ರಾಜ್ಯದಲ್ಲಿ ಚುನಾವಣೆಯ ಕಾವು ಜೋರಾಗಿದೆ. ಅದರಲ್ಲೂ ಮಠಾಧೀಶರು, ಸ್ವಾಮೀಜಿಗಳು ಚುನಾವಣೆಯಲ್ಲಿ ಸಾಕಷ್ಟು ಓಡಾಟ ನಡೆಸಲು ಶುರು ಮಾಡಿದ್ದಾರೆ. ಕಳೆದ ಬಾರಿ ದಲಿತ ಸಮುದಾಯದವರು ಇನ್ನೇನು ಸಿಎಂ ಆಗುವುದರಲ್ಲಿತ್ತು, ಆದ್ರೆ ಕೊನೆ ಕ್ಷಣದಲ್ಲಿ ಅದು ಮಿಸ್ ಆಗಿತ್ತು. ಈ ಬಾರಿ ದಲಿತ ಸಿಎಂ ಮಾಡಲೇಬೇಕೆಂದು ಎಸ್ಸಿ / ಎಸ್ಟಿ ಸಮುದಾಯದವರು ಪಣ ತೊಟ್ಟಿದ್ದಾರೆ.
ಅದಕ್ಕಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ರಹಸ್ಯ ಸಭೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸ್ವಾಭಿಮಾನಿ ಎಸ್ಸ್ಇ/ಎಸ್ಟಿ ಸಮುದಾಯದಿಂದ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ವಾಲ್ಮೀಕಿ ಗುರಪೀಠದ ಪೀಠಧಿಪತಿ ಪ್ರಸನ್ನಾನಂದಪುರಿ ಸ್ವಾಮೀಜಿ, ಚಿತ್ರದುರ್ಗ ಛಲವಾದಿ ಪೀಠದ ಬಸವ ನಾಗಿದೇವ ಸ್ವಾಮೀಜಿ, ಚಿತ್ರದುರ್ಗದ ಲಂಬಾಣಿ ಬಂಜಾರ ಪೀಠದ ಸ್ವಾಮೀಜಿ ಸೇರಿದಂತೆ ಹಲವೆಡೆಯಿಂದ ಸ್ವಾಮೀಜಿಗಳು ಈ ಸಭೆಯಲ್ಲಿ ಸೇರಿದ್ದರು.
ಇಷ್ಟು ದಿನ ಅವೆಇಗೆ ನಾವೂಗಳು ವೋಟ್ ಬ್ಯಾಂಕ್ ಆಗಿದ್ದು ಸಾಕು, ಇನ್ನು ಮುಂದೆ ನಮ್ಮ ಶಕ್ತಿ ತೋರಿಸೋಣಾ. ರಾಜ್ಯಾದ್ಯಂತ ಪ್ರವಾಸ ಮಾಡಿ, ದಲಿತರನ್ನು ಸಿಎಂ ಮಾಡೋಣಾ ಎಂದು ಪಣ ತೊಟ್ಟಿದ್ದಾರೆ. ಈಗಾಗಲೇ ಎಲ್ಲಾ ಜಾತಿಯ ಮುಖಂಡರು ತಮ್ಮ ನಾಯಕರ ಪರವಾಗಿ ಧ್ವನಿ ಎತ್ತಿದ್ದಾರೆ. ಹೀಗಾಗಿ 2023ರ ಚುನಾವಣೆಯಲ್ಲಿ ಕಿಚ್ಚು ಜೋರಾಗಿರಲಿದೆ.