ಗದಗ: ಮೂರು ಸಾವಿರ ಮಠದ ಪೀಠಕ್ಕಾಗಿ ದಿಂಗಾಲೇಶ್ವರ ಶ್ರೀಗಳು ರೌಡಿಸಂ ಮಾಡಿದ್ದರು ಸಚಿವ ಸಿಸಿ ಪಾಟೀಲ್ ಹೇಳಿದ್ದರು. ಈ ಹೇಳಿಕೆಯನ್ನು ಪ್ರಶ್ನಿಸಿರುವ ದಿಂಗಾಲೇಶ್ವರ ಶ್ರೀಗಳು, ಯಾವ ರೌಡಿಸಂ ಮಾಡಿದ್ದೀನಿ ಎಂಬುದನ್ನು ತೋರಿಸಬೇಕು ಎಂದಿದ್ದಾರೆ.

ಈ ಸಂಬಂಧ ಜಿಲ್ಲೆಯಲ್ಲಿ ಮಾತನಾಡಿದ ಶ್ರೀಗಳು, ಒಂದು ಸಾಬೀತು ಮಾಡಬೇಕು, ಇಲ್ಲ ಮುಂದೆ ಏನು ಘೋಷಣೆ ಮಾಡ್ತಾರೆ ಮಾಡಬೇಕು ಅದು ಅವರಿಗೆ ಬಿಟ್ಟದ್ದು. ನನ್ನ ವೈಯಕ್ತಿಕ ವಿಚಾರಗಕಲನ್ನು ಅಷ್ಟರಮಟ್ಟಿಗೆ ಮಾಡ್ತಿದ್ದಾರೆ. ಅವರು ಏನು ಹೇಳ್ತಿದ್ದಾರೆ ಎಂದರೆ ಸ್ವಾಮಿಯಾಗಿ ಅವರಿಗೆ ಅಲ್ಲಿ ಕುಳಿತುಕೊಳ್ಳುವ ಯೋಗ್ಯತೆ ಇಲ್ಲ. ಆದರೂ ನಾವೂ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಇದೆ ಅಂತ. ನನಗೆ ಜನರ ಬೆಂಬಲ ಇದೆ. ನನ್ನನ್ನು ಆಯ್ಕೆ ಮಾಡಿಕೊಂಡಂತ ಭಕ್ತರಿಗೆ ಸಚಿವರು ಬಹಳ ಮುಜುಗರ ಉಂಟು ಮಾಡಿದರು. ಅವರೇಳಿದ ರೀತಿಗೆ ಈ ಸ್ವಾಮಿಗಳು ಸರಿ ಇಲ್ವೇನೋ ಎಂಬಂತ ಪ್ರಶ್ನೆ ಬಂತು. ಸರಿ ಇಲ್ಲ ಅಂತ ಪ್ರೂವ್ ಮಾಡಲಿ. ಸಚಿವರಾಗಿ ಅವರು ಪ್ರೂವ್ ಮಾಡಿದರೆ ನಾನು ಯಾವುದೇ ಮಠದ ಸ್ಥಾನದಲ್ಲಿ ಕೂರುವುದಿಲ್ಲ. ಯಾಕಂದ್ರೆ ಸಚಿವರಿಗೆ ನೋವಾಗುತ್ತೆ. ಅವರು ಪ್ರೂವ್ ಮಾಡಿದ ದಿನವೇ ಎಲ್ಲಾ ಪೀಠಗಳ ತ್ಯಾಗ ಮಾಡುತ್ತೇನೆ.

ನನ್ನ ನೈತಿಕತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಬಹಳ ಆಶ್ಚರ್ವಾಗುತ್ತೆ. ಅವರ ನೈತಿಕತೆ ಏನು ಅಂತ ಇಡೀ ಪ್ರಪಂಚವೇ ನೋಡಿದೆ. ರಾಜೀನಾಮೆ ಕೊಟ್ಟರು. ವಿಧಾನಸೌಧದಲ್ಲಿಯೇ ರಾಜ್ಯದ ಜನತೆಗೆ ತೋರಿಸಿದ್ದಾರೆ. ಯಾ ನೈತಿಕತೆ ಇದೆ ಎಂಬುದನ್ನು. ಅಷ್ಟು ನೈತಿಕತೆ ಉಳ್ಳವರು ನನ್ನ ನೈತಿಕತೆ ಬಗ್ಗೆ ಮಾತಾಡುತ್ತಾರೆ ಎಂದರೆ ಬಹಳ ಆಶ್ಚರ್ಯ ಆಗುತ್ತೆ ಎಂದಿದ್ದಾರೆ.

