ಮೈಸೂರು: ಹಳೆ ಮೈಸೂರು ಭಾಗ ಜೆಡಿಎಸ್ ನ ಭದ್ರಕೋಟೆಯಾಗಿದೆ. ಈ ಭದ್ರಕೋಟೆಯನ್ನು ಒಡೆದು ಬಿಜೆಪಿ ಕಮಲ ಅರಳಿಸೋಕೆ, ಕಾಂಗ್ರೆಸ್ ಹಸ್ತ ಮುದ್ರಿಸೋಕೆ ರೆಡಿಯಾಗಿದೆ. ಅದಕ್ಕಾಗಿಯೇ ಸಾಕಷ್ಟು ತಯಾರಿ ಕೂಡ ನಡೆಸುತ್ತಿದೆ. ಆದ್ರೆ ಇದರ ನಡುವೆಯೇ ಕಾಂಗ್ರೆಸ್ ಗೆ ಶಾಕ್ ಒಂದು ಸಿಕ್ಕಿದೆ. ತನ್ವೀರ್ ಸೇಠ್ ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿದ್ದಾರೆ.
ತನ್ವೀರ್ ಸೇಠ್, ಎನ್ ಆರ್ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ. ಸದ್ಯ ಚುನಾವಣಾ ರಾಜಕೀಯದಿಂದ ನಿವೃತ್ತಿ ಬಯಸುತ್ತಿದ್ದಾರೆ. ಈ ಸಂಬಂಧ ಎಐಸಿಸಿಗೆ ಪತ್ರ ಬರೆದಿದ್ದು, ನನಗೆ ಈ ಬಾರಿ ಟಿಕೆಟ್ ಬೇಡ. ಅನಾರೋಗ್ಯ ಕಾರಣದಿಂದ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ನಾನು ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ನಡೆಸಲ್ಲ. ನನ್ನ ಮೇಲೆ ಹಲ್ಲೆಯಾದ ಮೇಲೆ ಆರೋಗ್ಯ ಬಹಳ ಏರುಪೇರಾಗಿದೆ. ಮೊದಲಿನಂತೆ ಮಾನಸಿಕವಾಗಿ, ದೈಹಿಕವಾಗಿ ಶಕ್ತಿಯುತವಾಗಿಲ್ಲ. ಹೀಗಾಗಿ ನನಗೆ ಈ ಬಾರಿ ಟಿಕೆಟ್ ಬೇಡ. ಆದ್ರೆ ಕಾಂಗ್ರೆಸ್ ಪಕ್ಷದಲ್ಲಿಯೇ ಇರುತ್ತೇನೆ ಎಂದು ಹೇಳಿದ್ದಾರೆ.
ಅನಾರೋಗ್ಯದ ಕಾರಣದಿಂದ ತನ್ವೀರ್ ಸೇಠ್ ರಾಜಕೀಯದಿಂದ ದೂರವಾಗುತ್ತಿದ್ದಾರೆ. 2019ರಲ್ಲಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ತನ್ವೀರ್ ಸೇಠ್ ಮೇಲೆ ಮಾರಾಣಾಂತಿಕ ಹಲ್ಲೆ ನಡೆದಿತ್ತು. ಅದರಿಂದ ಇಂದು ಕೂಡ ಅನಾರೋಗ್ಯದಿಂದ ಬಳಲುತ್ತಿರುವ ಬಗ್ಗೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ.