ಸುದ್ದಿಒನ್, ಹೈದರಾಬಾದ್ : ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಇಂದು(ಶನಿವಾರ) ಬಂಧಿಸಿ ವಿಜಯವಾಡಕ್ಕೆ ಸ್ಥಳಾಂತರಿಸಲಾಗಿದೆ.
ಟಿಡಿಪಿ ಮುಖ್ಯಸ್ಥರು ತಮ್ಮ ಅಧಿಕಾರಾವಧಿಯಲ್ಲಿ ಆಂಧ್ರಪ್ರದೇಶದ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದಲ್ಲಿ 317 ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
Democracy back sliding in Andhrapradesh !! #WeWillStandWithCBNSir #StopIllegalArrestOfCBN pic.twitter.com/ovuuaSNz9U
— iTDP Official (@iTDP_Official) September 9, 2023
ಮಧ್ಯರಾತ್ರಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಆಂಧ್ರಪ್ರದೇಶದ ಸಿಐಡಿ ಅಧಿಕಾರಿಗಳು ಇಂದು (ಶನಿವಾರ) ಮುಂಜಾನೆ ನಾಯ್ಡು ಅವರನ್ನು ವಶಕ್ಕೆ ಪಡೆದರು.
ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ಚಂದ್ರಬಾಬು ಎ1 ಆಗಿದ್ದಾರೆ. ಇದರ ಭಾಗವಾಗಿ ಸಿಐಡಿ ಪೊಲೀಸರು ಚಂದ್ರಬಾಬು ಅವರನ್ನು ಬಂಧಿಸಿದ್ದರು. ಆಂಧ್ರಪ್ರದೇಶ ಸರ್ಕಾರವು 2020 ರಲ್ಲಿ ಈ ಪ್ರಕರಣದ ತನಿಖೆಗೆ ಆದೇಶಿಸಿತ್ತು.
ಈ ಪ್ರಕರಣದಲ್ಲಿ ಅಚ್ಚೆನ್ನಾಯ್ಡು ಎ2 ಆಗಿದ್ದಾರೆ. ಬಂಧನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚಂದ್ರಬಾಬು ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಕೌಶಲ ಹಗರಣ ಪ್ರಕರಣದಲ್ಲಿ ಚಂದ್ರಬಾಬು ವಿರುದ್ಧ ಸೆಕ್ಷನ್ 465, 468, 471, 409, 201 ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಸುಮಾರು ಮೂರು ಗಂಟೆಗಳ ಕಾಲ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಚಂದ್ರಬಾಬು ನಂತರ ಬಂಧಿಸಲಾಯಿತು .