ತೈವಾನ್ : ಚೀನಾ ಮತ್ತೊಮ್ಮೆ ತೈವಾನ್ ವಿರುದ್ಧ ಬಲಪ್ರದರ್ಶನಕ್ಕೆ ಮುಂದಾಗಿದೆ. ಭಾನುವಾರ ತಮ್ಮ ಯುದ್ಧವಿಮಾನಗಳನ್ನು ತೈವಾನ್ ವಾಯುಪ್ರದೇಶಕ್ಕೆ ನುಗ್ಗಿಸಿವೆ. ತೈವಾನ್ ರಕ್ಷಣಾ ಸಚಿವಾಲಯದ ಪ್ರಕಾರ, ಚೀನಾದ ಒಟ್ಟು 27 ವಿಮಾನಗಳು ಬಫರ್ ವಲಯವನ್ನು ಪ್ರವೇಶಿಸಿವೆ. ನಮ್ಮ ಯುದ್ಧ ವಿಮಾನಗಳ ಮೂಲಕ ಎಚ್ಚರಿಕೆ ನೀಡಿದಾಗ ಚೀನಾದ ವಿಮಾನಗಳು ಪೆಸಿಫಿಕ್ ಸಾಗರದ ಮೂಲಕ ಹಿಂದಿರುಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ವರ್ಷದಿಂದ ತೈವಾನ್ ಮೇಲೆ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸುತ್ತಾ, ಚೀನಾ ಒತ್ತಡವನ್ನು ಹೆಚ್ಚಿಸುತ್ತಿದೆ. ಕಳೆದ ನಾಲ್ಕು ದಿನಗಳಿಂದ 150ಕ್ಕೂ ಹೆಚ್ಚು ಯುದ್ಧ ವಿಮಾನಗಳು ತೈವಾನ್ ಮೇಲೆ ಹಾರಿವೆ. ಮತ್ತೊಂದೆಡೆ, ತೈವಾನ್ ತನ್ನ ಭೂಪ್ರದೇಶದ ಅವಿಭಾಜ್ಯ ಅಂಗವಾಗಿದೆ ಮತ್ತು ಆ ದೇಶವನ್ನು ಸಂಪೂರ್ಣವಾಗಿ ನಮ್ಮ ವಶಕ್ಕೆ ಪಡೆಯಲಾಗುತ್ತದೆ. ಸಂದರ್ಭ ಬಂದರೆ ಸೈನ್ಯಿಕ ಕಾರ್ಯಾಚರಣೆಗೂ ಬದ್ದ ಎಂದು ಚೀನಾ ಹೇಳುತ್ತಿದೆ.