ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 09 : ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಅಂಗಡಿ ಮುಂಗಟ್ಟುಗಳ ಮೇಲೆ ಶೇ.60 ರಷ್ಟು ಕನ್ನಡ ನಾಮಫಲಕ ಅಳವಡಿಸದಿರುವವರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಕರುನಾಡ ವಿಜಯಸೇನೆ ಕಾರ್ಯಕರ್ತರು ನಗರಸಭೆ ಪೌರಾಯುಕ್ತರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ವ್ಯಾಪಾರಿ ಮಳಿಗೆಗಳು, ಅಂಗಡಿ, ಹೋಟೆಲ್, ಆಸ್ಪತ್ರೆ ಸೇರಿದಂತೆ ವ್ಯಾಪಾರ ವಹಿವಾಟು ನಡೆಸುವವರು ಶೇ.60 ರಷ್ಟು ಕನ್ನಡ ನಾಮಫಲಕ ಅಳವಡಿಸಬೇಕೆಂದು ಸರ್ಕಾರದ ನಿಯಮವಿದೆ. ಯಾರು ಪಾಲಿಸುತ್ತಿಲ್ಲ. ನಗರಸಭೆಯಿಂದ ಪರವಾನಗಿ ನೀಡುವಾಗ ಶೇ.60 ರಷ್ಟು ಕನ್ನಡ ಬಳಕೆಯಾಗಬೇಕೆಂದು ಕಡ್ಡಾಯಗೊಳಿಸಬೇಕು.
ಪರವಾನಗಿ ಪಡೆದಿರುವವರು ಶೇ.60 ರಷ್ಟು ಕನ್ನಡ ನಾಮಫಲಕವಾಕದೆ ಇಂಗ್ಲಿಷ್ ನಾಮಫಲಕಗಳನ್ನು ವೈಭವಿಕರಿಸುವವರಿಗೆ ದಂಡ ವಿಧಿಸಬೇಕು.
ಸಿ.ಸಿ. ಟಿ.ವಿ. ಅಳವಡಿಸದ ಕಾರಣ ಅಲ್ಲಲ್ಲಿ ಕಳ್ಳತನಗಳು ಜಾಸ್ತಿಯಾಗುತ್ತಿವೆ. ಸ್ವಚ್ಚತೆಗೂ ಆದ್ಯತೆ ನೀಡುತ್ತಿಲ್ಲವೆಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ನಗರಸಭೆ ವಿರುದ್ದ ಪೌರಾಯುಕ್ತರಿಗೆ ದೂರಿದರು.
ಕರುನಾಡ ವಿಜಯಸೇನೆ ಮಹಿಳಾಧ್ಯಕ್ಷೆ ವೀಣಗೌರಣ್ಣ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ನಗರಾಧ್ಯಕ್ಷ ಅವಿನಾಶ್, ವಿದ್ಯಾರ್ಥಿ ಘಟಕದ ಅಖಿಲೇಶ್, ಕಾರ್ಯದರ್ಶಿ ಜಗದೀಶ್, ಶಶಿ, ವಿಜಯಬಾಬು ಇವರುಗಳು ಈ ಸಂದರ್ಭದಲ್ಲಿದ್ದರು.






