ಜೆಡಿಎಸ್ ನಲ್ಲಿ ಕುಟುಂಬದಲ್ಲಿಯೇ ಟಿಕೆಟ್ ಫೈಟ್ ಶುರುವಾಗಿದೆ. ಹಾಸನದಿಂದ ಭವಾನಿ ರೇವಣ್ಣ ಸ್ಪರ್ಧೆಗೆ ಇಳಿದಿದ್ದಾರೆ. ಆದ್ರೆ ಟಿಕೆಟ್ ವಿಚಾರದಲ್ಲಿ ಪರ ವಿರೋಧ ಕೇಳಿ ಬರುತ್ತಿದೆ. ಕುಮಾರಸ್ವಾಮಿ ಟಿಕೆಟ್ ಗೆ ಒಪ್ಪಿಗೆ ನೀಡುತ್ತಿಲ್ಲ. ಆ ಕಡೆ ಪತಿ ರೇವಣ್ಣ ಕಡೆಯಿಂದ ಟಿಕೆಟ್ ಗೆ ಒತ್ತಡ ಹಾಕುತ್ತಿದ್ದಾರೆ. ಇದರ ನಡುವೆ ಮಗ ಸೂರಜ್ ಕೂಡ ಅಮ್ಮನ ಪರವಾಗಿ ನಿಂತಿದ್ದಾರೆ. ಬಿಜೆಪಿ ನಾಯಕರು ಕೂಡ ಭವಾನಿ ರೇವಣ್ಣ ಅವರಿಗೆ ನಮ್ಮ ಪಕ್ಕಕ್ಕೆ ಬನ್ನಿ ಅಂತ ಕರೆಯುತ್ತಿದ್ದಾರೆ.
ಈ ವಿಚಾರ ಚರ್ಚೆಗೆ ಬರುತ್ತಿದ್ದಂತೆ ಹೆಚ್ ಡಿ ರೇವಣ್ಣ ಅವರು ಮೌನ ಮುರಿದಿದ್ದಾರೆ. ಕುಮಾರಸ್ವಾಮಿ ಹಾಗೂ ರೇವಣ್ಣರನ್ನು ಬೇರ್ಪಡಿಸುವುದಕ್ಕೆ ಆಗಲ್ಲ. ಬೇರ್ಪಡಿಸುತ್ತೇವೆ ಅಂತ ಯಾರಾದ್ರೂ ಎಂದುಕೊಂಡರೆ ಅದು ಭ್ರಮನಿರಸವಾಗಿರುತ್ತದೆ. ನಮ್ಮ ಜಿಲ್ಲೆಯ ಏಳು ಕ್ಷೇತ್ರದ ಟಿಕೆಟ್ ಅನ್ನು ದೇವೇಗೌಡ ಅವರು, ಕುಮಾರಸ್ವಾಮಿ ಅವರು, ಸಿ ಎಂ ಇಬ್ರಾಹಿಂ ಅವರೇ ತೀರ್ಮಾನಿಸುತ್ತಾರೆ ಎಂದಿದ್ದಾರೆ.
ಹಾಸನ ಜಿಲ್ಲೆ ಕಳೆದ ಹತ್ತು ವರ್ಷದಿಂದ ಅಭಿವೃದ್ಧಿಯಾಗಿಲ್ಲ. ಕುಮಾರಣ್ಣ ಬರದಿದ್ದರೆ ಹಾಸನದ ಆಸ್ಪತ್ರೆ ಆಗಲ್ಲ. ಕೆಲವರು ಹಾಸನ ಟಿಕೆಟ್ ಅನ್ನು ಭವಾನಿ ಅವರಿಗೆ ಕೊಡಿ ಅಂತಾರೆ, ಇನ್ನು ಕೆಲವರು ಬೇರೆಯವರಿಗೆ ಕೊಡಿ ಅಂತಾರೆ. ಅದನ್ನು ತೀರ್ಮಾನ ಮಾಡುವುದು ಪಕ್ಷ. ನಾನಾಗಲೀ, ಸೂರಜ್ ಆಗಲೀ, ರೇವಣ್ಣ ಆಗಲಿ ಅಲ್ಲ ಎಂದಿದ್ದಾರೆ.