Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಮತ್ತು ಪಿಎಂ ಸ್ವನಿಧಿ ಯೋಜನೆಯ ಅನುಕೂಲ ಪಡೆಯಿರಿ : ಮಾಜಿ ಸಚಿವ ರಾಮದಾಸ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ. (ನ. 03) : ಕೇಂದ್ರ ಸರ್ಕಾರ ಬಡವರಿಗಾಗಿ ನೀಡಿರುವ ವಿವಿಧ ರೀತಿಯ ಯೋಜನೆಗಳ ಫಲವನ್ನು ಪಡೆಯುವುದರ ಮೂಲಕ ನಿಮ್ಮ ಅರ್ಥಿಕ ಅಭಿವೃದ್ದಿಯನ್ನು ಮಾಡಿಕೊಳ್ಳುವಂತೆ ಮಾಜಿ ಸಚಿವರಾದ ರಾಮದಾಸ್ ಮನವಿ ಮಾಡಿದ್ದಾರೆ.

ನಗರದ ಜಗಲೂರು ಮಹಾಲಿಂಗಪ್ಪ ಕನ್ವೆನ್ಷನ್ ಹಾಲ್‌ನಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರದಾನ ಮಂತ್ರಿ ವಿಶ್ವಕರ್ಮ ಯೋಜನೆ ಮತ್ತು ಪಿಎಂ ಸ್ವನಿಧಿ ಯೋಜನೆಯ ಕುರಿತು ಮಾತನಾಡಿದ ಅವರು, ಬೇರೆ ಸರ್ಕಾರಗಳು ಯೋಜನೆಯನ್ನು ಜಾರಿ ಮಾಡುತ್ತಿದ್ದವು ಆದರೆ ಅನುಷ್ಠಾನವಾಗುತ್ತಿರಲಿಲ್ಲ, ಆದರೆ ನಮ್ಮ ಪ್ರಧಾನಮಂತ್ರಿ ಮೋದಿಯವರು ಯೋಚನೆಯನ್ನು ಮಾಡುವುದರ ಮೂಲಕ ಎಲ್ಲರಿಗೂ ಸಹಾ ಒಳ್ಳೆದಾಗುವ ರೀತಿಯಲ್ಲಿ ಯೋಜನೆಯನ್ನು ಜಾರಿ ಮಾಡುತ್ತಿದ್ದಾರೆ. ಇದರ ಲಾಭವನ್ನು ಪಡೆಯಬೇಕಿದೆ ಎಂದರು.

ಪಿಎಂ ಸ್ವನಿಧಿ ಯೋಜನೆಯು ಸಣ್ಣ ಪ್ರಮಾಣದ ವ್ಯಾಪಾರಸ್ಥರಿಗಾಗಿಯೇ ಆರಂಭ ಮಾಡಲಾಗಿದೆ. ಇದರಲ್ಲಿ ರಸ್ತೆ ಬದಿಯಲ್ಲಿ ವ್ಯಾಪಾರವನ್ನು ಮಾಡುವವರಿಗಾಗಿ ಇದನ್ನು ಜಾರಿ ಮಾಡಲಾಗಿದೆ ಪ್ರಾರಂಭದಲ್ಲಿ ಅರ್ಜಿಯನ್ನು ಹಾಕುವುದರ ಮೂಲಕ ಸದಸ್ಯರಾಗಿ 10 ಸಾವಿರ ರೂಗಳನ್ನು ಯಾವುದೇ ಗ್ಯಾರೆಂಟಿ ಇಲ್ಲದ ಪಡೆಯಬಹುದಾಗಿದೆ.

ಇದನ್ನು ತೀರಿಸಿದ ನಂತರ ಮತ್ತಷ್ಟು ಹೆಚ್ಚಿನ ಹಣವನ್ನು ನೀಡಲಾಗುತ್ತದೆ 50 ಸಾವಿರಕ್ಕೆ ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಡಿ ಸಾಲವನ್ನು ಗ್ಯಾರೆಂಟಿ ಇಲ್ಲದೆ ಪಡೆಯಬಹುದಾಗಿದೆ ಎಂದ ಅವರು,  ಈ ಯೋಜನೆಯನ್ನು ಕರ್ನಾಟಕದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಪ್ರಧಾನ ಮಂತ್ರಿಗಳು ನನ್ನನ್ನು ಸಂಚಾಲಕರನ್ನಾಗಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಪ್ರವಾಸ ಮಾಡುವುದರ ಮೂಲಕ ಯೋಜನೆಯ ಅನುಷ್ಠಾನಕ್ಕೆ ಪ್ರಯತ್ನ ಮಾಡುತ್ತಿದ್ದು ಇದರ ಬಗ್ಗೆ ಮಾಹಿತಿಯನ್ನು ಸಹಾ ನೀಡಲಾಗುತ್ತಿದೆ ಎಂದರು.

ಪಿಎಂ ಸ್ವನಿಧಿ ಯೋಜನೆಯಲ್ಲಿ ಪತ್ರಿಕೆಯನ್ನು ಹಾಕುವವರು, ಮನೆಗಳಿಗೆ ಹಾಲನ್ನು ಹಾಕುವವರು, ಅಡುಗೆ ಮಾಡುವವರು ಬಡಿಸುವವರು, ಇಸ್ತ್ರಿಯನ್ನು ಮಾಡುವವರು, ಬಟ್ಟೆಯನ್ನು ಒಗೆಯುವವರು ಚಂದಿಯನ್ನು ಆಯುವವರು ಸೇರಿದಂತೆ ಇತರೆ ಹಲವಾರು ಜನರನ್ನು ಈ ಯೋಜನೆಯಡಿಯಲ್ಲಿ ಸೇರಿಸಲಾಗಿದೆ. ಈ ರೀತಿಯ ಯೋಜನೆ ಜಾರಿ ಮಾಡಿರುವುದು ದೇಶದಲ್ಲಿಯೇ ಪ್ರಥಮವಾಗಿದೆ. ಕೇಂದ್ರ ಸರ್ಕಾರ ನೀಡುವ 10 ಸಾವಿರಕ್ಕೆ ಶೇ.7 ರಷ್ಟು ಬಡ್ಡಿಯನ್ನು ಕೇಂದ್ರ ಸರ್ಕಾರವೇ ನೀಡಲಿದೆ. ಉಳಿದ ಬಡ್ಡಿಯನ್ನು ಫಲಾನುಭವಿಗಳು ನೀಡಬೇಕಿದೆ. ಇದರೊಂದಿಗೆ ತಲಾ 2 ಲಕ್ಷದವರೆಗೆ ಜೀವನ ವಿಮಾ, ಜೀವನ ರಕ್ಷಾ  ಮಾತೃ ವಂದನಾ ಈ ಯೋಜನೆಯ ಮಹಿಳಾ ಫಲಾನುಭವಿಗಳು ಗರ್ಭೀಣಿಯಾದರೆ 5000 ರೂ.ಗಳನ್ನು ನೀಡುವುದ್ದಲ್ಲದೆ ಮಗುವಿನ ಸುರಕ್ಷೆಗಾಗಿ ಯೋಜನೆಯೂ ಸಿಗಲಿದೆ. 60 ವರ್ಷ ಆದವರಿಗೆ ತಲಾ 3000 ರೂ ಪೆನ್‌ಷನ್ ಸಿಗಲಿದೆ. ಈ ಯೋಜನೆಯಡಿ ಸ್ಥಳೀಯ ಸಂಸ್ಥೆಗಳಿಂದ ಅರ್ಹತಾ ಪತ್ರವನ್ನು ಪಡೆದವರಿಗೆ ಬ್ಯಾಂಕ್‌ಗಳು ಸಾಲವನ್ನು ನೀಡಲು ನಿರಾಕರಿಸುವಂತಿಲ್ಲ  ಎಂದು ರಾಮದಾಸ್ ತಿಳಿಸಿದರು.

ಪ್ರಧಾನ ಮಂತ್ರಿಗಳು ಡಿಜಿಟಲ್ ಇಂಡಿಯಾವನ್ನು ಪ್ರೇರೇಪಿಸುತ್ತಿದ್ದಾರೆ ನಮ್ಮೆಲ್ಲಾ ಹಣದ ವ್ಯವಹಾರವನ್ನು ಮೊಬೈಲ್ ಮೂಲಕವೇ ಮಾಡುವುದಕ್ಕೆ ತಿಳಿಸಿದ್ದಾರೆ ಇದಕ್ಕೆ ಪ್ರೋತ್ಸಾಹವಾಗಿ ವ್ಯವಹಾರ ಮಾಡಿದವರಿಗೆ 100 ರೂ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರ ತನ್ನ ಎಲ್ಲಾ ಯೋಜನೆಗಳಿಗೆ ರಾಜ್ಯ ಸರ್ಕಾರಗಳಿಗೆ ಹಣವನ್ನು ನೀಡಿದೆ ಅಲ್ಲಿಂದ ಫಲಾನುಭವಿಗಳಿಗೆ ಹಣವನ್ನು ನೀಡಬೇಕಿದೆ ಆದರೆ ಇಲ್ಲ ಸರ್ವರ್ ಸಮಸ್ಯೆ ಎದುರಾಗಿದೆ ಕೇಂದ್ರದಿಂದ ರಾಜ್ಯ ಸರ್ಕಾರಗಳಿಗೆ ಹಣ ಬರುವಾಗ ಇರದ ಸರ್ವರ್ ಸಮಸ್ಯೆ ರಾಜ್ಯದ ಫಲಾನುಭವಿಗಳಿಗೆ ಹಣವನ್ನು ಹಾಕುವಾಗ ಸರ್ವರ ಸಮಸ್ಯೆ ಬರುತ್ತದೆ ಎಂದರೆ ನೀವೇ ಅರ್ಥ ಮಾಡಿಕೊಳ್ಳಿ ಪ್ರಧಾನ ಮಂತ್ರಿಗಳ ಈ ಯೋಜನೆಯನ್ನು ಅನುಷ್ಠಾನ ಮಾಡಲು ಇಷ್ಟ ಇಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿಯವರು ಮಾತನಾಡಿ, ನರೇಂದ್ರ ಮೋದಿಯವರು ದೇಶದ ಪ್ರಧಾನ ಮಂತ್ರಿಗಳಾದ ಮೇಲೆ ದೇಶದ ಪ್ರಗತಿ ಹೆಚ್ಚಾಗಿದೆ. ವಿವಿಧ ರೀತಿಯ ಯೋಜನೆಗಳನ್ನು ಜಾರಿ ಮಾಡುವುದರ ಮೂಲಕ ದೇಶದ ಜನತೆಗೆ ಸಹಾಯವನ್ನು ಮಾಡಿದ್ದಾರೆ. ಒಂದು ಕಾಲದಲ್ಲಿ ನಮ್ಮ ದೇಶವನ್ನು ಕೀಳಾಗಿ ಕಾಣುತ್ತಿದ್ದವರು ಇಂದು ನಮ್ಮ ಸಹಾಯವನ್ನು ಬೇಡುತ್ತಿದ್ದಾರೆ. ಇದಕ್ಕೆ ಇಸ್ರೇಲ್ ಯುದ ಉದಾಹರಣೆಯಾಗಿದೆ. ಇದುವರೆವಿಗೂ ದೇಶವನ್ನಾಳಿದ ಯಾವ ಪಕ್ಷಗಳು ಸರ್ಕಾರಗಳು ಸಹಾ ಇಂತಹ ಹಲವಾರು ಯೋಜನೆಯನ್ನು ನೀಡಿಲ್ಲ ಮೋದಿಯವರು ದೇಶದ ಎಲ್ಲರ ಬಗ್ಗೆಯೂ ಸಹಾ ಯೋಚನೆಯನ್ನು ಮಾಡುವುದರ ಮೂಲಕ ಅವರಿಗೆ ನೆರವಾಗಿದ್ದಾರೆ ಎಂದರು.
ಕಳೆದ 9ವರೆ ವರ್ಷದಲ್ಲಿ ಮೋದಿಯವರು ವಿವಿಧ ರೀತಿಯ ಕಾರ್ಯಕ್ರಮಗಳನ್ನು ನೀಡಿದ್ದಾರೆ ಹಲವಾರು ಜನತೆ ಇದರ ಲಾಭವನ್ನು ಪಡೆದಿದ್ದಾರೆ ಮತ್ತೇ ಕೆಲವರಿಗೆ ಇದನ್ನು ಪಡೆಯುವ ರೀತಿ ಗೋತ್ತಿಲ್ಲದೆ ಸುಮ್ಮನಿದ್ದಾರೆ. ದೇಸದ ಪ್ರತಿಯೊಬ್ಬರಿಗೂ ಸಹಾ ಮೋದಿಯವರು ಬ್ಯಾಂಕ್ ಖಾತೆಗಳನ್ನು ತೆಗೆಸುವುದರ ಮೂಲಕ ಉಳಿತಾಯದ ಮನೋಭಾವವನ್ನು ಮೂಡಿಸಿದ್ದಾರೆ. ಕೇಂದ್ರ ಸರ್ಕಾರ ಫಲಾನುಭವಿಗೆ ನೀಡಿ ಹಣ ಪೂರ್ಣ ಪ್ರಮಾಣದಲ್ಲಿ ಫಲಾನುಭವಿಗೆ ತಲುಪುತ್ತದೆ ಬೇರೆ ಸರ್ಕಾರಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಫಲಾನುಭವಿಗೆ ಹಣ ತಲುಪುತ್ತಿತ್ತು. ಪ್ರಪಂಚದಲ್ಲಿ ಬೇರೆ ದೇಶಗಳು ನಮ್ಮ ದೇಶವನ್ನು ನೋಡುವಂತೆ ಮಾಡಿದ್ದಾರೆ ಎಂದು ತಿಪ್ಪಾರೆಡ್ಡಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷರಾದ ಎ.ಮುರಳಿ ವಹಿಸಿದ್ದರು. ಮಾಜಿ ಶಾಸಕ ನೆ.ಲಾ.ನರೇಂದ್ರಬಾಬು, ಬಿಜೆಪಿ ಮುಖಂಡರಾದ ರಘುಚಂದನ್, ಮಾಧುರಿ ಗೀರಿಶ್, ರಾಮದಾಸ್, ಲಕ್ಷ್ಮೀಕಾಂತ್, ಪ್ರಧಾನ ಕಾರ್ಯದರ್ಶಿ ನರೇಂದ್ರ, ಶಿವಣ್ಣಚಾರ್, ನಾಗರಾಜ್ ಬೇದ್ರೇ, ಸಂಪತ್ ಕುಮಾರ್, ಕಲಂ ಸೀತಾರಾಮರೆಡ್ಡಿ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸತತ ಏರಿಕೆಯತ್ತ ಸಾಗುತ್ತಿದೆ ಚಿನ್ನದ ಬೆಲೆ : ಇಂದಿನ ದರ ಹೀಗಿದೆ..!

