ನವದೆಹಲಿ: ಇಂದು ಸುಪ್ರೀಂ ಕೋರ್ಟ್ ನೋಟಿ ಅಮಾನ್ಯೀಕರಣದ ತೀರ್ಪು ಪ್ರಕಟ ಮಾಡಲಿದೆ. ಪ್ರಧಾನಿ ಮೋದಿ ಸರ್ಕಾರ 2016ರಲ್ಲಿ 1000 ಮತ್ತು 500 ರೂಪಾಯಿ ನೋಟು ಅಮಾನ್ಯೀಕರಣ ಮಾಡಿತ್ತು. ನೋಟು ಅಮಾನ್ಯೀಕರಣ ಪ್ರಶ್ನಿಸಿ 58 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿಗಳ ವಿಚಾರಣೆ ಸಂಬಂಧ ಇಂದು ತೀರ್ಪು ಪ್ರಕಟವಾಗಲಿದೆ.

ಜನವರಿ 4ರಂದು ನಿವೃತ್ತರಾಗಲಿರುವ ನ್ಯಾಯಮೂರ್ತಿ ಎಸ್ ಎ ನಜೀರ್ ನೇತೃತ್ವದ ಸಂವಿಧಾನ ಪೀಠವು ಆ ತೀರ್ಪು ನೀಡಲಿದೆ. ಈ ಅರ್ಜಿಯನ್ನು ನ್ಯಾಯಮೂರ್ತಿ ಗವಾಯಿ ಅವರು ಎತ್ತಿ ಹಿಡಿದ್ದರೆ, ಇದೇ ಪೀಠದ ಮತ್ತೊಬ್ಬರು ನ್ಯಾಯಮೂರ್ತಿ ನಾಗರತ್ನ ಅವರು ಭಿನ್ನ ತೀರ್ಪು ನೀಡಿದ್ದಾರೆ. ನೋಟುಗಳ ಅಮಾನ್ಯ ಮಾಡಲು ಕಾನೂನಿನ ಅಗತ್ಯವಿತ್ತು ಎಂದು ತಿಳಿಸಿದ್ದಾರೆ.

ಐವರು ನ್ಯಾಯಮೂರ್ತಿಗಳು ಈ ಅರ್ಜಿಯ ವಿಚಾರಣೆ ನಡೆಸಿದ್ದರು. ಇಂದು ಈ ಸಂಬಂಧ ಮಹತ್ವದ ತೀರ್ಪು ಪ್ರಕಟವಾಗಲಿದೆ. 2016ರಲ್ಲಿ ನೋಟು ಅಮಾನ್ಯೀಕರಣಗೊಂಡಾಗ ಸಾಕಷ್ಟು ಸಮಸ್ಯೆ ಕೂಡ ಎದುರಾಗಿತ್ತು. ಹೀಗಾಗಿ ಈ ಪ್ರಕರಣಟಕ್ಕೆ ಸಂಬಂಧಿಸಿದಂತೆ ಅರ್ಜಿಗಳು ಸಲ್ಲಿಕೆಯಾಗಿದ್ದವು.

