ಚಿತ್ರದುರ್ಗದ ರೈತರಿಗೆ ಕಣ್ಣೀರು : ಮಳೆ ಇಲ್ಲದೆ ಒಣಗಿದ ಶೇಂಗಾ ಬೆಳೆ

1 Min Read

ಚಿತ್ರದುರ್ಗ: ಕೋಟೆನಾಡು ಅಂತಲ್ಲ ಹಲವು ಜಿಲ್ಲೆಗಳಲ್ಲಿ ರೈತರಿಗೆ ಇದೇ ಸ್ಯೆ ಎದುರಾಗಿದೆ. ಮಳೆ ಇಲ್ಲದೆ ರೈತರು ಕಂಗಲಾಗಿದ್ದಾರೆ. ಹಾಕಿದ ಬೆಳೆ ಒಣಗುವ ಸ್ಥಿತಿ ತಲುಪಿದೆ. ಇದನ್ನು ಕಂಡ ರೈತರು ಕಣ್ಣೀರಾಕುತ್ತಿದ್ದಾರೆ. ಬೆಳೆ ಒಣಗಿದರೆ ಅದಕ್ಕಿಂತ ನೋವು ಮತ್ತೊಂದಿಲ್ಲ ರೈತರಿಗೆ. ಚಿತ್ರದುರ್ಗದ ಚಳ್ಳಕೆರೆ ರೈತರ ಗೋಳು ಇದೆ ಆಗಿದೆ.

ಎಲ್ಲೆಡೆ ಮಳೆ ಬಂದು ಹೋಗೋದು ಮಾಡುತ್ತಾ ಇದೆ. ಸಾಲ ಸೋಲ ಮಾಡಿರುವ ರೈತ ಬೀಜ ಬಿತ್ತನೆ ಮಾಡಿ, ಸಿಗದೆ ಇರುವ ಗೊಬ್ಬರಕ್ಕೆ ಕ್ಯೂ ನಿಂತು ತಂದಿದ್ದಾನೆ. ಎಲ್ಲವನ್ನು ಭೂತಾಯಿ ಒಡಲಿಗೆ ಅರ್ಪಿಸಿದ್ದಾನೆ. ಚಿಗುರೊಡೆದ ಬೆಳೆಗೆ ಸರಿಯಾದ ಪ್ರಮಾಣದಲ್ಲಿ ಮಳೆ ಬಿದ್ದರಲ್ಲವೇ ಬೆಳೆ ಆರೋಗ್ಯಕರವಾಗಿ ಬೆಳೆಯೋದು. ವರುಣನ ಕಣ್ಣಾಮುಚ್ಚಾಲೆ ಆಟಕ್ಕೆ ಚಿಗುರೊಡೆದ ಎಲೆಗಳು ಬಾಡಿ ಹೋಗುತ್ತಿವೆ. ಇದನ್ನ ಕಂಡ ರೈತನ ಮನಸ್ಸು ಕೊರಗುತ್ತಿದೆ.

ವಾಣಿಜ್ಯ ಬೆಳೆಯಾದ ಶೇಂಗಾವನ್ನು ಚಳ್ಳಕೆರೆ ಭಾಗದ ರೈತರು ತಮ್ಮ ಜಮೀನುಗಳಿಗೆ ಹಾಕಿದ್ದಾರೆ. ಶೇಂಗಾ ಚೆನ್ನಾಗಿ ಬರಬೇಕು ಅಂದ್ರೆ ಈ ಸಮಯಕ್ಕೆ ಮಳೆಯೂ ಉತ್ತಮವಾಗಿ ಬರಬೇಕು. ಆದರೆ ಮಳೆ ಕೈಕೊಟ್ಟ ಹಿನ್ನೆಲೆ ಶೇಂಗಾ ಬೆಳೆ ಸಂಪೂರ್ಣವಾಗಿ ಒಣಗಿ ನಿಂತಿದೆ. ಇನ್ನಾದರೂ ಮಳೆಯಾದರೆ ಉಳಿದ ಕೊಂಡು ಬೆಳೆಯಿಂದ ರೈತ ಅಷ್ಟೋ ಇಷ್ಟೋ ಬದುಕುತ್ತಾನೆ. ಇಲ್ಲವಾದರೆ ಮಾಡಿದ ಸಾಲಕ್ಕೂ ಬಡ್ಡಿ ಕಟ್ಟುವುದಕ್ಕೂ ಹಣದ ಇಲ್ಲದ ಕಷ್ಟಬೀಳಬೇಕಾಗುತ್ತದೆ. ಸದ್ಯದ ಸ್ಥಿತಿ ಹೇಗಿದೆ ಅಂದ್ರೆ ರೈತ ಪ್ರತಿ ದಿನ ಮೋಡದತ್ತ ನೋಡುತ್ತಲೇ ಕೂತಿರುವ ಪರಿಸ್ಥಿತಿ ಎದುರಾಗಿದೆ. ವರುಣರಾಯ ಕೃಪೆ ತೋರಿ ಆದಷ್ಟು ಬೇಗ ಮಳೆ ಬರುವಂತಾಗಲಿ, ರೈತನ ನಿರೀಕ್ಷೆಯಂತೆ ಬೆಳೆಯು ಬರುವಂತಾಗಲಿ ಎಂದೇ ಎಲ್ಲರೂ ಆಶಿಸುತ್ತಿದ್ದಾರೆ.

Share This Article