Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದೇವಸ್ಥಾನದ ಹತ್ತು ವರ್ಷಗಳ ವಿವಾದಕ್ಕೆ ಇಂದು ತೆರೆ ಎಳೆದ ತಹಶೀಲ್ದಾರ್ ಎನ್. ರಘುಮೂರ್ತಿ

Facebook
Twitter
Telegram
WhatsApp

ಚಳ್ಳಕೆರೆ, (ಏ.21) : ತಾಲೂಕು ತಳುಕು ಹೋಬಳಿ ದೊಡ್ಡಬಾತಿ ಹಳ್ಳಿ ಗ್ರಾಮದ ಪಾತಲಿಂಗೇಶ್ವರ ಸ್ವಾಮಿ ದೇವಸ್ಥಾನದ ಹತ್ತು ವರ್ಷಗಳ ವಿವಾದಕ್ಕೆ ಇಂದು ತಹಶೀಲ್ದಾರ್ ನೇತೃತ್ವದಲ್ಲಿ ತೆರೆ ಎಳೆಯಲಾಯಿತು.

ಇಲ್ಲಿನ ಪಾತಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರ ನಡುವೆ ಇವರ ವಿವಾದವಿತ್ತು. ಕಳೆದ ಎಂಟು ವರ್ಷಗಳಿಂದ ದೇವಸ್ಥಾನದ ಹುಂಡಿಯನ್ನು ತೆರೆದಿರಲಿಲ್ಲ. ಹಲವಾರು ಹಿರಿಯ  ಗ್ರಾಮಸ್ಥರುಗಳು ತಾಲೂಕು ಕಚೇರಿಗೆ ಭೇಟಿ ನೀಡಿ ತಹಶೀಲ್ದಾರ್ ಅವರನ್ನು ಭೇಟಿ ಮಾಡಿ ಆಂಧ್ರಪ್ರದೇಶದ ಬಹುತೇಕ ಗ್ರಾಮಗಳಲ್ಲಿ ಈ ದೇವರ ಭಕ್ತಾದಿಗಳಿದ್ದು ದೇವರ ಪೂಜಾ ಕೈಂಕರ್ಯಗಳು ಮತ್ತು ಜಾತ್ರಾಮಹೋತ್ಸವದ ವಿಧಿ ವಿಧಾನಗಳು ವಿವಾದದಿಂದ ತೊಡಕಾಗಿತ್ತು.

ಆದಷ್ಟು ಬೇಗ ದೇವಸ್ಥಾನಕ್ಕೆ ಭೇಟಿ ನೀಡಿ ಈ ವಿವಾದವನ್ನು ಬಗೆಹರಿಸುವಂತೆ ತಹಶೀಲ್ದಾರ್ ಅವರಿಗೆ ಮನವಿ ಮಾಡಲಾಗಿತ್ತು.
ಸದರಿ ಮನವಿಯನ್ನು ತಹಶೀಲ್ದಾರ್ ರಘುಮೂರ್ತಿ ಯವರು ಪರಿಶೀಲಿಸಿ ಹಿಂದೂ ಗ್ರಾಮಕ್ಕೆ ಭೇಟಿ ನೀಡಿ ಇಡೀ ಊರಿನ ಗ್ರಾಮಸ್ಥರನ್ನು ಒಂದೆಡೆ ಸೇರಿಸಿ ವಿವಾದದ ಕುರಿತು ವಿಸ್ತೃತ ಚರ್ಚೆ ನಡೆಸಿ ಗ್ರಾಮಸ್ಥರ ಮನವೊಲಿಸಲಾಗಿದೆ.

ಇರುವಂತಹ ಆಡಳಿತ ಮಂಡಳಿಯನ್ನು ಬರ್ಖಾಸ್ತುಗೊಳಿಸಿ ಹೊಸ ಆಡಳಿತ ಮಂಡಳಿಯನ್ನು ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಅಭಿಪ್ರಾಯದಂತೆ ರಚಿಸಲಾಗುವುದು ಹಾಗೂ ಸುಮಾರು 10 ವರ್ಷಗಳಿಂದ ಹುಂಡಿಯನ್ನು ತೆರೆಯದೆ ಇರುವುದರಿಂದ ಮುಂಡಿಯಲ್ ಇರುವಂತಹ ಹಣ ಮುಕ್ತಾ ಗಿರಬಹುದು ಆದ್ದರಿಂದ ಇಂದೆ ಹುಂಡಿಯನ್ನು ತೆರೆಯಲು ಗ್ರಾಮಸ್ಥರನ್ನು ಒಲಿಸಿ ಕಾಣಿಕೆ ಕುಂಡಿ ತೆರೆಯಲಾಯಿತು.

