Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಬೆಂಬಲಿಸಿ ಆಗಸ್ಟ್ 05 ರಂದು ಬೃಹತ್ ಪ್ರತಿಭಟನೆ : ಸಿ.ಟಿ.ಕೃಷ್ಣಮೂರ್ತಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

 

ಸುದ್ದಿಒನ್, ಚಿತ್ರದುರ್ಗ ಆ. 03 :  ಇತ್ತೀಚಿಗೆ ವಿರೋಧ ಪಕ್ಷಗಳ ಷಡ್ಯಂತರ ಮತ್ತು ರಾಜ್ಯದ ರಾಜ್ಯಪಾಲರ ಅನುಮಾನಸ್ಪದ ನಡೆಯನ್ನು ಚಿತ್ರದುರ್ಗ ಜಿಲ್ಲಾ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಘೋರವಾಗಿ ಖಂಡಿಸಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಬೆಂಬಲಿಸಿ ವಿವಿಧ ಸಮುದಾಯಗಳ ಮುಖಂಡರುಗಳು ಆ. 05 ರಂದು  ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಸಿ.ಟಿ.ಕೃಷ್ಣಮೂರ್ತಿ ತಿಳಿಸಿದರು.

ಚಿತ್ರದುರ್ಗ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಿರುವ ಸಿದ್ಧರಾಮಯ್ಯರವರು ಕಳೆದ ಸರ್ಕಾರದಲ್ಲಿ ಕೊಟ್ಟಂತಹ 165 ಭರವಸೆಗಳಲ್ಲಿ ಬಹುತೇಕ ಭರವಸೆಗಳನ್ನು ಈಡೇರಿಸಿ ರಾಜ್ಯದ ಶೋಷಿತ ಸಮುದಾಯಗಳಿಗೆ ಶಕ್ತಿ ನೀಡುವ ಕೆಲಸ ಮಾಡಿದ್ದಾರೆ. ಅಲ್ಲದೇ ಈ ಬಾರಿಯು ಕೂಡ ಎಲ್ಲಾ ಜಾತಿಯ, ಎಲ್ಲಾ ವರ್ಗದ ಬಡವರಿಗೆ ಪಂಚ ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾರಿಗೊಳಿಸಿ ಈ ಸಮುದಾಯಗಳ ಧ್ವನಿಯಾಗಿ ಆಡಳಿತ ನಡೆಸಿಕೊಂಡು ಬಂದು ರಾಜ್ಯಾದ್ಯಂತ ಜನಪ್ರಿಯತೆಯನ್ನು ಗಳಿಸಿದ್ದಾರೆ.

ಅವರ ರಾಜಕೀಯ ಜೀವನದ ಇತಿಹಾಸದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೇ ಆಡಳಿತವನ್ನು ನಡೆಸುತ್ತಿರುವುದು ವಿರೋಧಪಕ್ಷಗೊಳಿಗೆ ಸಹಿಸಲಾಗದೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕುತಂತ್ರ ಕುಯುಕ್ತಿಗಳನ್ನು ನಡೆಸಿ ಷಡ್ಯಂತರ ರೂಪಿಸಿ ಅವರ ತೇಜೋವದೆಯನ್ನು ಮಾಡಲು ಯತ್ನಿಸುತ್ತಿವೆ ಅದು ನಡೆಯುವುದಿಲ್ಲ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಧರ್ಮಪತ್ನಿಯ ಅಣ್ಣ ಅವರು ತವರಿನ ಬಳುವಳಿಯಾಗಿ ನೀಡಿದ ಭೂಮಿಯನ್ನು ಮೂಡ ಆಕ್ರಮಿಸಿಕೊಂಡು ಶೇಕಡ
50 : 50ರ ಅನುಪಾತದಲ್ಲಿ ನಿವೇಶನ ನೀಡಲು ನಿರ್ಧರಿಸಿದ್ದು ಸರಿಯಷ್ಟೆ. ಆದರೆ ತವರಿನ ಬಳುವಳಿಯನ್ನು ಬಿಟ್ಟುಕೊಡಲು ಮನಸ್ಸಿಲ್ಲದೇ ಮೂಡದಿಂದ ಬದಲಿಗೆ ನಿವೇಶನ ನೀಡುವಂತೆ ಮುಖ್ಯಮಂತ್ರಿಯವರ ಧರ್ಮಪತ್ನಿ ಶ್ರೀಮತಿ ಪಾರ್ವತಮ್ಮ ಬೇಡಿಕೆ ಇಟ್ಟಿದ್ದು, ಅದರಂತೆ 2022ರಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರ ಆಡಳಿತದಲ್ಲಿದ್ದಾಗ ಬದಲಿ ನಿವೇಶನಗಳನ್ನು ಪಡೆದುಕೊಂಡಿರುತ್ತಾರೆ. ಇದರಲ್ಲಿ ಮುಖ್ಯಮಂತ್ರಿಯವರ ಯಾವ ತಪ್ಪಿದೆ ಎಂದು ಪ್ರಶ್ನಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಮುಖ್ಯಮಂತ್ರಿಗೆ ಹೇಗೆ ಸಂಬಂಧಪಡಲಿಕ್ಕೆ ಸಾಧ್ಯ. ಅದು ನಿಯಮಾನುಸಾರ ಬಜೆಟ್‌ನಲ್ಲಿ ಮೀಸಲಿಟ್ಟ ಹಣವನ್ನು ಖಜಾನೆಯ ಮುಖಾಂತರ ನಿಗಮಕ್ಕೆ ವರ್ಗಾವಣೆಗೊಂಡಿರುತ್ತದೆ. ಅನುದಾನ ವರ್ಗಾವಣೆಗೊಂಡ ಮೇಲೆ ಅದರ ನಿರ್ವಹಣೆಯ ಜವಾಬ್ದಾರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಇವರ ವ್ಯಾಪ್ತಿಯಲ್ಲಿರುತ್ತದೆ. ತಪ್ಪು ಯಾರೇ ಮಾಡಿರಲಿ ಎರಡು ಪ್ರಕರಣಗಳನ್ನು ಈಗಾಗಲೇ ಮುಖ್ಯಮಂತ್ರಿಗಳು ಪ್ರತ್ಯೇಕ ತನಿಖಾ ಸಂಸ್ಥೆಗಳನ್ನು ಸ್ಥಾಪಿಸಿ ತನಿಖೆಗೆ ಒಳಪಡಿಸಿರುತ್ತಾರೆ.

ಆದಾಗ್ಯೂ ಸಹ ವಿರೋಧ ಪಕ್ಷಗಳು ಷಡ್ಯಂತರಗಳನ್ನು ರೂಪಿಸಿ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ತೇಜೋವಧೆ ಮಾಡಲು ಹೊರಟಿರುವುದು ರಾಜ್ಯದ ಜನತೆಯಲ್ಲಿ ವಿರೋಧಪಕ್ಷಗಳ ನಡೆ ಬಗ್ಗೆ ಅಸಹ್ಯ ಮೂಡಿಸುತ್ತಿದೆ. ಅಲ್ಲದೇ ಕೇಂದ್ರ ಸರ್ಕಾರವನ್ನು ಬಳಸಿಕೊಂಡು ರಾಜ್ಯಪಾಲರನ್ನು ಕೈಗೊಂಬೆ ಮಾಡಿಕೊಂಡು ಅವರಿಂದ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಯಾರೋ ಒಬ್ಬ ದಾರಿ ಹೋಕ ಕೊಟ್ಟ 200 ಪುಟಗಳ ದೂರನ್ನು ಪರಿಶೀಲಸದೇ ಕೇವಲ 6ಗಂಟೆಯಲ್ಲಿ ನೋಟೀಸ್ ಜಾರಿ ಮಾಡಿರುವುದು ಇಡೀ ರಾಜ್ಯದ ಜನತೆಗೆ ನೋವನ್ನುಂಟು ಮಾಡಿದೆ ಎಂದಿದ್ದಾರೆ.