ಚಿನ್ನದ ಬೆಲೆ ಇಳಿಕೆಯಾಯ್ತು ಎಂದು ಖುಷಿ ಪಡುತ್ತಿರುವಾಗಲೇ ಇದೇನಿದು ಒಂದೇ ಸಮನೇ ಏರುತ್ತಲೇ ಇದೆ. ಅದರಲ್ಲೂ 70-80 ರೂಪಾಯಿ ಏರುತ್ತಿದೆ. ಇಂದು ಕೂಡ ಚಿನ್ನದ ದರ ಏರಿಕೆಯಾಗಿದ್ದು, 70 ರೂಪಾಯಿ ಗ್ರಾಂಗೆ ಜಾಸ್ತಿಯಾಗಿದೆ. ಈ

ಚಿತ್ರದುರ್ಗ | ಯೋಗೀಶ್ ಸಹ್ಯಾದ್ರಿ ಬಿಜೆಪಿ ಸೇರ್ಪಡೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ನ. 22 : ಉಪನ್ಯಾಸಕರು ಹಾಗೂ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿ, ಅಧ್ಯಕ್ಷರಾದ ಯೋಗೀಶ್ ಸಹ್ಯಾದ್ರಿಯವರು ಬಿಜೆಪಿ

ನವೆಂಬರ್ 26 ರಿಂದ 28 ರವರೆಗೆ ಭ್ರಷ್ಟಾಚಾರ ತಡೆಯಲು ಉಪವಾಸ ಸತ್ಯಾಗ್ರಹ : ಎಎಪಿ ಜಗದೀಶ್

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ನ. 22 : ಇತ್ತೀಚಿನ ದಿನಮಾನದಲ್ಲಿ ಎಲ್ಲಡೆ ಭ್ರಷ್ಠಾಚಾರ ತುಂಬಿ ತುಳುಕಾಡುತ್ತಿದೆ, ಇದನ್ನು ತಡೆಯುವ ಸಲುವಾಗಿ ಭ್ರಷ್ಠಾಚಾರ

error: Content is protected !!