Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಟೇಕ್ವಾಂಡೋ ಚಾಂಪಿಯನ್‍ಶಿಪ್‍ : ಚಳ್ಳಕೆರೆ ವಿದ್ಯಾರ್ಥಿಗಳಿಗೆ ಪದಕ

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜುಲೈ. 24 : ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 42 ನೇ ಕರ್ನಾಟಕ ರಾಜ್ಯ ಟೇಕ್ವಾಂಡೋ ಚಾಂಪಿಯನ್‍ಶಿಪ್‍ನಲ್ಲಿ ಚಳ್ಳಕೆರೆ ಟೇಕ್ವಾಂಡೋ ಸೆಂಟರ್‍ನ ವಿದ್ಯಾರ್ಥಿಗಳು ಸೀನಿಯರ್, ಕೆಡೆಟ್, ಜೂನಿಯರ್, ಸಬ್‍ಜೂನಿಯರ್ ಮತ್ತು ಜಿ-4 ವಿಭಾಗದಲ್ಲಿ ಭಾಗವಹಿಸಿ ಪದಕಗಳನ್ನು ಪಡೆದುಕೊಂಡಿದ್ದಾರೆ.
ಪ್ರತಿಭ ಕಂಚು, ವಿಷ್ಣು ಕಂಚಿನ ಪದಕಗಳನ್ನು ಗಿಟ್ಟಿಸಿಕೊಂಡಿದ್ದಾರೆ.

ಜಿ-4 ವಿಭಾಗದಲ್ಲಿ ಪಾರ್ಥ ಎಸ್.ನಾಯ್ಕ ಚಿನ್ನದ ಪದಕ, ಭಗತ್ ಚಂದು ಟಿ. ಚಿನ್ನದ ಪದಕ, ಹರೀಶ್ ಶೇಖರ್ ಬೆಳ್ಳಿ ಪದಕ, ಮಂಜುಳ ಕಂಚು, ಸಾಕೇತ್‍ರೆಡ್ಡಿ ಕಂಚು
ಪ್ರಜ್ವಲ್ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ.

ಗುರುಚೇತನ್, ನಿಶಾಂತ್ ಇವರುಗಳಿಗೆ ಕಂಚಿನ ಪದಕ, ಚಾರ್ವಿಕ ಬೆಳ್ಳಿ ಪದಕ, ಚರಣ್ ಬೆಳ್ಳಿ ಮತ್ತು ಕಂಚಿನ ಪದಕ, ಅವೀಶ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಟೇಕ್ವಾಂಡೋ ತರಬೇತುದಾರರಾದ ಎಸ್.ಸ್ವಾಮಿ, ಮಂಜುನಾಥ್, ಬೋಸಯ್ಯ, ಸುಮಂತ್ ಹಾಗೂ ಎಸ್.ಆರ್.ಎಸ್. ಪ್ರಾಂಶುಪಾಲರಾದ ವಿಜಯ್‍ರವರು ಪದಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.

Join WhatsApp

Join Now

Join Telegram

Join Now

Leave a Comment