ಬೆಂಗಳೂರು: ಸಿದ್ದರಾಮಯ್ಯನವರಿಗೆ ಜೆಡಿಎಸ್ ಕೆಣಕದೇ ಇದ್ದರೆ ನಿದ್ದೆ ಬರಲ್ಲ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಟಿ ಎ ಶರವಣ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದರು. ಈ ವೇಳೆ ಜೆ ಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇವರೊಬ್ಬರೇನಾ ಅಹಿಂದಾ ನಾಯಕರು ಎಂದು ಪ್ರಶ್ನೆ ಮಾಡಿದರು.

ಇನ್ನೂ ತಾಕತ್ ಇದ್ರೆ ಕ್ಯಾಂಡಿಡೇಟ್ ಹಾಕಬಾರದಿತ್ತು, ನಾವು ಹಾಕಿದ ಕ್ಯಾಂಡಿಡೇಟ್ ಬಗ್ಗೆ ಮಾತನಾಡಲು ನೀವ್ಯಾರು..? ನೀವು ಹಾಕಬೇಕಿತ್ತು ಅಲ್ಪಾ ಸಂಖ್ಯಾತರ ಅಭ್ಯರ್ಥಿಯನ್ನ ಎಂದು ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಹೆಚ್ ಡಿ
ಕುಮಾರಸ್ವಾಮಿ ಅವರನ್ನು ಡೀಲ್ ರಾಜ ಅಂತೀರಾ, ಯಾರು ಡೀಲ್ ರಾಜ ಅಂತಾ ರಾಜ್ಯದ ಜನಕ್ಕೆ ಗೊತ್ತಿದೆ. ಯಾರ್ಯಾರನ್ನು ಎಲ್ಲೆಲ್ಲಿಗೆ ಕಳಿಸಿ ಡೀಲ್ ಮಾಡಿರೋದು ಯಾರು ಅಂತಾ ಎಲ್ರಿಗೂ ಗೊತ್ತಿದೆ.
ಫಾರುಕ್ ಅವರನ್ನು ರಾಜ್ಯಸಭೆಗೆ ನಿಲ್ಲಿಸಿದಾಗ, ಎಂಟು ಜನ ಶಾಸಕರನ್ನು ಕರೆದುಕೊಂಡು ಹೋಗಿ ಡೀಲ್ ಮಾಡಿದ್ದು ಯಾರು.? ಎಂದು ಮತ್ತೆ ಪ್ರಶ್ನೆ ಮಾಡಿದರು.
ಮಾಜಿ ಸಚಿವ ಇಕ್ಬಾಲ್ ಹೇಳ್ತಾರೆ ಜೆಡಿಎಸ್ ಮೋಸ ಮಾಡಿದೆ ಅಂತ,ಮಾನ ಮರ್ಯಾದೆ ಇದ್ದರೆ ಹೀಗೆ ಮಾತಾಡ್ತಾ ಇರಲಿಲ್ಲ
ಕರೆದುಕೊಂಡು ಬಂದು ಶಾಸಕರನ್ನು ಮಾಡಿದ್ರು,ಮಂತ್ರಿ ಮಾಡ್ಬೇಕಾದ್ರೆ ಎಷ್ಟು ವಿರೋಧ ಇತ್ತು. ಪ್ರಮಾಣವಚನ ತೆಗೆದುಕೊಳ್ಳುವಾಗ ಕುಮಾರಸ್ವಾಮಿ ಹೆಸರಿನ ಮೇಲೆ ತೆಗದುಕೊಂಡ್ರಿ.ಇವತ್ತು ಎಲ್ಲೋಯ್ತು ಆ ಮಾತು ಜನ ಬುದ್ದಿವಂತರಿದ್ದಾರೆ ಉತ್ತರ ಕೊಡ್ತಾರೆ.ಕಾಂಗ್ರೆಸ್ ಅವರಿಗೆ ತಾಕತ್ ಇದ್ದರೆ ಮೈನಾರಿಟಿ ಅವರಿಗೆ ಸ್ಥಾನ ಕೊಡಿ ಎಂದು ಸವಾಲ್ ಹಾಕಿದರು.

ಇನ್ನೂ 2013 -18 ರವರೆಗೆ ಅಧಿಕಾರ ಮಾಡಿದ ಸಿದ್ದರಾಮಯ್ಯ ಯಾವ ಕೆಲಸ ಮಾಡಿದಿರಾ. ನಿಮ್ಮ ಪಕ್ಷದಲ್ಲೇ ಸಿದ್ದರಾಮಯ್ಯನವರ ಬಗ್ಗೆ ಪಿತೂರಿ ಮಾಡ್ತಾ ಇದ್ದಾರೆ. ಇಲ್ಲಿಂದ ನಿಮ್ಮನ್ನು ಕಳುಹಿಸಬೇಕು ಅಂತ ಜಮೀರ್ ಅವರನ್ನೇ ಮುಖ್ಯಮಂತ್ರಿ ಕ್ಯಾಂಡೀಟೇಟ್ ಮಾಡಲಿ ನೋಡೋಣ ಎಂದು ಸವಾಲು ಹಾಕಿದರು.
