ಕಾಬೂಲ್: ಆಪ್ಘಾನಿಸ್ತಾನದ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಬಳಕೆಯಾಗುವುದು ಡಾಲರ್ ಕರೆನ್ಸಿ.ಗಡಿ ಪ್ರದೇಶದ ಜನರು ಕೂಡ ತಮ್ಮ ವ್ಯಾಪಾರ ವಹಿವಾಟಿಗೆ ಪಾಕಿಸ್ತಾನದಂತ ನೆರೆಯ ರಾಷ್ಟ್ರಗಳ ಕರೆನ್ಸಿಯನ್ನೇ ಬಳಕೆ ಮಾಡುತ್ತಾರೆ. ಆದ್ರೆ ಇದೀಗ ತಾಲಿಬಾನಿಗಳು ವಿದೇಶಿ ಕರೆನ್ಸಿ ಬಳಕೆ ಮಾಡದಂತೆ ಆಜ್ಞೆ ಮಾಡಿದ್ದಾರೆ ಎನ್ನಲಾಗಿದೆ.
ಅಲ್ಲಿನ ಮಾಧ್ಯಮಗಳೆ ಹೇಳಿರಯವ ಪ್ರಕಾರ ಆಫ್ಘನ್ ಕರೆನ್ಸಿ ಬಳಕೆಗೆ ತಾಲಿಬಾನಿಗಳು ಸೂಚನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ವಿದೇಶಿ ಕರೆನ್ಸಿ ಬಳಸಬಾರದು ಎಂದು ಹೇಳಲಾಗಿದೆಯಂತೆ. ಒಂದು ವೇಳೆ ಈ ನಿಯಮ ಮೀರಿದ್ರೆ ಕಠಿಣ ಶಿಕ್ಷೆ ನೀಡುವುದಾಗಿ ಸೂಚನೆ ನೀಡಲಾಗಿದೆಯಂತೆ.
ಆಫ್ಘಾನ್ ನಲ್ಲಿರುವ ಆರ್ಥಿಕ ಪರಿಸ್ಥಿತಿ ಪರಿಗಣಿಸಿ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಈ ದೇಶದ ಜನರು ತಮ್ಮ ಪ್ರತಿ ವ್ಯವಹಾರವನ್ನು ಅಪ್ಘಾನಿಸ್ತಾನದ ಕರೆನ್ಸಿಯಲ್ಲಿಯೆ ನಡೆಸಬೇಕು ಎಂಬ ನಿರ್ಣಯವನ್ನು ಜಾರಿ ಮಾಡಲಾಗಿದೆ ಎಂದು ತಾಲಿಬಾನ್ ವಕ್ತಾರರು ತಿಳಿಸಿದ್ದಾರಂತರ. ಈ ಸಂಬಂಧ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಅಫ್ಘಾನಿಸ್ತಾನದಿಂದ ಯುಎಸ್ ಪಡೆಗಳು ಹೊರಟುಹೋದ ಬಳಿಕ ಅಲ್ಲಿ ಹಣಕಾಸು ನೆರವು ನೀಡಲು ಅಂತಾರಾಷ್ಟ್ರೀಯ ದಾನಿಗಳೂ ಹಿಂದೇಟು ಹಾಕುತ್ತಿದ್ದಾರೆ. ಎಷ್ಟೋ ಆರ್ಥಿಕ ಮೂಲಗಳು ಮುಚ್ಚಿಹೋಗಿವೆ. ಅದಕ್ಕೂ ಮಿಗಿಲಾಗಿ ಅಫ್ಘಾನಿಸ್ತಾನದಲ್ಲಿ ಇನ್ನೂ ಸ್ಥಿರತೆಯೇ ಮೂಡಿಲ್ಲ. ಒಂದಲ್ಲ ಒಂದು ಕಡೆ ಸ್ಫೋಟ, ಪ್ರಾಣ ಹಾನಿ ನಡೆಯುತ್ತಿದೆ.