ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಮತ್ತು ಡಿಸಿಎಂ ಫೈನಲ್ ಆಗಿದ್ದು, ಸಚಿವರ ಲೀಸ್ಟ್ ರೆಡಿಯಾಗ್ತಾ ಇದೆ. ಇದರ ನಡುವೆ ಇಂತಿಂಥ ಇಲಾಖೆ ಇಂಥವರಿಗೆ ಬೇಕೆಂಬ ಬೇಡಿಕೆಯೂ ಹೆಚ್ಚಾಗಿದೆ. ಅದರಲ್ಲೂ ಸ್ವಾಮೀಜಿಯೊಬ್ಬರು ಅಬಕಾರಿ ಇಲಾಖೆಯ ಬಗ್ಗೆ ಡಿಮ್ಯಾಂಡ್ ಇಟ್ಟಿದ್ದಾರೆ. ನಮ್ಮ ಸಮುದಾಯದವರಿಗ ಅಬಕಾರಿ ಇಲಾಖೆಯನ್ನೇ ನೀಡಬೇಕೆಂದು ಶ್ರೀ ಪ್ರಣವಾನಂದ ಸ್ವಾಮೀಜಿ ಬೇಡಿಕೆ ಇಟ್ಟಿದ್ದಾರೆ.
ಈಡಿಗ ಮಹಾಮಂಡಳಿಯ ಅಧ್ಯಕ್ಷ ಶ್ರೀ ಪ್ರಣವಾನಂದ ಸ್ವಾಮೀಜಿ ಇಂತಹದ್ದೊಂದು ಬೇಡಿಕೆ ಇಟ್ಟಿದ್ದಾರೆ. ಈಡಿಗ ಮತ್ತು ಬಿಲ್ಲವ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ನೀಡಬೇಕು. ಇ ಬಾರಿಯ ಚುನಾವಣೆಯಲ್ಲಿ ನಮ್ಮ ಸಮುದಾಯದವರಿಗೆ ಏಳು ಟಿಕೆಟ್ ಅನ್ನು ನೀಡಲಾಗಿತ್ತು. ಅದರಲ್ಲಿ ನಾಲ್ವರು ಗೆದ್ದಿದ್ದು, ಮೂವರು ಅಲ್ಪಮತದಿಂದ ಸೋತಿದ್ದಾರೆ. ಬಿಲ್ಲವ ಸಮುದಾಯಕ್ಕೆ ಒಂದು ಸ್ಥಾನ, ಈಡಿಗ ಸಮುದಾಯಕ್ಕೆ ಒಂದು ಮಂತ್ರಿ ಸ್ಥಾನ ನೀಡಬೇಕು ಎಂದಿದ್ದಾರೆ.
ಅದರಲ್ಲೂ ಅಬಕಾರಿ ಇಲಾಖೆಯನ್ನೇ ನೀಡಬೇಕು. ಅದನ್ನು ನೀಡಿದರೆ ಬಹಳ ಖುಷಿಯಾಗುತ್ತದೆ. ಯಾಕಂದ್ರೆ ಆ ಇಲಾಖೆ ನಮ್ಮ ಸಮುದಾಯಕ್ಕೆ ಸೇರಿರುವಂತ ಇಲಾಖೆಯಾಗಿದೆ. ಜೊತೆಗೆ ನಿಗಮ ಮಂಡಳಿಯಲ್ಲೂ ನಮ್ಮ ಸಮುದಾಯಕ್ಕೆ ಒಂದು ಅವಕಾಶ ನೀಡಬೇಕು ಎಂದಿದ್ದಾರೆ.