ತುಮಕೂರು: ಡಿಸಿಎಂ ಡಿಕೆ ಶಿವಕುಮಾರ್ ಅವರು ಅತಿಯಾಗಿ ನಂಬುವ ದೇವರು ಅಂದ್ರೆ ಅದು ನೊಣವಿನಕೆರೆಯ ಅಜ್ಜಯ್ಯ. ಯಾವುದೇ ಒಳ್ಳೆ ಕೆಲಸಗಳನ್ನು ಮಾಡುವ ಮುನ್ನ ಡಿಸಿಎಂ ಅಜ್ಜಯ್ಯನ ಆಶೀರ್ವಾದವನ್ನು ಪಡೆದೆ ಮುಂದೆ ಸಾಗುತ್ತಾರೆ. ಏನೇ ಗೊಂದಲವಿದ್ದರು ಅಜ್ಜಯ್ಯನ ಮುಂದೆ ಸಲಹೆಗಳನ್ನು ಪಡೆಯುತ್ತಾರೆ.
ಇಂದು ಕೂಡ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿದ್ದಾರೆ. ತುಮಕೂರು ಜಿಲ್ಲೆ, ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿಯಲ್ಲಿರುವ ಗಂಗಾಧರ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿದ್ದಾರೆ. ಗಂಗಾಧರ ಅಜ್ಜಯ್ಯ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಬಳಿಕ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ಬಂದಾಗ ನನ್ನ ಎನರ್ಜಿ ಹೆಚ್ಚಾಗುತ್ತೆ. ನಾನು ಅತಿ ಹೆಚ್ಚು ಪ್ರೀತಿಸುವ ಸ್ಥಳ ಇದು, ಶ್ರೀಗಳು ಆಶೀರ್ವದಿಸುತ್ತಾರೆ ಎಂದು ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಅಜ್ಜಯ್ಯನ ಮಠದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅಜ್ಜಯ್ಯನ ಮೇಲೆ ಪ್ರಮಾಣ ಮಾಡು ಅಂದವರೆಲ್ಲ ಈಗ ಏನಾದ್ರೂ ಎಂದು ಪ್ರಶ್ನಿಸಿದ್ದಾರೆ.