ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕೆಂದುಕೊಂಡು ಪಣ ತೊಟ್ಟಿರುವ ವಿಪಕ್ಷಗಳು ಬೆಂಗಳೂರಿನಲ್ಲಿ ಬೃಹತ್ ಸಭೆ ನಡೆಸುತ್ತಿದ್ದಾರೆ. ಈ ಸಭೆಯ ಬಗ್ಗೆ ಕಾಂಗ್ರೆಸ್ ನಾಯಕ ಟಿಬಿ ಜಯಚಂದ್ರ ಅವರು ಖಂಡಿಸಿದ್ದಾರೆ.
ವಿಪಕ್ಷ ನಾಯಕರನ್ನು ರಾಜ್ಯದ ಐಎಎಸ್ ಅಧಿಕಾರಿಗಳು ಸ್ವಾಗತಿಸಿದ್ದಾರೆ. ಈ ವಿಚಾರ ವಿವಾದಕ್ಕೆ ಕಾರಣವಾಗಿದೆ. ಈಗಾಗಲೇ ಈ ವಿಚಾರಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದರೆ, ಕಾಂಗ್ರೆಸ್ ನಾಯಕ ಟಿಬಿ ಜಯಚಂದ್ರ ಅವರು, ತಮ್ಮದೇ ಪಕ್ಷದ ನಡೆಯನ್ನು ಖಂಡಿಸಿದ್ದಾರೆ.
ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿ ರಕ್ಷಣೆ ಕೊಡುವ ಅವಶ್ಯಕತೆ ಇರಲಿಲ್ಲ. ಡಿಕೆ ಶಿವಕುಮಾರ್, ಸಿಎಂ ಹೋಗಿರಬಹುದು. ಆದರೆ ಡಿಕೆ ಶಿವಕುಮಾರ್ ಜೊತೆಹಿನ ಸ್ಟಾಫ್ ಬಿಟ್ಟು, ಉಳಿದ ಅಧಿಕಾರಿಗಳು ಹೋಗುವ ಅವಶ್ಯಕತೆ ಇಲ್ಲ. ನಾವ್ಯಾರು ಹೋಗಿರಲಿಲ್ಲ ಅಂದಮೇಲೆ ಅಧಿಕಾರಿಗಳೂ ಹೋಗುವ ಅವಶ್ಯಕತೆ ಇರಲಿಲ್ಲ. ಯಾವುದೋ ಕಾರಣಕ್ಕೆ ಹೋಗಿರಬಹುದು. ಇದನ್ನ ಸಾರ್ವಜನಿಕವಾಗಿ ಆರೋಪ ಮಾಡೋದು ಸರಿಯಲ್ಲ ಎಂದಿದ್ದಾರೆ.