ಟಿ20 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ :  ಭಾರತ ಆಡಲಿರುವ ಪಂದ್ಯಗಳ ವಿವರ ಇಲ್ಲಿದೆ…!

ಸುದ್ದಿಒನ್ : ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2024 ರ ವೇಳಾಪಟ್ಟಿ ಬಿಡುಗಡೆಯಾಗಿದೆ. ಶುಕ್ರವಾರ ಸಂಜೆ ಐಸಿಸಿ ಕಿರು ವಿಶ್ವಕಪ್ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಐದು ಸ್ಥಳಗಳಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ. ತಂಡಗಳನ್ನು ತಲಾ ಐದರಂತೆ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ‘ಎ’ ಗುಂಪಿನಲ್ಲಿದ್ದರೆ, ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ‘ಬಿ’ ಗುಂಪಿನಲ್ಲಿವೆ.

ಐಪಿಎಲ್ ಮುಗಿದ ತಕ್ಷಣ ಟಿ20 ವಿಶ್ವಕಪ್ ಆರಂಭವಾಗಲಿದೆ. ವಿಶ್ವಕಪ್‌ನ ಮೊದಲ ಪಂದ್ಯ ಜೂನ್ 1 ರಂದು ಅಮೇರಿಕಾ ಮತ್ತು ಕೆನಡಾ ನಡುವೆ ನಡೆಯಲಿದೆ.
ಮೊದಲ ಸೆಮಿಸ್ ಪಂದ್ಯ ಜೂನ್ 26 ರಂದು ಗಯಾನಾದಲ್ಲಿ ನಡೆಯಲಿದೆ. ಎರಡನೇ ಸೆಮಿಸ್ ಜೂನ್ 27 ರಂದು ಟ್ರಿನಿಡಾಡ್‌ನಲ್ಲಿ ನಡೆಯಲಿದೆ. ಅಂತಿಮ ಪಂದ್ಯ ಜೂನ್ 29 ರಂದು ಬಾರ್ಬಡೋಸ್‌ನಲ್ಲಿ ನಡೆಯಲಿದೆ. ಟಿ20 ವಿಶ್ವಕಪ್ ಎಲ್ಲಾ ಆರು ಸ್ಥಳಗಳಲ್ಲಿ ನಡೆಯಲಿದೆ. ಲಾಸ್ ಏಂಜಲೀಸ್ ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಸೇರ್ಪಡೆಗೊಂಡಿರುವುದು ಗೊತ್ತೇ ಇದೆ. ಈ ಒಲಿಂಪಿಕ್ಸ್‌ಗೂ ಮುನ್ನ ಅಮೆರಿಕ ಮೊದಲ ಬಾರಿಗೆ ಟಿ20 ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿದೆ.

ಭಾರತ ತಂಡ ತನ್ನ ಮೊದಲ ಪಂದ್ಯವನ್ನು
ಜೂನ್ 5 ರಂದು ಐರ್ಲೆಂಡ್ ವಿರುದ್ಧ
ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ಪಾಕಿಸ್ತಾನದ ವಿರುದ್ಧ
ಜೂನ್ 12 ರಂದು ಯುಎಸ್ಎ ವಿರುದ್ಧ
ಜೂನ್ 15 ರಂದು ಕೆನಡಾವನ್ನು ಎದುರಿಸಲಿದೆ.

ಭಾರತ ಆಡುವ ಎಲ್ಲಾ ಗುಂಪು ಪಂದ್ಯಗಳು ಅಮೆರಿಕದಲ್ಲಿ ನಡೆಯಲಿವೆ. ಕೆನಡಾವನ್ನು ಹೊರತುಪಡಿಸಿ, ಉಳಿದೆಲ್ಲ ಪಂದ್ಯಗಳು ನ್ಯೂಯಾರ್ಕ್‌ನಲ್ಲಿ ನಡೆಯಲಿವೆ, ಆದರೆ ಕೆನಡಾದೊಂದಿಗಿನ ಪಂದ್ಯವನ್ನು ಫ್ಲೋರಿಡಾ ಆಯೋಜಿಸುತ್ತದೆ.

ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ 20 ತಂಡಗಳು ಕಣಕ್ಕೆ ಇಳಿಯಲಿವೆ. ಪ್ರತಿ ಗುಂಪಿನಲ್ಲಿ ಐದು ತಂಡಗಳಿದ್ದರೆ, ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್-8 ಹಂತಕ್ಕೆ ಅರ್ಹತೆ ಪಡೆಯುತ್ತವೆ. ಈ ಹಂತ ತಲುಪಿದ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಸೂಪರ್-8 ಹಂತದಲ್ಲಿರುವ ಅಗ್ರ-4 ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ.

ಗುಂಪು – ಎ
ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ, ಅಮೆರಿಕ.

ಗುಂಪು – ಬಿ:
ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್, ಓಮನ್

ಗುಂಪು-ಸಿ:
ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ, ಉಗಾಂಡಾ, ಪಪುವಾ ನ್ಯೂ ಗಿನಿಯಾ

ಗುಂಪು-ಡಿ:
ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್, ನೇಪಾಳ.

2007 ರಲ್ಲಿ, ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ T20 ವಿಶ್ವಕಪ್ ಅನ್ನು ಆಯೋಜಿಸಿತು. ಧೋನಿ ನೇತೃತ್ವದ ಭಾರತ ತಂಡ ಮೊದಲ ಟಿ20 ವಿಶ್ವಕಪ್ ಗೆದ್ದಿತ್ತು. 2009ರಲ್ಲಿ ಪಾಕಿಸ್ತಾನ ಎರಡನೇ ಟಿ20 ವಿಶ್ವಕಪ್ ಗೆದ್ದಿತ್ತು. 2021ರಲ್ಲಿ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಗೆದ್ದರೆ, ಇಂಗ್ಲೆಂಡ್ 2022ರ ಟಿ20 ವಿಶ್ವಕಪ್ ಗೆದ್ದಿತ್ತು.

Share This Article
Leave a Comment

Leave a Reply

Your email address will not be published. Required fields are marked *