ಸುದ್ದಿಒನ್, ಚಿತ್ರದುರ್ಗ. ಸೆ.30: ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಶನಿವಾರ ಸ್ವಚ್ಛತಾ ಹೀ ಸೇವಾ ಅಭಿಯಾನ ಹಮ್ಮಿಕೊಳ್ಳಲಾಯಿತು.
ಜಿಲ್ಲಾ ನ್ಯಾಯಾಂಗ ಇಲಾಖೆ, ನಗರಸಭೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದ ವತಿಯಿಂದ ಜಿಲ್ಲಾ ನ್ಯಾಯಾಲಯ ಆವರಣದ ಹೊರಾಂಗಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅಭಿಯಾನ ಕಾರ್ಯರೂಪಕ್ಕೆ ತರಲಾಯಿತು. ಇದಕ್ಕೂ ಮೊದಲು ನಗರದ ಜಿಲ್ಲಾಧಿಕಾರಿ ವೃತ್ತದಲ್ಲಿ ಸ್ವಚ್ಛತೆಯ ಬಗ್ಗೆ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
ನ್ಯಾಯಾಲಯ ಮತ್ತು ಜಿಲ್ಲಾ ಖಜಾನೆ ಮುಂಭಾಗದ ಅಂಗಡಿ ಮುಗ್ಗಟ್ಟುಗಳ ಮಾಲೀಕರಿಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ರೇಖಾ ತಿಳುವಳಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ರೇಖಾ, ಅಪರ ಜಿಲ್ಲಾ ನ್ಯಾಯಾಧೀಶರಾದ ಎಸ್.ಎನ್.ಕಲ್ಕಣಿ, ಬಿ.ಕೆ.ಕೋಮಲಾ, ಸಿವಿಲ್ ನ್ಯಾಯಾಧೀಶರಾದ ಕೆಂಪರಾಜು, ಚೈತ್ರಾ, ಉಜ್ವಲಾ ವೀರಣ್ಣ, ಗೀತಾ ಕುಂಬಾರ, ನೇಮಿಚಂದ್ರ, ಅನಿತಾ ಕುಮಾರಿ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ನಗರಸಭೆ ಆಯುಕ್ತೆ ರೇಣುಕಾ, ಸಿಬ್ಬಂದಿ ಜಾಫರ್, ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್ ಕುಮಾರ್, ಕಾರ್ಯದರ್ಶಿ ಗಂಗಾಧರ್, ವಕೀಲರಾದ ಉಮೇಶ್ ಹಾಗೂ ನ್ಯಾಯಾಂಗ ಸಿಬ್ಬಂದಿ ವರ್ಗದವರು ಮತ್ತು ನಗರಸಭೆ ಸಿಬ್ಬಂದಿ ವರ್ಗದವರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
————————————————————————-
ಚಳ್ಳಕೆರೆ ತಾಲೂಕು ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನ
ಸುದ್ದಿಒನ್, ಚಳ್ಳಕೆರೆ, ಸೆಪ್ಟೆಂಬರ್. 30 : ಒಂದು ದಿನ ಸ್ವಚ್ಛತೆ ಮಾಡಿದರೆ ಸಾಲದು ಪ್ರತಿದಿನ ಸ್ವಚ್ಛತೆ ಮಾಡುತ್ತಿದ್ದರೆ ನಾವು ಇರುವಂತಹ ಪರಿಸರ ಸ್ವಚ್ಛವಾಗಿರುತ್ತದೆ. ಪರಿಸರ ಸ್ವಚ್ಛವಾದರೆ ಇಲ್ಲಿ ವಾಸ ಮಾಡುವಂತಹ ಜನರು ಆರೋಗ್ಯವಂತರಾಗಿರುತ್ತಾರೆ ಎಂದು ಚಳ್ಳಕೆರೆ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ರೇಷ್ಮಾ ಕಲಕಪ್ಪ ಗೋನಿ ಹೇಳಿದರು.
ಸೋಮಗುದ್ದು ರಸ್ತೆಯ ನ್ಯಾಯಾಲಯದ ಆವರಣದಲ್ಲಿ ಇಂದು ಸ್ವಚ್ಛತಾ ಅಭಿಯಾನಕ್ಕೆ ಕಸ ಗುಡಿಸುವುದರ ಮೂಲಕ ಚಾಲನೆ ನೀಡಿ ನಂತರ ಮಾತನಾಡಿ, ಸ್ವಚ್ಛತೆಗೆ ಪ್ರತಿಯೊಬ್ಬರು ಆದ್ಯತೆ ನೀಡಬೇಕು. ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛತೆಯಿಂದ ಕೂಡಿದ್ದರೆ ಇಲ್ಲಿ ವಾಸ ಮಾಡುವಂತಹ ಪ್ರತಿಯೊಬ್ಬರೂ ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ. ಸ್ವಚ್ಛತೆಯ ವಿಷಯವಾಗಿ ಬರೆ ಭಾಷಣಗಳು ಮಾಡಿದರೆ ಸಾಲದು ಅದಕ್ಕೆ ತಕ್ಕ ಹಾಗೆ ಸ್ವಚ್ಛತೆಯನ್ನ ಮಾಡಲು ಎಲ್ಲರೂ ಮುಂದಾಗಬೇಕು ಜೊತೆಗೆ ಪರಿಸರ ಸಂರಕ್ಷಣೆ, ಕಾಡುಗಳ ರಕ್ಷಣೆ ಪ್ರಾಣಿಗಳ ರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಗೌಡ ಜಗದೀಶ ರುದ್ರೆ ಮಾತನಾಡಿ ನ್ಯಾಯಾಲಯದ ಕಲೋಪಗಳಿದ್ದರೂ ಇಂದು ನಾವು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಭಾರತದಲ್ಲಿ ಇಂದು ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ನಾವು ನಮ್ಮ ಪರಿಸರವನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕು ನಾವು ಇರುವಂತಹ ಸ್ಥಳ ಹಾಗೂ ನಮ್ಮ ಕಚೇರಿಗಳಲ್ಲಿ ಸುತ್ತಮುತ್ತ ಸ್ಥಳಗಳಲ್ಲಿ ಸ್ವಚ್ಛತೆಯನ್ನ ಕಾಪಾಡಿಕೊಳ್ಳಬೇಕು. ಇದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ ನಾವು ಸ್ವಚ್ಛತಾ ಅಭಿಯಾನದ ಪ್ರಯುಕ್ತ ಎಂದು ಕೋರ್ಟ್ ಆವರಣ ಸ್ವಚ್ಛ ಗೊಳಿಸಿದ್ದೇವೆ ಎಂದರು.
ಅಪರ ಸಿವಿಲ್ ನ್ಯಾಯಾಧೀಶರಾದ ಆರ್ ಹೇಮ ಮಾತನಾಡಿ ನಾವು ನಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಮಾಡಿಕೊಳ್ಳಬೇಕು. ಪ್ಲಾಸ್ಟಿಕ್ ಹಾಗೂ ಮಣ್ಣಿನಲ್ಲಿ ಕರಗದಂತಹ ವಸ್ತುಗಳನ್ನು ಅತಿಯಾಗಿ ಬಳಕೆ ಮಾಡಬಾರದು. ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಸ್ವಚ್ಛತೆ ಮಾಡಲು ಜಾಗೃತಿ ಮೂಡಿಸಿ ಎಂದರು.
ವಕೀಲರ ಸಂಘದ ಅಧ್ಯಕ್ಷರಾದ ಕೆ ಎಂ ನಾಗರಾಜ್ ಮಾತನಾಡಿ ಚಳ್ಳಕೆರೆ ನ್ಯಾಯಾಲಯ ಹಾಗೂ ವಕೀಲರ ಸಂಘ ಮತ್ತು ನಗರಸಭೆ ವತಿಯಿಂದ ಎಂದು ನ್ಯಾಯಾಲಯದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ನಮ್ಮ ಜೊತೆಗೂಡಿ ನ್ಯಾಯಾಧೀಶರು ಸಹ ಈ ಕಾರ್ಯದಲ್ಲಿ ಭಾಗಿಯಾಗಿ ಸ್ವಚ್ಛತೆಗೆ ಆದ್ಯತೆ ನೀಡಿದರು ಎಂದರು.
ಪೌರಯುಕ್ತ ಸಿ ಚಂದ್ರಪ್ಪ ಮಾತನಾಡಿ ಗಾಂಧಿ ಜಯಂತಿ ಪ್ರಯುಕ್ತ ನಾವು ಒಂದನೇ ತಾರೀಕು ನಗರದಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು ಇಂದು ನ್ಯಾಯಾಲಯ ಹಾಗೂ ನಗರಸಭೆ ವತಿಯಿಂದ ನಗರಸಭೆ ಆವರಣ ಸುತ್ತಮುತ್ತ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದರು. ಈ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಜಿಟಿ.ನಾಗರಾಜ್ ಎನ್.ತಿಪ್ಪೇಸ್ವಾಮಿ ಬಿ.ಗುರುಮೂರ್ತಿ ಸಣ್ಣ ಓಬಯ್ಯ,ಟಿ.ನಾಗದೇಂದ್ರಪ್ಪ,ಕೆ.ಬಿ ಪ್ರಭಾಕರ್ ಬೋರನಾಯಕ,ಶ್ರೀನಿವಾಸ್, ನ್ಯಾಯಾಲಯದ ಶಿರಸ್ತೆದಾರ್ ರೇಖ,ನಿಸಾರ್ ಅಹಮದ್, ಸಿಬ್ಬಂದಿ ಕಾಡೇಶ,ನ್ಯಾಯಾಲಯದ ನಗರ ಸಭೆ ಎಂಜಿನಿಯರ್ ನರೇಂದ್ರಬಾಬು ಆರೋಗ್ಯ ಅಧಿಕಾರಿ,ಗೀತ,ಸಿಬ್ಬಂದಿವರ್ಗ ಚಾಲಕರು,ಇದ್ದರು.