ಚಿತ್ರದುರ್ಗ ಜಿಲ್ಲಾ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಸಿದ್ಧರಾಮಯ್ಯನವರನ್ನು ಬೆಂಬಲಿಸಿ ಆ.5ರಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಬೆಳಿಗ್ಗೆ 10.30ಕ್ಕೆ ಪ್ರತಿಭಟನೆಯ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಛೇರಿಗೆ ಖಂಡನಾ ಮನವಿ ಪತ್ರ ನೀಡಲಾಗುವುದು ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಸಿದ್ಧರಾಮಯ್ಯ ಅಭಿಮಾನಿಗಳು, ಶೋಷಿತ ಸಮುದಾಯಗಳ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಅಲ್ಪಸಂಖ್ಯಾತ, ದಲಿತ, ಹಿಂದುಳಿದ ಅಲೆಮಾರಿ / ಅರೆಅಲೆಮಾರಿ ಎಲ್ಲಾ ಬುಡಕಟ್ಟು ಸಮುದಾಯಗಳ ಮುಖಂಡರುಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ದಲಿತ ಸಂಘರ್ಷ ಸಮಿತಿಯ ಮುಖಂಡ ಡಿ.ದುರುಗೇಶಪ್ಪ ಮಾತನಾಡಿ ಧ್ವನಿ ಇಲ್ಲದ ಸಮುದಾಯಗಳಿಗೆ ಧ್ವನಿನೀಡಿ ಸಮ-ಸಮಾಜದ ನಿರ್ಮಾಣದ ಕನಸನ್ನು ಈಡೇರಿಸಲು ಬಸವಾದಿ ಶರಣರ ಹಾದಿಯಲ್ಲಿ ನಡೆಯುತ್ತಿರುವ ಸನ್ಮಾನ್ಯ ಸಿದ್ಧರಾಮಯ್ಯನವರ ಆಡಳಿತಕ್ಕೆ ಈ ರೀತಿಯ ತೊಂದರೆಗಳನ್ನು ಹುಟ್ಟಿ ಹಾಕುವ ವಿರೋಧ ಪಕ್ಷಗಳ ಷಡ್ಯಾಂತರ ಹಾಗೂ ರಾಜ್ಯಪಾಲರ ಈ ರೀತಿಯ ಏಕಪಕ್ಷೀಯ ನಡೆಯನ್ನು ನಾವು ಘೋರವಾಗಿ ಖಂಡಿಸುತ್ತೇವೆ. ಇಡೀ ರಾಜ್ಯಾದ್ಯಂತ ಜನಾಂದೋಲನಾ ನಡೆಸಲಾಗುವುದೆಂದರು.

ಖಾನ್‌ಸಾಬ್ ಮಾತನಾಡಿ ನಮ್ಮ ಅಲ್ಪಸಂಖ್ಯಾಂತ ಸಮುದಾಯ ಸೇರಿದಂತೆ ಎಲ್ಲಾ ಜಾತಿಯ ಬಡವರಿಗೆ ರಕ್ಷಣೆ ನೀಡುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯವರಿಗೆ ತೊಂದರೆ ನೀಡಿದ್ದಲ್ಲಿ ನಾವು ರಾಜ್ಯದಲ್ಲೇ ಉಗ್ರ ಪ್ರತಿಭಟನೆಗಳನ್ನು ಕೈಗೊಂಡು ವಿರೋಧ ಪಕ್ಷಗಳಿಗೆ ಮತ್ತು ರಾಜ್ಯಪಾಲರಿಗೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರುಗಳಾದ ನಗರಸಭಾ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ ಜಿ.ಪಂ. ಮಾಜಿ ಸದಸ್ಯ ಪ್ರಕಾಶ್‌ಮೂರ್ತಿ, ಉಪ್ಪಾರ ಸಮುದಾಯದ ಮುಖಂಡ ಮೂರ್ತಿ, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ಕ.ರ.ವೇ ಅಧ್ಯಕ್ಷ ನಗರಸಭಾ ಸದಸ್ಯ ರಮೇಶ್, ಟೀಪು ಖಾಸೀಂ ಅಲಿ ಅಲೆಮಾರಿ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ್, ಕುರುಬರ ಸಂಘದ ಅಧ್ಯಕ್ಷ ಶ್ರೀರಾಮ್, ನಗರಸಭಾ ಸದಸ್ಯೆ ಪಿ.ಕೆ.ಮೀನಾಕ್ಷಿ, ರಾಜ್ಯ ಅಲ್ಪಸಂಖ್ಯಾತರ ಮಹಿಳಾ ಮುಖಂಡರಾದ ಮುನೀರಾ ಮಕದ್ದರ್, ಛಲವಾದಿ ಸಮುದಾಯ ಮುಖಂಡರ ರವಿಪೂಜಾರ್, ಸವಿತ ಸಮಾಜದ ಮುಖಂಡ  ಎನ್.ಡಿ.ಕುಮಾರ್, ಯುವ ಮುಖಂಡ ಯಾಸೀನ್, ಕುರುಬರ ಸಮಾಜದ ಖಜಾಂಚಿ ಮೃತ್ಯುಂಜಯ, ಕುರುಬ ಸಮಾಜದ ಮುಖಂಡರಾದ ಮಾಲ್ತೇಶ್, ಬಡಗಿ ಸಂಘದ ಅಧ್ಯಕ್ಷರಾದ ಜಾಕೀರ್, ಎದ್ದೇಳು ಕರ್ನಾಟಕ ಸಂಘಟನೆಯ ಟಿ.ಶಫೀವುಲ್ಲಾ, ಮುಖಂಡ ಕಬಲಾಹುಸೇನ್, ವಲಿಖಾದ್ರಿ ನೇತಾ, ಲಂಬಾಣಿ ಸಮಾಜದ ಜಿಲ್ಲಾಧ್ಯಕ್ಷ ಪ್ರಕಾಶ್‌ರಾಮನಾಯ್ಕ್, ಗ್ಯಾರಂಟಿ ಸಮಿತಿಯ ಜಿಲ್ಲಾಧ್ಯಕ್ಷರಾದ ಗಂಜಿಗಟ್ಟೆ ಶಿವಣ್ಣ, ಸೈಯದ್ ಖುದ್ದೂಸ್, ರಾಜ್ಯ ಸಂಚಾಲಕರಾದ ಬಿ.ಟಿ.ಜಗದೀಶ್, ಯಾದವ ಸಮಾಜದ ಮುಖಂಡರಾದ ಟ್ರಜೂರಿ ಮೈಲಾರಪ್ಪ, ಪೈಲ್ವಾನ್ ತಿಮ್ಮಣ್ಣ, ವೀರಶೈವ ಸಮಾಜದ ಅಧ್ಯಕ್ಷ ಹುಲ್ಲೂರು ಮಂಜುನಾಥ್ ಇನ್ನು ಮುಂತಾದ ಸಮುದಾಯಗಳ ಮುಖಂಡರುಗಳು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

