ಚಳ್ಳಕೆರೆ, (ಮೇ.27): ನಗರದ ಬಿಇಓ ಕಚೇರಿ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಗುರುವಾರ ಗ್ಯಾಸ್ ಸೋರಿಕೆಯಾಗಿ ಅವಘಡ ಸಂಭವಿಸಿದ್ದು
ಮೂವರು ಅಡುಗೆ ಸಿಬ್ಬಂದಿಗೆ ಗಾಯಗಳಾಗಿ ಪ್ರಾಣಪಾಯದಿಂದ ಪಾರಾಗಿದ್ದರು.
ಅಡುಗೆ ತಯಾರಿಸುವಾಗ ಗ್ಯಾಸ್ ಪೈಪ್ ನಲ್ಲಿ ಸೋರಿಕೆಯಾಗಿ ಮೂವರ ಬಟ್ಟೆಗಳಿಗೆ ಬೆಂಕಿ ಹತ್ತಿಕೊಂಡಿದ್ದು, ಅಲ್ಲಿದ್ದವರು ಬೆಂಕಿ ನಂದಿಸಿ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಈ ಘಟನೆ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ ಇಂದಿರಾ ಕ್ಯಾಂಟಿನ್ ಗೆ ಭೇಟಿ ನೀಡಿ ಪರಶೀಲಸಿದರು. ನಂತರ ಗಾಯಳುಗಳನ್ನು ಮಾತನಾಡಿಸಿ ಅರೋಗ್ಯ ವಿಚಾರಿಸಿ ಮಾತನಾಡಿದರು. ಬಡವರಿಗೆ,ಕಾರ್ಮಿಕರಿಗೆ,ಶಾಲೆ ಮಕ್ಕಳಿಗೆ ಅನುಕೂಲವಾಗಲೆಂದು ಇಂದಿರಾ ಮಾಡಿಲಾಗಿದ್ದು ಈ ಕ್ಯಾಂಟಿನ್ ನಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು,ತಿಂಡಿ ಹಾಗೂ ಊಟ ಸ್ವಚ್ಚವಾಗಿ ರುಚಿಯಾಗಿ ಮಾಡಿಬೇಕು .
ಅಡಿಗೆ ತಯಾರು ಮಾಡುವಾಗ ಎಚ್ಚರ ವಹಿಸಬೇಕು.ಗ್ಯಾಸ್ ನಿಂದ ಅಡುಗೆ ತಯಾರು ಮಾಡುತ್ತಿರುವವರು ಗ್ಯಾಸ್ ಬಳಕೆ ಹಾಗೂ ಅದರ ನಿರ್ವಹಣೆ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ .
ಇಲ್ಲವಾದರೆ ಕಾರ್ಮಿಕರು ತೊಂದರೆ ಅನುಭವಿಸುವಂತಾಗುತ್ತದೆ. ನಿನ್ನೆ ಆಗಿರುವ ಘಟನೆ ವಿಷಾದನೀಯ ಆದರೆ ಸದ್ಯ ಸಣ್ಣ ಅವಘಡದಲ್ಲೆ ಮುಗಿದಿದೆ. ಇಂತಹ ಅವಘಡಗಳು ಪುನಃ ಸಂಭವಿಸದಂತೆ ಇಲ್ಲಿನ ವ್ಯವಸ್ಥಾಪಕರು ನೋಡಿಕೊಳ್ಳಬೇಕಾಗುತ್ತದೆ. ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಅಲ್ಲಿಗೆ ತಿಂಡಿ ತಿನ್ನಲು ಬಂದವರಲ್ಲಿ ರುಚಿ ಮತ್ತು ಶುಚಿಯ ಬಗ್ಗೆ ವಿಚಾರಿಸಿದರು.