ರಸ್ತೆ ತುಂಬಾ ಹೊಗೆ ಆವರಿಸಿ 158 ವಾಹನಗಳು ಡಿಕ್ಕಿ : ಏಳು ಮಂದಿ ಸಾವು, 30 ಕ್ಕೂ ಹೆಚ್ಚು ಮಂದಿಗೆ ಗಾಯ

 

 

ನ್ಯೂಯಾರ್ಕ್:  ಅಮೆರಿಕದ ಲೂಸಿಯಾನದಲ್ಲಿ ಹೊಗೆ ಮುಸುಕಿದ ವಾತಾವರಣದಿಂದಾಗಿ ರಸ್ತೆ ಅಪಘಾತ ಸಂಭವಿಸಿದೆ. ಸುಮಾರು 158 ವಾಹನಗಳು
ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿವೆ. ಈ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ.

ಇಂಟರ್ ಸ್ಟೇಟ್-55 ಹೆದ್ದಾರಿಯಲ್ಲಿ ಸೋಮವಾರ ಈ  ಅಪಘಾತ ಸಂಭವಿಸಿದೆ. ಪಾಂಟ್ ಚಾರ್ಟ್ರೇನ್ ಬಳಿ ಸಂಭವಿಸಿದ ಅಪಘಾತದಿಂದ ವಾಹನಗಳು ಡಿಕ್ಕಿ ಹೊಡೆದು ವಾಹನಗಳ ರಾಶಿಗೆ ಕಾರಣವಾಯಿತು.

ಅಪಘಾತದ ಭೀಕರತೆಯನ್ನು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದು ಹೀಗೆ, ಇಡೀ ರಸ್ತೆ ಹೊಗೆಯಿಂದ ಆವೃತವಾಗಿ ದಾರಿ ಸ್ಪಷ್ಟವಾಗಿ ಕಾಣದೆ ಸುಮಾರು 30 ನಿಮಿಷಗಳ ಕಾಲ ವಾಹನಗಳು ಒಂದರ ಹಿಂದೆ ಒಂದು ವಾಹನ ವೇಗವಾಗಿ ಬಂದು ಪರಸ್ಪರ ಡಿಕ್ಕಿ ಹೊಡೆದವು. ಗಾಯಾಳುಗಳ ಅಳಲು ಭಯಂಕರ ವಾತಾವರಣ ನಿರ್ಮಿಸಿತ್ತು. ಒಂದು ಕಾರು ಇದ್ದಕ್ಕಿದ್ದಂತೆ ಸೇತುವೆಯನ್ನು ದಾಟಿ ನೀರಿಗೆ ಬಿದ್ದಿತು. ಚಾಲಕರು ರಸ್ತೆಗಿಳಿದು ಸಹಾಯ ಕೇಳುತ್ತಿದ್ದಾರೆ. 7 ಮಂದಿ ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ. ಸುಮಾರು 11 ಕಿಲೋಮೀಟರ್ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಅಮೆರಿಕದಲ್ಲಿ ಕಾಳ್ಗಿಚ್ಚಿನಿಂದಾಗಿ ಬಿಡುಗಡೆಯಾದ ಹೊಗೆಯೊಂದಿಗೆ ಮಂಜು ಬೆರೆತಿದ್ದರಿಂದ ಇದೇ ರೀತಿಯ ಪರಿಸ್ಥಿತಿಗಳು ಉಂಟಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಸುತ್ತಿದ್ದು, ಪರಿಹಾರ ಕಾರ್ಯದಲ್ಲಿ ತೊಡಗಿರುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ರಾಜ್ಯ ರಸ್ತೆ ಸಾರಿಗೆ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ರಸ್ತೆ ಬಂದ್ ಮಾಡುವ ಕುರಿತು ಚರ್ಚೆ ನಡೆಸಲಾಗುತ್ತಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *