ರಾಮಮಂದಿರ ಉದ್ಘಾಟನೆಗೆ ತೆರಳಿದ ಚಿತ್ರದುರ್ಗ – ದಾವಣಗೆರೆ ಜಿಲ್ಲೆಯ ಮಠಾಧೀಶರು

 

ಸುದ್ದಿಒನ್, ಚಿತ್ರದುರ್ಗ, ಜನವರಿ.20 : ಬಹು ವರ್ಷಗಳ ಹೋರಾಟದ ಫಲ, ಸೋಮವಾರ ನನಸಾಗುತ್ತಿದೆ. ಇದು ಇಡೀ ವಿಶ್ವದ ಭಾರತೀಯರ ಕನಸು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ, ರಾಮಲಲ್ಲಾ ಮೂರ್ತಿ ಈಗಾಗಲೇ ಗರ್ಭಗುಡಿ ತಲುಪಿದೆ. ಇನ್ನೇನಿದ್ದರು ಪ್ರಾಣ ಪ್ರತಿಷ್ಠಾಪನೆ ಮಾಡಿ, ದೇಶಕ್ಕೆ ದರ್ಶನ ನೀಡಬೇಕು ಅಷ್ಟೇ. ಆ ಕ್ಷಣಕ್ಕಾಗಿ ಎಲ್ಲರೂ ಭಕ್ತಿ ಭಾವದಿಂದ ಕಾಯುತ್ತಿದ್ದಾರೆ.

ಖುಷಿಯ ವಿಚಾರವೆಂದರೆ ಅಯೋಧ್ಯೆಗೆ ತಲುಪಿರುವುದರಲ್ಲಿ ಹೆಚ್ಚಿನದ್ದು ಕರ್ನಾಕಟದ ಪಾಲಾಗಿದೆ. ಮುಖ್ಯವಾಗಿ ಪೂಜೆಗೆ ಆಯ್ಕೆಯಾದ ರಾಮಲಲ್ಲಾ ವಿಗ್ರಹ ಕರ್ನಾಟಕದ್ದೆ. ಹೀಗಾಗಿ ಕರ್ನಾಟಕದಿಂದ ಹೆಚ್ಚೆಚ್ಚು ಮಠಾಧೀಶರು, ಭಕ್ತರು ಅಯೋಧ್ಯೆಗೆ ಭೇಟಿ ನೀಡಿ, ಪೂಜೆಯಲ್ಲಿ ಭಾಗವಹಿಸುತ್ತಿದ್ದಾರೆ. ಅದರಂತೆ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ ಮಠಾಧೀಶರು ಕೂಡ ಭಾಗಿಯಾಗಲಿದ್ದಾರೆ.

ಚಿತ್ರದುರ್ಗ ಜಿಲ್ಲೆಯಿಂದ

1) ಜಗದ್ಗುರು ಶ್ರೀ ನಿರಂಜನಾನಂದ ಮಹಾಸ್ವಾಮಿಜಿ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠ ಕಾಗಿನೆಲೆ,                     2) ಜಗದ್ಗುರು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮೀಜಿ ಮಾದರ ಚನ್ನಯ್ಯ ಗುರುಪೀಠ ಚಿತ್ರದುರ್ಗ, 3) ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮೀಜಿ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠ ಕುಂಚಗಿರಿ ಹೊಸದುರ್ಗ,                                                                 4) ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮಯ್ಯ ಮಹಾಸ್ವಾಮೀಜಿ ಸಿದ್ದರಾಮೇಶ್ವರ ಮಹಾ ಸಂಸ್ಥಾನ ಭೋವಿ ಗುರುಪೀಠ ಚಿತ್ರದುರ್ಗ ಇವರು ಅಯೋಧ್ಯೆಗೆ ಪ್ರಯಾಣ ಬೆಳೆಸಿದರು.

ಇವರ ಜೊತೆಗೆ ದಾವಣಗೆರೆ ಜಿಲ್ಲೆಯ ಮಠಾಧೀಶರು ಕೂಡ ಅಯೋಧ್ಯೆಗೆ ತೆರಳಿದ್ದಾರೆ. 1). ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಜಿ ಶ್ರೀ ವಾಲ್ಮೀಕಿ ಗುರುಪೀಠ ರಾಜನಳ್ಳಿ ಹರಿಹರ, 2) ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಮಹಾಸ್ವಾಮೀಜಿ ಪಂಚಮಸಾಲಿ ಗುರುಪೀಠ ಹರಿಹರ, 3)ಜಗದ್ಗುರು ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿ ಭಗೀರಥ ಪೀಠ ಮಧುರೆ ಇವರು ಸಹ ತೆರಳಿದ್ದಾರೆ. ಚಿತ್ರದುರ್ಗ ಜಿಲ್ಲೆಯಿಂದ ಅಯೋಧ್ಯೆಗೆ ತೆರಳಿದ ಮಠಾಧೀಶರಿಗೆ ಭಕ್ತರು ಗೌರವಿಸಿ, ಬೀಳ್ಕೊಟ್ಟರು.

ಚಿತ್ರದುರ್ಗದಿಂದ ಬೆಂಗಳೂರಿಗೆ ತೆರಳಿ ಅಲ್ಲಿಂದ ವಿಮಾನ ಮೂಲಕ ಲಕ್ನೋ ತಲಪಲಿದ್ದಾರೆ. ಲಕ್ನೋದಿಂದ ಅಯೋಧ್ಯೆಗೆ ಕಾರಿನಲ್ಲಿ ಪ್ರಯಾಣಿಸಲಿದ್ದಾರೆ. ಅಯೋಧ್ಯೆಯಲ್ಲಿ ಸುಮಾರು ನಾಲ್ಕು ಸಾವಿರ ಗಣ್ಯರು ಸೇರಲಿದ್ದು ವಾಸ್ತವಿಕ ಸೂಚಿತವಾದ ಸಿಟಿ ನಿರ್ಮಾಣ ಮಾಡಲಾಗಿದೆ. ಎಲ್ಲಾ ಗಣ್ಯರು ವಾಸ್ತವ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು ಅದರಂತೆ ಚಿತ್ರದುರ್ಗದ ಪ್ರಮುಖ ಮಠಾಧೀಶರು ಕೂಡ ವಿಮಾನ ಮೂಲಕ ಅಯೋಧ್ಯೆ ಕಡೆ ಪ್ರಯಾಣ ಬೆಳೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *