ನವದೆಹಲಿ: ಪ್ರಧಾನಿ ಮೋದಿ ಅವರ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನ ಹೊರಡಿಸಿದೆ. ಘಟನೆಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ತನಿಖೆಯನ್ನು ನಿಲ್ಲಿಸಲು ಸೂಚನೆ ನೀಡಿದೆ.
ಇದೀಗ ಭದ್ರತಾ ಲೋಪ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಎಲ್ಲಾ ರೀತಿಯ ತನಿಖೆಗಳನ್ನು ಸ್ಥಗಿತಗೊಳಿಸುವಂತೆ ಆದೇಶ ನೀಡಿದೆ. ಅಲ್ಲದೆ ನಾಲ್ವರ ನೇತೃತ್ವದ ತಂಡವನ್ನ ಕೋರ್ಟ್ ರಚಿಸಿದೆ.
ಇತ್ತೀಗಷ್ಟೇ ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಗೆ ಭೇಟಿ ನೀಡಿದಾಗ ಭದ್ರತಾ ಲೋಪ ಎದುರಾಗಿತ್ತು. ಸುಮಾರು 20 ನಿಮಿಷಗಳ ಕಾಲ ಪಂಜಾಬ್ ಫ್ಲೈಓವರ್ ಮೇಲೆಯೆ ಸಿಕ್ಕಿ ಹಾಕಿಕೊಂಡಿದ್ದರು. ಅಲ್ಲಿನ ಸರ್ಕಾರ ಸರಿಯಾದ ರೀತಿಯಲ್ಲಿ ಪ್ರಧಾನಿಗೆ ಭದ್ರತೆ ಒದಗಿಸಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಆ ಸಂಬಂಧ ತನಿಖೆಯೂ ನಡೆಯುತ್ತಿತ್ತು. ಪಂಜಾಬ್ ಸಿಎಂ ಈ ವಿಚಾರವಾಗಿ ಸ್ಪಷ್ಟನೆ ಕೂಡ ನೀಡಿದ್ದರು.