ಮಳೆಗಾಲದಲ್ಲಿ ನಿಮ್ಮ ಆರೋಗ್ಯದ ಕಾಳಜಿ ಹೀಗಿರಲಿ

1 Min Read

ಮಳೆಗಾಲ ಆರಂಭವಾಗಿದೆ. ಆದರೆ ಈ ಮಳೆಗಾಲದಲ್ಲಿ ಕಾಯಿಲೆಗಳು ಕೂಡ ಅಷ್ಟೇ ಸುಲಭವಾಗಿ ಬರಲಿದೆ. ನೆಗಡಿ, ಕೆಮ್ಮು ಅಂತ ಜೋರು ಆರೋಗ್ಯದ ಸಮಸ್ಯೆಗಳು‌ ಕಾಡುವುದಕ್ಕೆ ಶುರುವಾಗುತ್ತೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ.

ಗಿಡಮೂಲಿಕೆಗಳ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಹಿತ್ತಲಲ್ಲೇ ಬೆಳೆದ ಗಿಡಮೂಲಿಕೆಗಳಲ್ಲಿ ಆರೋಗ್ಯಕ್ಕೆ ಔಷಧಿ ಸಿಗಲಿದೆ. ಅದರಲ್ಲೂ ತುಳಸಿಯನ್ನು ಬಳಕೆ ಮಾಡುವುದರಿಂದ ಒಂದಷ್ಟು ರೋಗನಿರೋಧಕ ಶಕ್ತಿ ಸಿಗಲಿದೆ. ಆಂಟಿವೈರಲ್ ಮತ್ತು ಆಂಟಿಫಂಗಲ್ ಗುಣಲಕ್ಷಣವನ್ನು ಹೊಂದಿದೆ. ಇದು ಮಾನ್ಸೂನ್ ನಿಂದ ಬರುವ ವೈರಸ್ ಅನ್ನು‌ ನಿಯಂತ್ರಿಸುತ್ತದೆ.

ಶುಂಠಿ ಕೂಡ ಮತ್ತಷ್ಟು ರೋಗ ನಿರೋಧಕ ಶಕ್ತಿ ಹೊಂದಿದೆ.ಶಿತ, ಕೆಮ್ಮು, ನೆಗಡಿ, ಜ್ವರಕ್ಕೆ ಇದರಿಂದ ಮುಕ್ತಿ ಸಿಗಲಿದೆ. ಶುಂಠಿ ಚಹಾ ಸೇವನೆಯಿಂದಾನು ಜೀರ್ಣಕ್ರಿಯೆಯ ಸಲೀಸಾಗುತ್ತದೆ. ತಂಪಾದ ವಾತಾವರಣದಲ್ಲಿ ದೇಹವನ್ನಹ ಬಿಸಿಯಾಗಿಡುತ್ತದೆ.

ದೇಹವನ್ನು ನಿರ್ವಿಷಗೊಳಿಸಲು ಮತ್ತು ಮಲೇರಿಯಾ, ಡೆಂಗ್ಯೂ ಮತ್ತು ಜ್ವರದಂತಹ ಮಾನ್ಸೂನ್-ಸಂಬಂಧಿತ ಸೋಂಕುಗಳಿಂದ ನಿಮ್ಮನ್ನು ರಕ್ಷಿಸಲು ಬೇವು ಕೂಡ ಸಹಾಯ ಮಾಡುತ್ತದೆ.

ಅಮಲಕಿ (ನೆಲ್ಲಿಕಾಯಿ), ಬಿಭಿಟಕಿ ಮತ್ತು ಹರಿತಕಿ. ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕ ಮತ್ತು ನಿರ್ವಿಶೀಕರಣವಾಗಿ ಕಾರ್ಯನಿರ್ವಹಿಸುತ್ತದೆ. ತ್ರಿಫಲ ಪುಡಿಯನ್ನು ಬೆಚ್ಚಗಿನ ನೀರಿನಲ್ಲಿ ಸೇರಿಸಿಕೊಂಡು ಸೇವಿಸುವುದರಿಂದ ಮಳೆಗಾಲದಲ್ಲಿ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಬಹುದು.

Share This Article
Leave a Comment

Leave a Reply

Your email address will not be published. Required fields are marked *