ನವದೆಹಲಿ: ಶಾರುಖ್ ಖಾನ್ ವಿಚಾರದಲ್ಲಿ ಕಾಂಗ್ರೆಸ್ ಮುಖಂಡನಿಗೆ ಹಿನ್ನಡೆಯಾಗಿದೆ. 2017ರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸೆಲೆಬ್ರೆಟಿಗಳಿಗೂ ಹಕ್ಕುಗಳಿವೆ ಎಂಬುದನ್ನು ಹೇಳಿದೆ.
2017ರಲ್ಲಿ ಶಾರುಖ್ ಖಾನ್ ಸಿನಿಮಾ ರಯೀಸ್ ಸಿನಿಮಾ ರಿಲೀಸ್ ಆಗಿತ್ತು. ಅದಕ್ಕೂ ಮುನ್ನ ಪ್ರಚಾರ ಕಾರ್ಯವನ್ನು ಮಾಡಲಾಗಿತ್ತು. ಈ ವೇಳೆ ವಡೋದರಾ ರೈಲ್ವೆ ನಿಲ್ದಾಣದಲ್ಲಿ ನೂಕು ನುಗ್ಗಲಿನಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ. ಈ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ಜಿತೇಂದರ್ ಸೋಲಂಕಿ ಕೋರ್ಟ್ ಮೆಟ್ಟಿಲೇರಿದ್ದರು. ಗುಜರಾತ್ ಹೈಕೋರ್ಟ್ ಈ ಕೇಸನ್ನು ರದ್ದು ಮಾಡಿತ್ತು. ಬಳಿಕ ಹೈಕೋರ್ಟ್ತೀರ್ಪು ಪ್ರಶ್ನಿಸಿ ಸೋಲಂಕಿ, ಸುಪ್ರೀಂ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ತೀರ್ಪನ್ನೇ ಎತ್ತಿ ಹಿಡಿದಿದೆ. ಶಾರುಖ್ ಖಾನ್ ಮಾಡಿದ ತಪ್ಪಾದರೂ ಏನು..? ಸೆಲೆಬ್ರೆಟಿಯಾಗಿರುವುದೇ..? ಸೆಲೆಬ್ರೆಟಿಗಳಿಗೂ ಹಕ್ಕು ಇದೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ತಿಳಿಸಿದ್ದಾರೆ. ಎಲ್ಲರ ಭದ್ರತೆಯ ಜವಾಭ್ದಾರಿಯನ್ನು ಶಾರುಖ್ ಖಾನ್ ಹೊರಲು ಸಾಧ್ಯವಿಲ್ಲ. ಯಾರಾದರೂ ರೈಲಿನಲ್ಲಿ ಪ್ರಯಾಣ ಮಾಡಬೇಕಾದರೆ ಇತರರ ಜೀವದ ಜವಾಬ್ದಾರಿಯನ್ನು ಹೊರಲು ಹೇಗೆ ಸಾಧ್ಯವಿಲ್ಲವೊ ಹಾಗೆಯೇ ಶಾರುಖ್ ಖಾನ್ ಸಹ ಇತರರ ಜೀವಕ್ಕೆ ಜವಾಬ್ದಾರರಾಗಿರುವುದಿಲ್ಲ ಎಂದಿದ್ದಾರೆ.