ನವದೆಹಲಿ: ರೈತರಿಗೆ ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕಿದರೆ ಅದಕ್ಕಿಂತ ಮತ್ತೊಂದು ಖುಷಿ, ತೃಪ್ತಿ ಇರುವುದಿಲ್ಲ. ಇತ್ತಿಚೆಗೆ ಅಡೊಕೆ ಬೆಳೆಗಾರರು ಬೇಸರದಲ್ಲಿದ್ದರು. ಇದೀಗ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ. ಇನ್ನು ಮುಂದೆ ಅಡಿಕೆಗೆ ಬೇಡಿಕೆ ಹೆಚ್ಚಾಗಲಿದೆ.
ಕೇಂದ್ರ ಸರ್ಕಾರದಿಂದ ವಿದೇಶದಿಂದ ಭಾರತಕ್ಕೆ ತರುವ ಅಡಿಕೆ ಆಮದು ದರವನ್ನು ಹೆಚ್ಚಳ ಮಾಡಲಾಗಿದೆ. ಇದರಿಂದ ಸ್ವದೇಶಿ ಅಡಿಕೆ ಬೆಳೆಗಾರರಿಗೆ ಲಾಭವಾಗಲಿದೆ. ಸಹಜವಾಗಿಯೇ ದೇಶಿಯ ಅಡಿಕೆ ಬೆಲೆ ಹೆಚ್ಚಾಗಲಿದೆ. ವಿದೇಶದಿಂದ ಭಾರತಕ್ಕೆ ಬರುವ ಅಡಿಕೆ ಆಮದಿಗೆ ಕೆಜಿಗೆ 251ರಿಂದ 351 ರೂಪಾಯಿ ತನಕ ಬೆಲೆ ನಿಗದಿ ಮಾಡಲಾಗಿದೆ. ಇದರಿಂದಾಗಿ ದೇಶಿಯ ಅಡಿಕೆಗೆ ಡಿಮ್ಯಾಂಡ್ ಸೃಷ್ಟಿಯಾಗುತ್ತದೆ.
ವರ್ತಕರು ದೇಶಿಯ ಅಡಿಕೆಯನ್ನೇ ಹೆಚ್ಚಾಗಿ ಖರೀದಿ ಮಾಡುತ್ತಾರೆ. ಭೂತಾನ್, ಬಾಂಗ್ಲಾದೇಶದಿಂದ ಅಗ್ಗದ ಬೆಲೆಗೆ ಅಡಿಕೆ ಆಮದಾಗುತ್ತದೆ. ಹೀಗಾಗಿ ದೇಶಿಯ ಅಡಿಕೆ ಬೆಲೆ ಕುಸಿದಿತ್ತು. ಅಡಿಕೆ ಬೆಲೆ ಕುಸಿದಿದ್ದರಿಂದ ಮಲೆನಾಡು, ಕರಾವಳಿ, ಮಧ್ಯ ಕರ್ನಾಟಕ ಭಾಗದ ರೈತರು ಕಂಗಲಾಗಿದ್ದರು. ಇದೀಗ ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ರೈತರು ನೆಮ್ಮದಿ ನಿಟ್ಟುಸಿರು ಬಿಡಬಹುದು.