ಬೆಂಗಳೂರು: ಜೆಡಿಎಸ್ ನಲ್ಲಿ ಹಾಸನ ಟಿಕೆಟ್ ಗಾಗಿ ಸಾಕಷ್ಟು ಫೈಟ್ ನಡೆದಿದೆ. ಭವಾನಿ ರೇವಣ್ಣ ನನಗೆ ಟಿಕೆಟ್ ಬೇಕು ಅಂತ ಕೂತಿದ್ರು. ಕುಮಾರಸ್ವಾಮಿ ಆಗಲ್ಲ ಅಂತ ಹೇಳಿದ್ರು. ಇದೆಲ್ಲದರ ನಡುವೆ ಇದೀಗ ಜೆಡಿಎಸ್ ಎರಡನೇ ಪಟ್ಟಿ ರಿಲೀಸ್ ಆಗಿದ್ದು, ಕಡೆಗೂ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಮಿಸ್ ಆಗಿದೆ.
ಮೊದಲ ಪಟ್ಟಿಯನ್ನು ಬಹಳ ಬೇಗ ರಿಲೀಸ್ ಮಾಡಿತ್ತು. 93 ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಿತ್ತು. ಇದೀಗ ಎರಡನೇ ಪಟ್ಟಿಯಲ್ಲಿ 49 ಕ್ಷೇತ್ರಗಳ ಪಟ್ಟಿ ರಿಲೀಸ್ ಮಾಡಿದ್ದು, ಹಾಸನ ಕ್ಷೇತ್ರಕ್ಕೆ ಸ್ವರೂಪ್ ಪ್ರಕಾಶ್ ಗೆ ಟಿಕೆಟ್ ಘೋಷಣೆಯಾಗಿದೆ.
ಕುಡಚಿ – ಆನಂದ್ ಮಾಳಗಿ, ರಾಯಬಾಗ – ಪ್ರದೀಪ್ ಮಾಳಗಿ, ಸವದತ್ತಿ ಯಲ್ಲಮ್ಮ – ಸೌರಬ್ ಆನಂದ್ ಚೋಪ್ರಾ, ಅಥಣಿ – ಶಶಿಕಾಂತ್ ಪಡಲಗಿ ಗುರುಗಳು, ಹುಬ್ಬಳ್ಳಿ – ಧಾರವಾಡ ಪೂರ್ವ – ವೀರಭದ್ರಪ್ಪ ಹಾಲಹರವಿ, ಕುಮಟಾ – ಸುರಜ್ ಸೋನಿ ನಾಯಕ್, ಹಳಿಯಾಳ್ – ಗೋಟ್ನೆಕರ್, ಭಟ್ಕಳ – ನಾಗೇಂದ್ರ ನಾಯಕ್, ಶಿರಸಿ ಸಿದ್ಧಾಪುರ – ಉಪೇಂದ್ರ ಪೈ, ಯಲ್ಲಾಪುರ – ಡಾ. ನಾಗೇಶ್ ನಾಯ್ಕ್, ಚಿತ್ತಾಪುರ – ಸುಭಾಶ್ ಚಂದ್ರ ರಾಥೋಡ್, ಕಲಬುರ್ಗಿ ಉತ್ತರ – ನಾಸೀರ್ ಹುಸೇನ್, ಬಳ್ಳಾರಿ ನಗರ – ಅಲ್ಲಾ ಬುಕ್ಷ್ ಆಲಿ ಮುನ್ನ, ಹಗರಿಬೊಮ್ಮನಹಳ್ಳಿ – ಪರಮೇಶ್ವರಪ್ಪ, ಕಡೂರ್ ವೈ ಎಸ್ ವಿ ದತ್ತಾ, ಹೊಳೆನರಸೀಪುರ – ರೇವಣ್ಣ ಸೇರಿದಂತೆ ಹಲವು ಕ್ಷೇತ್ರಕ್ಕೆ ಟಿಕೆಟ್ ಅನೌನ್ಸ್ ಆಗಿದೆ.