T20 ವಿಶ್ವಕಪ್ ಫೈನಲ್ : ಇತಿಹಾಸದಲ್ಲಿ ದಾಖಲೆಯ ಅತ್ಯಧಿಕ ಸ್ಕೋರ್

 

ಸುದ್ದಿಒನ್

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ರನ್‌ಗಳ ಸುರಿಮಳೆಗೈದಿತು. 2026 ರ T20 ವಿಶ್ವಕಪ್ ಫೈನಲ್‌ನಲ್ಲಿ, ಭಾರತವು ನ್ಯೂಜಿಲೆಂಡ್ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 255 ರನ್‌ಗಳನ್ನು ಗಳಿಸಿತು. ಇದು T20 ವಿಶ್ವಕಪ್ ಫೈನಲ್‌ನ ಇತಿಹಾಸದಲ್ಲಿ ಅತ್ಯಧಿಕ ಸ್ಕೋರ್ ಆಗಿದೆ. ಈ ಮೂಲಕ ಭಾರತವು ಹಿಂದಿನ ದಾಖಲೆಗಳನ್ನು ಮುರಿದಿದೆ.

 

ಇದಕ್ಕೂ ಮೊದಲು, ಟಿ20 ವಿಶ್ವಕಪ್ ಫೈನಲ್‌ನಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದ ದಾಖಲೆ ಭಾರತದ ಹೆಸರಲ್ಲಿತ್ತು. 2024 ರ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ನಲ್ಲಿ, ವಿರಾಟ್ ಕೊಹ್ಲಿ ಅವರ ಅದ್ಭುತ ಇನ್ನಿಂಗ್ಸ್ ಸಹಾಯದಿಂದ ಭಾರತ 176/7 ಗಳಿಸಿತ್ತು. ಆ ಪಂದ್ಯವನ್ನು ಭಾರತ ಗೆದ್ದು ಕಪ್ ಗೆದ್ದುಕೊಂಡಿತ್ತು. ಆದರೆ, ಇಂದು, ಸೂರ್ಯಸೇನೆ ಆ ಸ್ಕೋರ್‌ಗಿಂತ 79 ರನ್‌ಗಳನ್ನು ಹೆಚ್ಚು ಸೇರಿಸಿ 255 ರನ್‌ಗಳ ಬೃಹತ್ ಸ್ಕೋರ್ ಗಳ ದಾಖಲೆ ಬರೆಯಿತು.

ಅಭಿಷೇಕ್ ಶರ್ಮಾ: ಕೇವಲ 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿ, ಪವರ್‌ಪ್ಲೇನಲ್ಲಿ ಕಿವೀಸ್ ತಂಡದ ಬೆವರಿಳಿಸಿದರು.
ಒಟ್ಟು 21 ಎಸೆತಗಳಲ್ಲಿ 52 ರನ್ ಗಳಿಸಿದರು.

ಸಂಜು ಸ್ಯಾಮ್ಸನ್: ವೃತ್ತಿಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿರುವ ಸಂಜು ಸತತ ಮೂರನೇ ಅರ್ಧಶತಕ ಗಳಿಸಿದರು. 89 ರನ್‌ಗಳಿಗೆ ಔಟಾದ ನಂತರ ಶತಕವನ್ನು ಕಳೆದುಕೊಂಡರೂ, ಅವರು ಕಿವೀಸ್ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ದಂಡಿಅಉವಲ್ಲಿ ಯಶಸ್ವಿಯಾದರು.

ಇಶಾನ್ ಕಿಶನ್: ಮಧ್ಯಮ ಓವರ್‌ಗಳಲ್ಲಿ ಬಿರುಸಿನ ಇನ್ನಿಂಗ್ಸ್‌ನೊಂದಿಗೆ ಇಶಾನ್ ಕಿಶನ್ (54) ರನ್‌ರೇಟ್ ಅನ್ನು ಸ್ಥಿರವಾಗಿ ಕಾಯ್ದುಕೊಂಡರು.

ಶಿವಂ ದುಬೆ: ಕೊನೆಯ ಓವರ್‌ನಲ್ಲಿ ಜೇಮ್ಸ್ ನೀಶಮ್ 3 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 24 ರನ್‌ಗಳನ್ನು ಎಸೆದು ಸ್ಕೋರ್ ಅನ್ನು 250 ದಾಟಿಸಿದರು.

ಕಿವೀಸ್ ತಂಡದ ಮುಂದಿದೆ ಕಠಿಣ ಸವಾಲು :
ನ್ಯೂಜಿಲೆಂಡ್ ಬೌಲರ್‌ಗಳಲ್ಲಿ, ಜೇಮ್ಸ್ ನೀಶಮ್ ಒಂದೇ ಓವರ್‌ನಲ್ಲಿ 3 ವಿಕೆಟ್ ಪಡೆದು ಭಾರತವನ್ನು ಕಟ್ಟಿ ಹಾಕಿದರು.
ಆದರೆ ದುಬೆ ಅವರ ಮುಂದೆ ಅದು ಸಾಧ್ಯವಾಗಲಿಲ್ಲ. ಈಗ ಕಿವೀಸ್ ಗೆಲ್ಲಲು 256 ರನ್‌ಗಳ ಅಗತ್ಯವಿದೆ. ಫೈನಲ್‌ನ ಒತ್ತಡದಲ್ಲಿ ಇಷ್ಟು ದೊಡ್ಡ ಗುರಿಯನ್ನು ಸಾಧಿಸುವುದು ಅಸಾಧ್ಯವೆಂದು ಹೇಳಲೇಬೇಕು.

Share This Article