ಟಗರು ಪಲ್ಯ ಸಿನಿಮಾದ ಟಗರು ಉಳಿವಿಗಾಗಿ ಸೋಷಿಯಲ್ ಮೀಡಿಯಾ ಅಭಿಯಾನ

suddionenews
By suddionenews Add a Comment 1 Min Read
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಬಾಗಲಕೋಟೆ : ಒಂದು ಟಗರಿನ ಉಳಿವಿಗಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿದೆ. ಈ ಟಗರು ಅಂತಿದ್ದದ್ದಲ್ಲ. ಸಿನಿಮಾದಲ್ಲೆಲ್ಲಾ ಚಾಪು ಮೂಡಿಸಿದೆ, ಹಲವು ಪ್ರಶಸ್ತಿಗಳನ್ನೆಲ್ಲಾ ತನ್ನದಾಗಿಸಿಕೊಂಡಿದೆ. ಅದುವೆ ಟಗರು ಪಲ್ಯ ಸಿನಿಮಾದ 7 ಸ್ಟಾರ್ ಸುಲ್ತಾನ್.

ಸುಲ್ತಾನ್ ನನ್ನು ಸದ್ಯಕ್ಕೆ ಬಾಗಲಕೋಟೆ ಜಿಲ್ಲೆಯ ಸುತಗುಂಡಾರದಲ್ಲಿ ಯೂನಿಸ್ ಎಂಬುವವರು ನೋಡಿಕೊಳ್ಳುತ್ತಿದ್ದಾರೆ. ಈ ಬಾರಿಯ ಬಕ್ರೀದ್ ಹಬ್ಬಕ್ಕೆ ಸುಲ್ತಾನ್ ನನ್ನು ಬಲಿ ಕೊಡಲು ಯೂನಿಸ್ ನಿರ್ಧಾರ ಮಾಡಿದ್ದಾರೆ. ಇದನ್ನು ಕೇಳಿ, ಅಭಿಮಾನಿಗಳು ಶಾಕ್ ಆಗಿದ್ದಾರೆ. ಸೋಷಿಯಲ್ ಮೀಡಯಾದಲ್ಲಿ ಯೂನಿಸ್ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.

ಸುಲ್ತಾನ್​​ ಇದುವರೆಗೂ ಸಾಕಷ್ಟು ಕಾಳಗಳಲ್ಲಿ ಜಯಭೇರಿ ಬಾರಿಸಿ ಲಕ್ಷ, ಲಕ್ಷ ಬಹುಮಾನ, ಬೈಕ್, ಚಿನ್ನ ಸೇರಿದಂತೆ ಹಲವು ಉಡುಗೊರೆ ತನ್ನದಾಗಿಸಿಕೊಂಡಿದೆ.  ಸತತ 34ಕ್ಕೂ ಹೆಚ್ಚು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. 20 ಲಕ್ಷಕ್ಕೂ ಅಧಿಕ ಹಣ, 1 ಬುಲೆಟ್ ಬೈಕ್, 1 ಎಚ್​​ಎಫ್​​ ಡಿಲಕ್ಸ್, ಎಚ್​​ಎಫ್ ಹಂಡ್ರೆಡ್, ಒಂದೂವರೆ ತೊಲೆ (15 ಗ್ರಾಂ) ಬಂಗಾರ ಗೆದ್ದಿದೆ.

Share This Article
Leave a Comment

Leave a Reply

Your email address will not be published. Required fields are marked *