43 ವಯಸ್ಸು ಅಂತ ಚಿಂತೆ ಬೇಡ.. PDO ಹುದ್ದೆಗೆ ನೀವೂ ಅರ್ಜಿ ಹಾಕಬಹುದು..!

ಬೆಂಗಳೂರು: ಎಷ್ಟೋ ಯುವಕ-ಯುವತಿಯರು ಸರ್ಕಾರಿ ಕೆಲಸಕ್ಕಾಗಿ ತಮ್ಮಿಡಿ ಜೀವನವನ್ನ ಮುಡಿಪಾಗಿಟ್ಟು ಓದುತ್ತಾ ಇರುತ್ತಾರೆ. ಆದರೆ ಎಲ್ಲರಿಗೂ ಸರ್ಕಾರಿ ಕೆಲಸಕ್ಕೆ ಹೋಗುವ ಅದೃಷ್ಟವೂ ಇರುವುದಿಲ್ಲ, ಕೆಲಸವೂ ಸಿಗುವುದಿಲ್ಲ. ವಯಸ್ಸು ಮೀರುತ್ತೆ. ಆದ್ರೀಗ ಅರ್ಜಿ ಆಹ್ವಾನಿಸಿರುವ ಪಿಡಿಓ

Tirumala Laddu : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು : ಬಿಡುಗಡೆಯಾದ ಲ್ಯಾಬ್ ವರದಿಯಲ್ಲೇನಿದೆ ?

ಸುದ್ದಿಒನ್, ತಿರುಮಲ, ಸೆಪ್ಟೆಂಬರ್. 19 : ಆಂಧ್ರಪ್ರದೇಶದಲ್ಲಿ ತಿರುಮಲ ತಿರುಪತಿ ಲಡ್ಡು ವಿಚಾರ ಬಾರೀ ಸದ್ದು ಮಾಡುತ್ತಿದೆ. ವೈಸಿಪಿ ಆಡಳಿತದಲ್ಲಿ ಲಡ್ಡೂಗಳಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂಬ ಸಿಎಂ ಚಂದ್ರಬಾಬು ಹೇಳಿಕೆ ಸಂಚಲನ ಮೂಡಿಸಿತ್ತು.

ಸೆಪ್ಟೆಂಬರ್ 21 ರಂದು ದಾವಣಗೆರೆಯಲ್ಲಿ ಉದ್ಯೋಗ ಮೇಳ

ದಾವಣಗೆರೆ,ಸೆಪ್ಟೆಂಬರ್.19 : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಇವರ ವತಿಯಿಂದ ಸೆ.21 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51,  ಜಿಲ್ಲಾಧಿಕಾರಿಗಳ ಕಚೇರಿ, ದಾವಣಗೆರೆ ಇಲ್ಲಿ ಉದ್ಯೋಗಮೇಳ ಆಯೋಜಿಸಲಾಗಿದೆ.

error: Content is protected !!