ಗ್ರಾಮಸ್ಥರ ಸಮಕ್ಷಮದಲ್ಲಿ ಹುಂಡಿ ಎಣಿಕೆ ಕಾರ್ಯ ಭರದಿಂದ ಸಾಗಿದೆ. ಮುಂದಿನ ಸಮಿತಿಯನ್ನು ರಚಿಸುವ ವರೆಗೆ ಗ್ರಾಮದಲ್ಲಿ ಸಾಮರಸ್ಯ ಕಾಪಾಡಿಕೊಳ್ಳುವಂತೆ ದೇವರ ಪೂಜಾಕೈಂಕರ್ಯ ಗಳಿಗೆ ಯಾವುದೇ ತೊಂದರೆ ಆಗದಂತೆ ಮತ್ತು ದೇವಸ್ಥಾನದ ವಶದಲ್ಲಿ ಇರುವಂತಹ ಎಲ್ಲಾ ಒಡವೆ ವೈಢೂರ್ಯಗಳನ್ನು ಮುಂದಿನ ಆಡಳಿತ ಮಂಡಳಿ ರಚಿಸುವ ವೇಳೆಯಲ್ಲಿ ಯಾರ್ಯಾರ ಬಳಿ ಇದೆಯೋ ಒಡವೆಗಳನ್ನು ಹಾಜರುಪಡಿಸುವಂತೆ ಎಲ್ಲರಿಗೂ ತಿಳಿ ಹೇಳಿದರು.

ಇದಕ್ಕೆ ಗ್ರಾಮಸ್ಥರುಗಳು ಒಪ್ಪಿಗೆ ಸೂಚಿಸಿ ತಹಶೀಲ್ದಾರ್ ಮತ್ತು ತಾಲೂಕು ದಂಡಾಧಿಕಾರಿಗಳು ಸೂಚಿಸುವಂತೆ ಗ್ರಾಮಸ್ಥರೆಲ್ಲ ನಡೆದುಕೊಳ್ಳುವುದಾಗಿ ಭರವಸೆ ನೀಡಿದರು. ಒಟ್ಟು ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿ ಸಂಭ್ರಮ ಮನೆಮಾಡಿತ್ತು.

ಪರಶುರಾಂಪುರ ಪೊಲೀಸ್ ಉಪನಿರೀಕ್ಷಕ ರಾದ ಶ್ರೀಮತಿ ಸ್ವಾತಿ, ಮುಖಂಡರಾದ ಪಾತಪ್ಪನಗುಡಿ ಚಿತ್ರಪ್ಪನರಸಿಂಹ ಮೂರ್ತಿ,  ಪೊಲೀಸ್ ಮತ್ತು ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದಿನಪತ್ರಿಕೆಗಳಲ್ಲಿ ಕಟ್ಟಿಕೊಡುವ ಬಿಸಿ ತಿಂಡಿ ತಿಂದ್ರೆ ಕ್ಯಾನ್ಸರ್ ಬರುತ್ತೆ ಎಚ್ಚರ..!

ಪ್ಲಾಸ್ಟಿಕ್ ಕವರ್ ಅನ್ನು ಬ್ಯಾನ್ ಮಾಡಿ ಬಹಳ ವರ್ಷಗಳೇ ಕಳೆದಿವೆ. ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಮನುಷ್ಯನ ಆರೋಗ್ಯಕ್ಕೆ ಖಂಡಿತ ಕುತ್ತು ಬರಲಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೊಟೇಲ್ ಗಳಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ, ಈ ಪಂಚ ರಾಶಿಗಳ ಮದುವೆ ವಿಳಂಬವೇ? ಶನಿವಾರ ರಾಶಿ ಭವಿಷ್ಯ -ಏಪ್ರಿಲ್-27,2024 ಸೂರ್ಯೋದಯ: 05:56, ಸೂರ್ಯಾಸ್ತ : 06:31 ಶಾಲಿವಾಹನ

ಆ ಕುಗ್ರಾಮ ಒಂದರಲ್ಲೇ 100% ಮತದಾನ : ಎಲ್ಲಿ, ಎಷ್ಟೆಷ್ಟು ಮತದಾನವಾಗಿದೆ..?

ಬೆಂಗಳೂರು: ಇಂದು ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆದಿದೆ. ಬೆಳಗ್ಗೆ 7 ಗಂಟೆಗೆ ಶುರುವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. ಬೇಸರದ ಸಂಗತಿ ಎಂದರೆ ಈ ಬಾರಿಯೂ ಸಂಪೂರ್ಣ ಮತದಾನವಾಗಿಲ್ಲ. ಪ್ರತಿ

error: Content is protected !!