ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 11 : ಸಾಹಸ ಸಿಂಹ ನಟ ಡಾ.ವಿಷ್ಣುವರ್ಧನ್‍ರವರ ಸಮಾಧಿಯನ್ನು ರಾತ್ರೋ ರಾತ್ರಿ ನೆಲಸಮ ಮಾಡಿರುವವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಿಷ್ಣು ಸೇನಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ನಾಗರಹಾವು ಚಿತ್ರದ ಮೂಲಕ ಐತಿಹಾಸಿಕ ಚಿತ್ರದುರ್ಗದ ಕೋಟೆಯನ್ನು ನಾಡಿನಾದ್ಯಂತ ಪರಿಚಯಿಸಿದ ಡಾ.ವಿಷ್ಣುವರ್ಧನ್‍ರವರ ಸಮಾಧಿಯನ್ನು ಕಿಡಿಗೇಡಿಗಳು ನೆಲಸಮ ಮಾಡಿರುವುದು ಕೋಟ್ಯಾಂತರ ಅಭಿಮಾನಿಗಳ ಮನಸ್ಸಿಗೆ ನೋವುಂಟಾಗಿದೆ. ಮರಣೋತ್ತರವಾಗಿ ವಿಷ್ಣುರವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿ ಸಮಾಧಿ ಸ್ಥಳದಲ್ಲಿ ಗೋಪುರ ಮರು ನಿರ್ಮಾಣವಾಗಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಆರ್.ರಮೇಶ್ ಮದಕರಿಪುರ, ಎ.ಸಾಧಿಕ್‍ವುಲ್ಲಾ, ಸಿ.ಯೋಗೇಶ್, ಎನ್.ರಾಮಪ್ಪ, ರವಿಕುಮಾರ್, ಮಣಿಕಂಠ, ಮಾದೇವಚಾರಿ, ಶಿವಲಿಂಗಪ್ಪ, ಶ್ರೀರಾಮ್, ಡಿ.ಕುಮಾರಸ್ವಾಮಿ, ಎಂ.ಡಿ.ಉಸ್ಮಾನ್ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.


