ಕಾವೇರಿ ನದಿ ನೀರಿಗಾಗಿ ತಮಿಳುನಾಡಿನ ಸರ್ಕಾರದ ಸಿಎಂ ಸ್ಟಾಲಿನ್ ಅವರು ಪಿಎಂ ಮೋದಿ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಕರ್ನಾಟಕದಿಂದ ತಮಿಳುನಾಡಿಗೆ ಬರಬೇಕಾದ ಕಾವೇರಿ ನೀರನ್ನು ಕೊಡಿಸಬೇಕು ಎಂದು ಆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ತಮಿಳುನಾಡಿನಲ್ಲಿ ಕುರುವಾಯಿ ಭತ್ತದ ಬೆಳೆ ಉಳಿಸುವುದಕ್ಕೆ ನಮಗೆ ಬರಬೇಕಾದ ಕಾವೇರಿ ನೀರನ್ನು ಬಿಡಿ ಎಂದು ಕೇಳಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ನಿಗದಿತ ಸಮಯಕ್ಕೆ ತಮಿಳುನಾಡಿಗೆ ಬಿಡಬೇಕಾದ ಕಾವೇರಿ ನೀರನ್ನು ಇನ್ನು ಬಿಟ್ಟಿಲ್ಲ. ಆದರೆ ಕರ್ನಾಟಕ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲನೆ ಮಾಡುತ್ತಿಲ್ಲ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಪಾಲನೆ ಮಾಡುತ್ತಿಲ್ಲ ಎಂದು ಆ ಪತ್ರದಲ್ಲಿ ತಿಳಿಸಿದ್ದಾರೆ.
ಕೂಡಲೇ ಕಾವೇರಿಯಿಂದ ನಮಗೆ ಬರಬೇಕಾದ ನೀರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯ ಹಾಕಿದ್ದಾರೆ. ಕರ್ನಾಟಕದ ವಿಚಾರವಾಗಿ ತಮಿಳುನಾಡು ಆಗಾಗ ಕ್ಯಾತೆ ತೆಗೆಯುತ್ತಲೇ ಇರುತ್ತೆ. ಈಗ ಕಾವೇರಿ ನದಿ ನೀರಿಗೆ ಮತ್ತೆ ಕ್ಯಾತೆ ತೆಗೆದಿದೆ.