ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ : ನಿವೃತ್ತ ಡಿಡಿಪಿಐ ರೇವಣ ಸಿದ್ದಪ್ಪ ನವರಿಗೆ ಸನ್ಮಾನ

1 Min Read

 

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.05 :  ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ “ಶಿಕ್ಷಕರ ದಿನಾಚರಣೆಯ” ಅಂಗವಾಗಿ ಚಿತ್ರದುರ್ಗ ಜಿಲ್ಲಾ ಶಿಕ್ಷಣ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ಹಾಗೂ ವಿವಿಧ ಜಿಲ್ಲೆಗಳಲ್ಲಿ  ಉನ್ನತ ಹುದ್ದೆಯನ್ನು ಅಲಂಕರಿಸಿ ಸೇವೆ ಸಲ್ಲಿಸಿ ನಿವೃತ್ತರಾದ ರೇವಣ ಸಿದ್ದಪ್ಪ ನವರನ್ನು ಸನ್ಮಾನಿಸಿಲಾಯಿತು.

ಶಿಕ್ಷಕರ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ  ವಿಶೇಷ ಅಹ್ವಾನಿತರಾಗಿ ಆಗಮಿಸಿ ಸನ್ಮಾನವನ್ನು ಸ್ವೀಕರಿಸಿ ಮಾತಾನಾಡಿದ ಶ್ರೀಯುತ ರೇವಣಸಿದ್ದಪ್ಪ ನವರು ಶಿಕ್ಷಕರ ಪಾತ್ರ ಮಕ್ಕಳ ಜೀವನದಲ್ಲಿ  ಅಮೂಲ್ಯವಾದುದು. ಇಂದು ಕೇವಲ ನಾಲ್ಕು ಗೋಡೆಗಳ ಮಧ್ಯೆ ಪಾಠ ಪ್ರವಚನ ಹೇಳಿಕೊಡುವವರಷ್ಟೇ ಶಿಕ್ಷಕರಲ್ಲ. ಎರಡಕ್ಷರ ಕಲಿಸಿದಾತ ಗುರು ಎಂಬಂತೆ  ನಮಗಿಂತ ಹಿರಿಯರು/ಕಿರಿಯರು  ನಾವು ಇಡುವ ಪ್ರತಿ ಹೆಜ್ಜೆಯಲ್ಲೂ ಪ್ರ್ರತಿ ಹಂತದಲ್ಲೂ, ನಮ್ಮ ತಪ್ಪು ಒಪ್ಪುಗಳನ್ನು  ತಿದ್ದಿತೀಡುವವರೆಲ್ಲರೂ  ಶಿಕ್ಷಕರಾಗಿರುತ್ತಾರೆ.

ಶಿಕ್ಷಕರಾದವರು ಮಗುವಿನ ಜ್ಞಾನದ ಮಟ್ಟಕ್ಕೆ ಇಳಿದು  ಓದಿಸುವವರು  ನಿಜವಾದ ಶಿಕ್ಷಕರಾಗುತ್ತಾರೆ. ಈ ನಿಟ್ಟಿನಲ್ಲಿ  ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯು ಚಿತ್ರದುರ್ಗದಲ್ಲಿಯೇ ಮುಂಚೂಣಿಯಲ್ಲಿದೆ.  ಅಲ್ಲದೇ  ಸಂಸ್ಥೆಯ ಕಾರ್ಯದರ್ಶಿಗಳು ಆಡಳಿತ ಮಂಡಳಿ ಹಾಗೂ  ಶಿಕ್ಷಕರು ಮುತುವರ್ಜಿ ವಹಿಸುತ್ತಿರುವುದು  ಶ್ಲಾಘನೀಯ ವಿಚಾರ ಎಂದರು.

ಸಂಸ್ಥೆಯ ಕಾರ್ಯದರ್ಶಿಗಳಾದ  ಬಿ.ವಿಜಯ್ ಕುಮಾರ್ ಅವರು ಮಾತನಾಡುತ್ತಾ  ಖಾಸಗಿ ಶಿಕ್ಷಣ ಸಂಸ್ಥೆ ನಡೆಸುವಲ್ಲಿ  ನಿಮ್ಮಂತಹ ಅಧಿಕಾರಿಗಳ ಮಾರ್ಗದರ್ಶನ  ಸಲಹೆ ಸೂಚನೆ ಅತ್ಯಮೂಲ್ಯ ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ  ಶಿಕ್ಷಣ ಇಲಾಖೆಯ ಅಧಿಕಾರಿಗಳ ಕೊಡುಗೆ ಸಹಕಾರ  ಗಣನೀಯವಾದುದು ಎಂದರು.

ಶಿಕ್ಷಕರ ದಿನಾಚರಣೆಯ ಅಂಗವಾಗಿ ಸಂಸ್ಥೆಯ ಆಡಳಿತ ಮಂಡಳಿ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ಶ್ರೀಮತಿ ಸುನಿತಾ ವಿಜಯ್ ಕುಮಾರ್, ಶೈಕ್ಷಣಿಕ ಆಡಳಿತಾಧಿಕಾರಿ ಡಾ||.ಸ್ವಾಮಿ.ಕೆ.ಎನ್ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ.ಸಂಪತ್ ಕುಮಾರ್.ಸಿ.ಡಿ,  ಐಸಿಎಸ್‍ಸಿ ಪ್ರಾಚಾರ್ಯರಾದ ಬಸವರಾಜಯ್ಯ.ಪಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *