚೇರಿ ಎದುರು ಪ್ರೇಮಿಗಳ ಕಣ್ಣೀರು : ಯಾಕೆ ಗೊತ್ತಾ..?

---Advertisement---

ಚಿತ್ರದುರ್ಗ: ಪ್ರೀತಿ ಅನ್ನೋದೇ ಹಾಗೇ. ಯಾರೇ ವಿರೋಧಿಸಿದರು ತನ್ನ ಪ್ರೀತಿಯಷ್ಟೇ ಮುಖ್ಯವಾಗುತ್ತದೆ. ಪ್ರೀತಿ ಕೈ ಮೀರುತ್ತಿದೆ ಎನ್ನುವಾಗ ಮನೆಯವರ ವಿರೋಧ ಕಟ್ಟಿಕೊಂಡರು ಚಿಂತೆ ಇಲ್ಲ ಎಂದು ಮದುವೆಯಾಗುವ ಎಷ್ಟೋ ಕೇಸ್ ಗಳು ಬೆಳಕಿಗೆ ಬಂದಿವೆ. ಇದೀಗ ಕೋಟೆನಾಡಿನಲ್ಲೂ ಅಂತಂದೊಂದು ಘಟನೆ ನಡೆದಿದೆ.

 

ಮಲ್ಲಿಕಾರ್ಜುನ ಹಾಗೂ ಕೀರ್ತಿ ಎಂಬುವವರು ಮದುವೆಯಾದ ಜೋಡಿಗಳು. ಚಳ್ಳಕೆರೆಯ ಚೊಕ್ಕಮದರೆಯವರು ಮಲ್ಲಿಕಾರ್ಜುನ. ಖಾಸಗಿ ಬಸ್ಸಿನ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಬಿಎಸ್ಸಿ ಓದುತ್ತಿರುವ ಕೀರ್ತಿ, ಹಿರಿಯೂರಿನ ಸೊಂಡೆಕೆರೆಯವರು. ಕಳೆದ ಒಂದು ವರ್ಷದಿಂದ ಇಬ್ಬರು ಪ್ರೀತಿಸುತ್ತಾ ಇದ್ದರು. ಇದೀಗ ಇಬ್ಬರು ಮದುವೆಯಾಗಿದ್ದು, ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ.

 

ಮದುವೆಯಾದ ನಾಲ್ಕೆ ದಿನಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಮ್ಮ ಮನೆಯವರು ಬದುಕುವುದಕ್ಕೆ ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ನಾಲ್ಕು ದಿನಗಳ ಹಿಂದೆ‌ ಮಂಡ್ಯದ ದೇವಸ್ಥಾನ ಒಂದರಲ್ಲಿ ಈ ಜೋಡಿ ಮದುವೆಯಾಗಿತ್ತು. ನಮ್ಮ ಪೋಷಕರು ಬದುಕುವುದಕ್ಕೆ ಬಿಡುತ್ತಿಲ್ಲ, ಹೊಡಿತಿನಿ, ಬಡಿತೀನಿ ಅಂತಿದ್ದಾರೆ. ನಮಗೆ ರಕ್ಷಣೆ ಕೊಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...