ನವದೆಹಲಿ: ಮಗಳ ಹತ್ಯೆ ಕೇಸಿನಲ್ಲಿ ಜೈಲು ಸೇರಿದ್ದ ಇಂದ್ರಾಣಿ ಮುಖರ್ಜಿಗೆ ಕಡೆಗೂ ಜಾಮೀನು ಸಿಕ್ಕಿದೆ. ಎನ್ಎಕ್ಸ್ ಕಂಪನಿಯ ಮಾಲಿಕಿ ಇಂದ್ರಾಣಿ ಮುಖರ್ಜಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ. 2015ರಿಂದ ಮಗಳ ಕೊಲೆಯ ಆರೋಪದ ಮೇಲೆ ಜೈಲಿನಲ್ಲಿಯೇ ಇದ್ದಳು.
2012ರ ಏಪ್ರಿಲ್ ನಲ್ಲಿ ಇಂದ್ರಾಣಿ ಮುಖರ್ಜಿ, ಆಕೆಯ ಕಾರು ಚಾಲಕ ಶ್ಯಾಮ್ ರಾವ್ ರೈ ಮತ್ತು ಆಕೆಯ ಮಾಜಿ ಪತಿ ಸಂಜೀವ್ ಖನ್ಬಾ ಸೇರಿ, ಮಗಳು ಶೀನಾ ಬೋರಾಳನ್ನು ಕೊಲೆ ಮಾಡಿದ್ದರು. ಬಳಿಕ ರಾಯಗಢ ಜಿಲ್ಲೆಯ ಕಾಡಿನಲ್ಲಿ ಎಸೆದು ಸುಟ್ಟು ಹಾಕಿದ್ದರು ಎನ್ನಲಾಗಿದೆ. ಈ ಪ್ರಕರಣ ಸಂಬಂಧ 2015ರಲ್ಲಿ ಮುಂಬೈ ಪೊಲೀಸರು ಇಂದ್ರಾಣಿ ಮುಖರ್ಜಿಯನ್ನು ಅರೆಸ್ಟ್ ಮಾಡಿದ್ದರು. ಬಳಿಕ ಈ ಕೇಸ್ ಸಿಬಿಐಗೆ ವರ್ಗಾವಣೆಯಾಗಿತ್ತು.
ನ್ಯಾ. ಎಲ್ ನಾಗೇಶ್ವರ ರಾವ್ ಮತ್ತು ನ್ಯಾ. ಬಿ.ಆರ್ ಗವಾಯ್ ಅವರಿದ್ದ ಪೀಠ ಜಾಮೀನು ಮಂಜೂರು ಮಾಡಿದೆ. ಬಾಂಬೆ ಹೈಕೋರ್ಟ್ 2021ರ ನವೆಂಬರ್‌ನಲ್ಲಿ ಶೀನಾ ಬೋರಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು. ಈ ಆದೇಶವನ್ನು ಶೀನಾ ಬೋರಾ ಸುಪ್ರೀಂನಲ್ಲಿ ಪ್ರಶ್ನಿಸಿದ್ದರು. ಇದೀಗ ಜಾಮೀನು ಮಂಜೂರಾಗಿದೆ.