ಗ್ರಾಮದಲ್ಲಿ ಸಾಮರಸ್ಯ ಮೂಡಿಸಿದ ತಹಶೀಲ್ದಾರ್ ಎನ್ .ರಘುಮೂರ್ತಿ

1 Min Read

ಚಳ್ಳಕೆರೆ : ಡಾ.ಬಿ.ಆರ್.   ಅಂಬೇಡ್ಕರ್ ಆಶಯದಂತೆ ಗ್ರಾಮಗಳಲ್ಲಿ ಸಾಮರಸ್ಯ ಮೂಡಲು ಎಲ್ಲರೂ ಹೊಂದಾಣಿಕೆಯಿಂದ ಪ್ರತಿಯೊಬ್ಬರು ಅಣ್ಣತಮ್ಮರಂತೆ ಜೀವನಡೆಸಬೇಕು ಎಂದು ಹೇಳಿದರು.

ತಾಲ್ಲೂಕಿನ ಕಾಲುವೆಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಯಾದಲಗಟ್ಟೆ ಗ್ರಾಮದಲ್ಲಿ  ಕ್ಷೌರಿಕರೊಬ್ಬ ಪರಿಶಿಷ್ಟ ಸಮುದಾಯಕ್ಕೆ ಕ್ಷೌರ ಮಾಡುವುದಿಲ್ಲ ಎಂದು ಹೇಳಿದ್ದ ಕಾರಣದಿಂದಾಗ  ಗ್ರಾಮದಲ್ಲಿ ಬಿಗುವಿನ ವಾತವರಣ ಸೃಷ್ಟಿಯಾಗಿತ್ತು.

ಈ ವಿಷಯವಾಗಿ ಸಾಮಾಜಿಕ ಜಾಲತಾಣದಲ್ಲಿ  ವಿಡಿಯೋಗಳು ಹರಿದಾಡಿದ್ದವು. ಈ ವಿಷಯ ಜಿಲ್ಲಾಧಿಕಾರಿ  ಕವಿತ ಎಸ್. ಮನ್ನಿಕೇರಿ ಅವರ ಗಮನಕ್ಕೆ ಬಂದಿದ್ದು, ಅವರ ಸೂಚನೆ ಮೇರೆಗೆ ತಹಶೀಲ್ದಾರ್ ಎನ್. ರಘುಮೂರ್ತಿ  ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಆಗಮಿಸಿ ವಸ್ತು ಸ್ಥಿತಿಯನ್ನು ಕ್ಷೌರಿಕ  ಶ್ರೀನಿವಾಸ್ ಅವರಿಗೆ ಮನವರಿಕೆ ಮಾಡಿಕೊಟ್ಟರು.

ಕುಲಕಸಬು ಮಾಡಲು ಮನುಷ್ಯ ರೀತಿಯಲ್ಲಿ ನೋಡಬೇಕೇ ವಿನಃ ಇಲ್ಲಿ ಬೇಧ ಭಾವ ಮಾಡಬಾರದು ಎಂದು ಕ್ಷೌರಿಕನಿಗೆ ತಿಳಿ ಹೇಳಿ ಸ್ಥಳದಲ್ಲಿಯೇ ದಲಿತ ಸಮುದಾಯದವರಿಗೆ ಕ್ಷೌರ ಮಾಡಿಸು ಮೂಲಕ ಸಮಸ್ಯೆ ಪರಿಹರಿಸಿ  ಗ್ರಾಮಸ್ಥರೆಲ್ಲರೂ ಪರಸ್ಪರ ಸಹಬಾಳ್ವೆಯಿಂದ ಜೀವನ ನಡೆಸಬೇಕೆಂದು ಮನವರಿಕೆ ಮಾಡಿದರು.

ಇದೇ ಏಪ್ರಿಲ್ 14 ನೇ ತಾರೀಕು ನಾವುಗಳು ದೇಶ ವ್ಯಾಪ್ತಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಆಗುವಂತಹ ಇಂತಹ ಕೃತ್ಯಗಳು ಮತ್ತು ನಡವಳಿಕೆಗಳು ಸರ್ಕಾರಕ್ಕೆ ಮತ್ತು ಸಮಾಜಕ್ಕೆ ಧಕ್ಕೆ ಉಂಟುಮಾಡುತ್ತವೆ.

ಸರ್ವ ಜನಾಂಗದ ಶಾಂತಿಯ ತೋಟ ಎಂದು ರಾಷ್ಟ್ರಕವಿ ಕುವೆಂಪು ಅವರು ಹೇಳಿದ್ದಾರೆ. ಜಾತಿ ವ್ಯಕ್ತಿ ಮತ್ತು ಪಕ್ಷ ರಹಿತವಾದ  ಸಮಾಜ ನಿರ್ಮಾಣವಾಗಬೇಕಿದೆ. ದುರ್ಬಲ ವರ್ಗದವರಿಗೆ ಸರ್ಕಾರವು ಅದೆಷ್ಟು ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.

ಡಾ. ಭೀಮರಾವ್ ಅಂಬೇಡ್ಕರ್ ಆಶಯಗಳು ಇವತ್ತಿಗೆ ಅನುಷ್ಠಾನಗೊಳಿಸಬೇಕಿದೆ. ಸಮಾಜದಲ್ಲಿ ಭಾತೃತ್ವ ಸಮಾನತೆ ಮತ್ತು ಸಹಬಾಳ್ವೆ ಪುನರ್ ಸ್ಥಾಪಿಸಲಾಗಿದೆ ಈ ದಿಕ್ಕಿನಲ್ಲಿ ಗ್ರಾಮಸ್ಥರು ಚಿಂತಿಸಿ ಎಲ್ಲಿಯೂ ಕೂಡ ಮುಂದೆ ಇಂಥ ಕೃತ್ಯಗಳು ಕಂಡು ಬರಬಾರದು ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟರು.

Share This Article
Leave a Comment

Leave a Reply

Your email address will not be published. Required fields are marked *