ತಾಲಿಬಾನಿಗಳಿಂದ ಹೊಸ ಮಾರ್ಗಸೂಚಿ : ಮಹಿಳಾ ಜರ್ನಲಿಸ್ಟ್ ಗಳಿಗೂ ಅನ್ವಯ..!

ಕಾಬೂಲ್ : ಅಮೆರಿಕಾ ಸೈನ್ಯ ಯಾವಾಗ ಆಫ್ಘಾನಿಸ್ತಾನದಿಂದ ಹೊರ ಹೋಯಿತೋ ಅಂದಿನಿಂದ ತಾಲಿಬಾನಿಗಳು ಇಡೀ ದೇಶವನ್ನ ಕೈ ವಶ ಮಾಡಿಕೊಂಡು ಈಗ ತಮ್ಮದೇ ಆಡಳಿತ ನಡೆಸುತ್ತಿದ್ದಾರೆ. ಆ ಆಡಳಿತದಲ್ಲಿ ತಾವೇ ಮಾಡಿದ ನೀತಿ ನಿಯಮಗಳನ್ನು ಹೇರುತ್ತಿದ್ದಾರೆ. ಈಗ ಹೊಸದೊಂದು ಮಾರ್ಗಸೂಚಿಯನ್ನ ಹೊರಡಿಸಿದೆ.

ಟಿವಿ ವಾಹಿನಿಗಳಿಗೆ ಈ ಮಾರ್ಗಸೂಚಿ ಹೊರಡಿಸಿದ್ದು, ಟಿವಿಯಲ್ಲಿ ನಟಿಯರ ನಾಟಕಗಳನ್ನು ಪ್ರದರ್ಶಿಸುವ ಆಗಿಲ್ಲ. ಹಾಗೂ ಮಹಿಳೆಯರ ಸೋಪು ಬಳಸುವ ಜಾಹೀರಾತಗಳನ್ನು ಪ್ರಸಾರ ಮಾಡುವಂತಿಲ್ಲ. ಜೊತೆಗೆ ಮಹಿಳಾ ಜರ್ನಲಿಸ್ಟ್ ಗಳು ಇಸ್ಲಾಮಿಕ್ ಹಜೀಬ್ ಗಳನ್ನ ಧರಿಸಿಯೇ ಸುದ್ದಿ ಓದಬೇಕು ಎಂಬೆಲ್ಲಾ ವಿಚಾರಗಳನ್ನ ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ‌.

ಇಸ್ಲಾಮಿಕ್‌ ಹಾಗೂ ಅಫ್ಘಾನ್‌ ಮೌಲ್ಯಗಳನ್ನು ಉಲ್ಲಂಘಿಸುವ ಯಾವುದೇ ಸಿನಿಮಾ ಅಥವಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಖಡಕ್‌ ಸೂಚನೆ ನೀಡಲಾಗಿದೆ. ಇವು ನಿಯಮಗಳಲ್ಲ. ಆದರೆ ಧಾರ್ಮಿಕ ಮಾರ್ಗಸೂಚಿಗಳು ಎಂದು ಸಚಿವಾಲಯದ ವಕ್ತಾರ ಹಕಿಫ್‌ ಮೊಹಜಿರ್‌ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *