ಸಲ್ಲೇಖನ ವ್ರತ ಮಾಡಿ ಪ್ರಾಣ ತ್ಯಾಗ ಮಾಡಿದ ಸ್ವಾಮೀಜಿ : ವೀರೇಂದ್ರ ಹೆಗ್ಗಡೆ ಸಂತಾಪ

suddionenews
1 Min Read

ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. ಶ್ರೀಗಳ ನಿಧನಕ್ಕೆ ಭಕ್ತರು, ಬೆಂಬಲಿಗರು ಸಹಸ್ರಾರು ಸಂಖ್ಯೆಯಲ್ಲಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇದೀಗ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸಂತಾಪ ಸೂಚಿಸಿದ್ದಾರೆ.

“ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ದೇಹತ್ಯಾಗ ಮಾಡಿದ ವಿಚಾರ ತಿಳಿಯಿತು. ಮಹಾನ್ ಚಿಂತಕರು, ಮಹಾನ್ ತತ್ವಜ್ಞಾನಿಗಳು, ಶ್ರೀಸಾಮಾನ್ಯರಿಗೆ ಜೀವನಾದರ್ಶಗಳನ್ನು ತಿಳಿಸಿ ಮಾರ್ಗದರ್ಶನ ಕೊಟ್ಟವರು. ಜನಜೀವನವನ್ನು ಅತ್ಯಂತ ಹತ್ತಿರದಿಂದ ಕಂಡವರು. ಅದೇ ಮನಸ್ಸಿನಿಂದ ಜನಸಾಮಾನ್ಯರಲ್ಲಿ ಬದಲಾವಣೆಯನ್ನು ತಂದವರು. ಅದಕ್ಜೆ ಮಾರ್ಗದರ್ಶನಗಳನ್ನು ನೀಡಿದವರು. ತಮ್ಮ ಪ್ರವಚನದ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದಿದವರು”.

ಅವರ ಪ್ರವಚನಗಳಲ್ಲಿ ನಾನು ಅವರನ್ನು ಕಂಡಂತೆ ಭಾಷಣದ ಭೀಕರತೆಯನ್ನು ತೋರದೆ ಎಲ್ಲಾ ಧರ್ಮದ ಸಾರಸತ್ವವನ್ನು ಆಳವಾಗಿ ತಿಳಿದುಕೊಂಡು ತಮ್ಮ ಪ್ರವಚನಗಳನ್ನು ಅತ್ಯಂತ ಸರಳವಾಗಿ, ಪ್ರಸ್ತುಪಡಿಸಿ, ಚಿತ್ತಾಕರ್ಷಿಸಿ ತಮ್ಮ ಪ್ರಭಾವವನ್ನು ಬೀರುತ್ತಿದ್ದರು. ಪೂಜ್ಯರು ಜೈನ ಧರ್ಮದ ಸಲ್ಲೇಖನ ವ್ರತವನ್ನು ಅನುಕರಿಸಿದ್ದರಿಂದ ಬಹುತೇಕ ತಮ್ಮ ಕೊನೆಯ ಭಾಗದಲ್ಲಿ ಆಹಾರ-ಜಲ ತ್ಯಾಗ ಮಾಡಿ ದೇಹ ತ್ಯಾಗ ಮಾಡಿದರು. ಅತ್ಯಂತ ಸರಳ ಜೀವಿ. ಪೂಜ್ಯಶ್ರೀ ಸಿದ್ದೇಶ್ವರ ಎಶ್ವರ ಶ್ರೀಗಳ ಚಿಂತನೆ ಸದಾ ನಮ್ಮೊಂದಿಗೆ ಇರಲಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *