ಮೈಸೂರು: 100 ಅಡಿ ಟಿಪ್ಪು ಸುಲ್ತಾನ್ ಮೂರ್ತಿಯನ್ನು ಮೈಸೂರಿನಲ್ಲಿ ಸ್ಥಾಪಿಸುತ್ತೇವೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಂಬಂಧ ಇದೀಗ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾತನಾಡಿದ್ದು, ಮುಸ್ಲಿಮರೇ ಸೇರಿಕೊಂಡು ಪ್ರಮೋದ್ ಮುತಾಲಿಕ್ ರನ್ನು ಗಲ್ಲಿಗೇರಿಸುತ್ತಾರೆ ಎಂದಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಭಾರತ ಮತ್ತು ಪಾಕಿಸ್ತಾನ ಎರಡು ಧರ್ಮದ ಆಧಾರದ ಮೇಲೆ ಬೇರೆಯಾದ ರಾಷ್ಟ್ರಗಳು. ಪಾಕಿಸ್ತಾನ ಹೇಗೆ ಮುಸ್ಲಿಂರಿಗೆ ಸೀಮಿತವಾಗಿದೆಯೋ ಭಾರತದ ಹಿಂದೂಗಳಿಗೆ ಸೀಮಿತವಾದಂತ ರಾಷ್ಟ್ರ. ಆದರೆ ಸಂವಿಧಾನದಲ್ಲಿ ಬಲವಂತವಾಗಿ ಜಾತ್ಯಾತೀತ ಶಬ್ಧ ಸೇರಿಸಲಾಗಿದೆ. ಇದನ್ನು ನಾವು ಒಪ್ಪುವುದಿಲ್ಲ ಎಂದಿದ್ದಾರೆ.
ಮುಸ್ಲಿಂ ಸಮುದಾಯದಲ್ಲಿ ಮೂರ್ತಿ ಪೂಜೆ ಇಲ್ಲ. ಆದರೂ ಹೇಗೆ ಟಿಪ್ಪು ಮೂರ್ತಿ ರಚಿಸಿ ಪೂಜೆ ಮಾಡುತ್ತೀರಿ..? ಇದು ಧರ್ಮ ವಿರೋಧಿ ಅಲ್ಲವೆ..? ಈ ಧರ್ಮ ವಿರೋಧಿ ಹೇಳಿಕೆಯಿಂದ ಮುಸ್ಲಿಂರೇ ತನ್ವೀರ್ ಸೇಠ್ ನನ್ನು ಗಲ್ಲಿಗೇರಿಸುತ್ತಾರೆ ಎಂದಿದ್ದಾರೆ.