ಕ್ಷಯ ರೋಗ ನಿರ್ಮೂಲನೆಯಲ್ಲಿ ಶಿಕ್ಷಕರ ಸಹಭಾಗಿತ್ವ ಪರಿಣಾಮಕಾರಿ : ಡಿಹೆಚ್‍ಓ ಡಾ.ಆರ್.ರಂಗನಾಥ್

suddionenews
1 Min Read

ಚಿತ್ರದುರ್ಗ, (ಮಾರ್ಚ್.10) : 2025ರೊಳಗೆ ಕ್ಷಯಮುಕ್ತ ಭಾರತದ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಮಾಹಿತಿ ಶಿಕ್ಷಣ ಹೆಚ್ಚು ಸಮುದಾಯ ಮುಖಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್ ತಿಳಿಸಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ಚಿತ್ರದುರ್ಗ ತಾಲ್ಲೂಕಿನ ಶಿಕ್ಷಣ ಇಲಾಖೆಯ ಎಲ್ಲಾ ವಿಜ್ಞಾನ ಶಿಕ್ಷಕರಿಗೆ ಕ್ಷಯರೋಗ ನಿಯಂತ್ರಣ, ನಿರ್ಮೂಲನಾ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.

ಸಮುದಾಯದಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಕ್ಷಯರೋಗ ನಿರ್ಮೂಲನೆಗೆ ನೀವೆಲ್ಲಾ ತರಬೇತಿ ಪಡೆಯುವುದು ಅವಶ್ಯಕ. ಗಹನವಾದ ಸಮರ್ಥನಾ ಸಭೆಗಳನ್ನು ಗ್ರಾಮ ಗ್ರಾಮಗಳಲ್ಲಿ ಮಾಡಿ ಸಾರ್ವಜನಿಕರಿಗೆ ಕ್ಷಯರೋಗದ ಬಗ್ಗೆ ಅರಿವು ಮೂಡಿಸಿ ಸೂಕ್ತ ಚಿಕಿತ್ಸೆ ಪಡೆಯಲು ನಮ್ಮ ಇಲಾಖೆಯೊಂದಿಗೆ ಕೈಜೋಡಿಸುವಂತೆ ಹೇಳಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸಿ.ಒ.ಸುಧಾ ಮಾತನಾಡಿ, ದೀರ್ಘಕಾಲದ ರೋಗಗಳಿಂದ ಬಳಲುತ್ತಿರುವವರು ಕ್ಷಯರೋಗಕ್ಕೆ ಬೇಗನೆ ತುತ್ತಾಗುತ್ತಾರೆ. ಪ್ರಾರಂಭಿಕ ಹಂತದಲ್ಲಿ ಸೂಕ್ತ ತಪಾಸಣೆ, ಚಿಕಿತ್ಸೆ ಪಡೆದರೆ ಕ್ಷಯರೋಗದಿಂದ ಬೇಗನೆ ಗುಣಮುಖರಾಗುತ್ತಾರೆ ಎಂದು ತಿಳಿಸಿದರು.
ಡಾ.ಬಸವರಾಜ್ ಸಂಗೊಳ್ಳಿ ಶಿಕ್ಷಕರಿಗೆ ಕ್ಷಯರೋಗ ನಿಯಂತ್ರಣ ನಿರ್ಮೂಲನೆ ಬಗ್ಗೆ ಉಪನ್ಯಾಸ ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಮಾರುತಿ ಪ್ರಸಾದ್, ಮಾರುತಿ, ಮಹೇಂದ್ರ, ನಂದನ್, ಎನ್.ಎಸ್.ಮಂಜುನಾಥ, ಮೂಗಪ್ಪ ಬಿ.ಇ.ಒ. ಕಚೇರಿಯ ಕ್ಷೇತ್ರ ಸಂಪರ್ಕಾಧಿಕಾರಿ ಇನಾಯತ್, ಹಾಗೂ ವಿಜ್ಞಾನ ಶಿಕ್ಷಕರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *