ಹಾಸನ : ತಮ್ಮವರಿಗಾಗಿ, ತಾವೂ ಫಾಲೋ ಮಾಡೋ ವ್ಯಕ್ತಿಗಾಗಿ ಸಾಕಷ್ಟು ಜನ ವಿಭಿನ್ನ ರೀತಿಯಲ್ಲಿ ತಮ್ಮ ಅಭಿಮಾನ ತೋರಿಸುತ್ತಾರೆ. ಅದರಲ್ಲೂ ರಾಜಕೀಯ ವ್ಯಕ್ತಿಗಳ ಗೆಲುವಿಗಾಗಿ ಅಭಿಮಾನಿಗಳು ಬೆಂಬಲಿಗರು ದೇವರ ಮೊರೆ ಹೋಗೋದು ಸರ್ವೇ ಸಾಮಾನ್ಯ. ಇಲ್ಲೊಬ್ಬ ಬೆಂಬಲಿಗ ಕೂಡ ತಮ್ಮ ನಾಯಕ ಸೂರಜ್ ರೇವಣ್ಣ ಗೆಲ್ಲಲಿ ಅಮನತ ಶಬರಿ ಮಲೆಗೆ ಹೋಗಿಬಂದಿದ್ದಾರೆ.

ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಎಲ್ಲೆಲ್ಲೂ ರಂಗೇರಿದೆ. ಹಾಸನದಲ್ಲಿ ಈ ಬಾರಿ ಜೆಡಿಎಸ್ ನಿಂದ ಅಭ್ಯರ್ಥಿಯಾಗಿ ರೇವಣ್ಣ ಅವರ ಮತ್ತೊಬ್ಬ ಪುತ್ರ ಸೂರಜ್ ರೇವಣ್ಣ ಚುನಾವಣೆ ಕಣದಲ್ಲಿದ್ದಾರೆ. ಇವರು ಗೆಲ್ಲಲಿ ಎಂದು ಅಭಿಮಾನಿಯೊಬ್ಬ ಹರಕೆ ಹೊತ್ತಿದ್ದಾನೆ. ನವೀನ್ ಕುಮಾರ್ ಎಂಬಾತ ಹರಕೆ ಹೊತ್ತು ಶಬರಿಮಲೆಗೆ ತೆರಳಿ ಸ್ವಾಮಿ ಅಯ್ಯಪ್ಪನ ದರ್ಶನ ಮಾಡಿದ್ದಾರೆ.

ಹಾಸನ ಜಿಲ್ಲೆ, ಹೊಳೆನರಸೀಪುರ ತಾಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದ ಯುವಕ ನವೀನ್ ಕುಮಾರ್. ಸೂರಜ್ ರೇವಣ್ಣ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಆಗಲಿ ಎಂದು ಎರಡು ಬಾಳೆಹಣ್ಣಿನ ಮೇಲೆ ಬರೆದು ದೇವರಿಗೆ ಪ್ರಾರ್ಥನೆ ಮಾಡಿದ್ದಾರೆ. ಮೊಬೈಲ್ ನಲ್ಲಿ ಸೂರಜ್ ಪೋಟೋ, ಬಾಳೆಹಣ್ಣು ಹಿಡಿದುಕೊಂಡಿರುವ ಯುವಕನ ಫೋಟೋ ವೈರಲ್ ಆಗಿದೆ.


