ಸ್ವಾಮಿ ವಿವೇಕಾನಂದರು ಆಧ್ಯಾತ್ಮದ ಮಹೋನ್ನತ ಶಿಖರ : ನಾಗೇಶ್

suddionenews
3 Min Read

ಸುದ್ದಿಒನ್, ಚಿತ್ರದುರ್ಗ, ಜ.12 : ಬಲಿಷ್ಠ, ಸಶಕ್ತ ದೇಶ ನಿರ್ಮಾಣವಾಗಲು ಶ್ರಮ, ಸಮಯ ಅಗತ್ಯ. ಅಂತಹ ಅರಿವನ್ನ ಜಾಗೃತಗೊಳಿಸಲು ಸ್ವತಃ ದೇಶ ಯಾತ್ರೆ ಕೈಗೊಂಡು ಜಾಗೃತಿ ಮತ್ತು ವಿವೇಕವನ್ನು ಮೂಡಿಸಲು ಅವಿರತವಾಗಿ ಪರಿಶ್ರಮ ಮತ್ತು ಸಮಯ ಮೀಸಲಿಟ್ಟವರು ಸ್ವಾಮಿ ವಿವೇಕಾನಂದರು ಎಂದು ಚಿತ್ರದುರ್ಗ ಸರ್ಕಾರಿ ಪಾಲಿಟೆಕ್ನಿಕ್‌ನ ಪ್ರಾಧ್ಯಾಪಕರಾದ

ಜ.ರ. ನಾಗೇಶ್ ಅವರು ಅಭಿಪ್ರಾಯಪಟ್ಟರು.

ಅವರು ನಗರದ ರೋಟರಿ ಬಾಲಭವನದಲ್ಲಿ ಚಿತ್ರದುರ್ಗ ಜಿಲ್ಲಾ ಯೋಗಾಸನ, ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಯುವ ದಿನದ ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದರು.

ಒಬ್ಬ ಗುರು ಹೇಗಿರಬೇಕೆಂಬುದಕ್ಕೆ ವಿವೇಕಾನಂದರೇ ಮಾದರಿಯಾಗಿದ್ದಾರೆ. ದಿಟ್ಟತನ ಹೊಂದಿದ್ದ ಅವರು ಯಾವುದನ್ನೇ ಆಗಲಿ ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವ ಜಾಯಮಾನದವರಾಗಿರಲಿಲ್ಲ. ಪ್ರಶ್ನಿಸಿ ಪರೀಕ್ಷಿಸುವ ಪ್ರವೃತ್ತಿಯಿಂದ ತನ್ನ ಗುರು ರಾಮಕೃಷ್ಣರನ್ನೇ ಪ್ರಶ್ನಿಸುವ ಮೂಲಕ ಅವರಿಂದ ನೆಚ್ಚಿನ ಶಿಷ್ಯ ಎಂದು ಪರಿಗಣಿಸಲ್ಪಟ್ಟವರು. ಹಾಗೆ ನಮ್ಮಲ್ಲಿ ಸನ್ಯಾಸಿಗೆ ಸನ್ಯಾಸಿಯಾದವರೆ ಧೀಕ್ಷೆ ಕೊಡುವ ಪರಂಪರೆ ಇದೆ. ಆದರೆ ರಾಮಕೃಷ್ಣರು ಗೃಹಸ್ಥರಾಗಿದ್ದರೂ ಸಹ 13 ಸಾಧಕರಿಗೆ ಸನ್ಯಾಸ ಧೀಕ್ಷೆ ಕೊಟ್ಟದ್ದು ಒಂದು ಸ್ಮರಣೀಯ.

ಆಧ್ಯಾತ್ಮಿಕ ಹಂಬಲದಿಂದ ವಿವೇಕರು ತನ್ನ ದೇಹದ ಹಸಿವನ್ನೂ ಸಹ ಮರೆತು ಧ್ಯಾನಸಕ್ತರಾಗುತ್ತಿದ್ದರು. ಇದರಿಂದ ಆಧ್ಯಾತ್ಮದ ಮಹೋನ್ನತ ಶಿಖರ ತಲುಪಿದರು. ಮುಂದೆ ವಿದೇಶಕ್ಕೆ ಹೋಗಿ ಅಲ್ಲಿ ತಮ್ಮ ವಾಕ್ ಚಾತುರ್ಯವನ್ನು ಪ್ರದರ್ಶಿಸಿ ಮೆಚ್ಚುಗೆ ಪಡೆದು ತಮ್ಮ ಕೀರ್ತಿ ದೇಶ ದಿಕ್ಕುಗಳಿಗಾಗಿ ಹಬ್ಬುವಂತಾಯಿತು.

ಅವರು ಪ್ರಪಂಚ ಪರ್ಯಟನೆ ಕೈಗೊಂಡು, ಭಾರತವು ಎಲ್ಲ ರೀತಿಯಿಂದ ಬಲಿಷ್ಠವಾಗಿವಾಗಬೇಕೆಂಬ ಸದುದ್ದೇಶದಿಂದ ಸ್ವತಃ ಸ್ವಾತಂತ್ರ್ಯ ಚಳುವಳಿಗೆ ತಿಲಕರಿಗೆ ಪ್ರೇರಣೆ ನೀಡುತ್ತಾರೆ.ಇದರಿಂದ ಬ್ರಿಟಿಷರ ದಬ್ಬಾಳಿಕೆಯಿಂದ ತತ್ತರಿಸಿ ಹೋಗಿದ್ದ ಭಾರತಕ್ಕೆ ಸ್ವಾತಂತ್ರ ಪಡೆಯಲು ದಿಕ್ಸೂಚಿ ಸಿಗುತ್ತದೆ. ನಂತರ ಕನ್ಯಾಕುಮಾರಿಯ ಐತಿಹಾಸಿಕ ಸ್ಥಳದ ಬಂಡೆಯ ಮೇಲೆ ಧ್ಯಾನ ಮಗ್ನರಾಗುತ್ತಾರೆ. ಅವರು ಈ ನಾಡಿಗೆ ಅದರಲ್ಲಿಯೂ ಯುವಕರಿಗೆ ನೀಡಿದ್ದು, ನಿರುತ್ಸಾಹಿಗಳಾಗಿರಬಾರದು, ಸದಾ ಕ್ರಿಯಾಶೀಲ ರಾಗಿರುವ ಮೂಲಕ ದೇಶದ ರಕ್ಷಣೆ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಪ್ರಗತಿ ಮೂಲಕ ಭಾರತ ಪ್ರಪಂಚದಲ್ಲಿ ಹೆಸರಾಗಬೇಕೆಂದು ಬಯಸಿ ಆ ಮೂಲಕ ಎಲ್ಲರ ಮನಸ್ಸಿನಲ್ಲಿ ಚಿರಸ್ತಾಯಾಗಿದ್ದಾರೆ ಎಂದು ಬಣ್ಣಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯೋಗಾಚಾರ್ಯ, ಚಿತ್ರದುರ್ಗ ಜಿಲ್ಲಾ ಯೋಗಾಸನ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಎಲ್.ಎಸ್. ಚಿನ್ಮಯಾನಂದ ಅವರು ಮಾತನಾಡಿ ರಾಷ್ಟ್ರಪ್ರೇಮದ ಪ್ರತೀಕ ಸ್ವಾಮಿ ವಿವೇಕಾನಂದರು. ಅವರು ಯುವಕರಿಗೆ ಬಳುವಳಿ. ಆ ಕಾರಣಕ್ಕಾಗಿ ಈ ನಾಡಿಗೆ ಅವಿಸ್ಮರಣೀಯ ಕೊಡುಗೆಯನ್ನು ನೀಡಿದ ಮಹನೀಯರನ್ನು ಸ್ಮರಿಸುವ ಕೆಲಸವಾಗಬೇಕು. ನಮ್ಮ ಮನೆತನದ ಹಿಂದಿನ ಪೂರ್ವಿಕರ ಎಷ್ಟೋ ಹೆಸರು ನಮಗೆ ಗೊತ್ತಿರುವುದಿಲ್ಲ. ಆದರೆ ಸಮಾಜಕ್ಕೆ ತಮ್ಮ ತ್ಯಾಗದ ಮೂಲಕ ಸದಾ ಸ್ಮರಣೀಯರಾಗಿ ಉಳಿದಿರುವ ಅವರ ಪ್ರೇರಣೆ ನಮ್ಮ ಮುಂದಿನ ಪೀಳಿಗೆಗೆ ಮಾರ್ಗದರ್ಶನ ಅನುಸರಿಸುವ, ಆ ಕಾರಣಕ್ಕೆ ಆಧ್ಯಾತ್ಮಕದ ಮಹಾಮೇರು ವಿವೇಕಾನಂದರು ಸದೃಢ ಸಶಕ್ತರಿಂದ ಈ ದೇಶದ ರಕ್ಷಣೆ ಸಾಧ್ಯ ಎಂದು ಮನಗಂಡ ವಿವೇಕರು ಆ ಕಾರಣಕ್ಕಾಗಿ ಧ್ಯಾನ ಮತ್ತು ಯೋಗಕ್ಕೆ ಎಲ್ಲಿಲ್ಲದ ಆದ್ಯತೆ ನೀಡಿದ್ದರು ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ಎರಡು ದಿನಗಳ ಕಾಲ ದಾರದಲ್ಲಿ ಸ್ವಾಮಿ ವಿವೇಕಾನಂದರ ಚಿತ್ರವನ್ನು ತಮ್ಮ ನೈಪುಣ್ಯತೆಯಿಂದ ರಚಿಸಿ, ಈ ಸಂದರ್ಭದಲ್ಲಿ ಚಿನ್ಮಯಾನಂದ ಅವರಿಗೆ ಕೊಡುಗೆಯಾಗಿ ಯೋಗ ವಿದ್ಯಾರ್ಥಿಗಳಾದ ಅಂಜಲಿ ಉದಿತ್ ಅವರು ನೀಡಿದರು.
ಈ ಸಂದರ್ಭದಲ್ಲಿ ವೈದ್ಯರುಗಳಾದ ಡಾ. ಬಸವರಾಜ, ಡಾ. ನವೀನ್ ಸಜ್ಜನ್, ತರಬೇತುದಾರದ ಮುರಳಿ , ಪರಶುರಾಮ್ ನಗರದ ವಿವಿಧ ಬಡಾವಣೆಗಳ ತರಬೇತುದಾರರು,ವಿಶ್ವನಾಥ್,ಶಂಭುಲಿಂಗಪ್ಪ,ಶಾರದಮ್ಮ, ಸುರಯ್ಯ,ರುಕ್ಮಿಣಿ ಮತ್ತಿತರರು ಭಾಗವಹಿಸಿದ್ದರು.

ಸುಪ್ರಭಾತ ಕಾಲದ ಸಂದರ್ಭದಲ್ಲಿ ನಡೆದ ಆರಂಭವಾದ ಸಮಾರಂಭಕ್ಕೆ ಕೋಕಿಲ ಎಂ.ಜೆ ಅವರು ಪ್ರಾರ್ಥನೆ ಮಾಡಿದರು. ರೋ.ವೀರಭದ್ರ ಸ್ವಾಮಿ ಸ್ವಾಗತಿಸಿದರು.ಶಿಕ್ಷಕಿ ವಿಮಲಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್ ಕುಮಾರ್ ಶರಣು ಸಮರ್ಪಣೆ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *