ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಹೆಂಡತಿ ಸುನಂದಾ ಪುಷ್ಕರ್ ಅವರ ಸಾವಿನ ಕೇಸ್ ಮತ್ತೆ ಮುನ್ನೆಲೆಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೋನ್ ಚಿಟ್ ನೀಡಿದೆ. ಸುಮಾರು 8 ವರ್ಷಗಳ ಹಿಂದಿನೆ ಕೇಸ್ ಇದಾಗಿದೆ. ಇದೀಗ ಕ್ಲೀನ್ ಚಿಟ್ ಸಿಕ್ಕಿದ್ದನ್ನು ಪ್ರಶ್ನಿಸಿ ಪೊಲೀಸರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಇನ್ನು ತರೂರ್ ಪರ ವಕೀಲರು ಕೋರ್ಟ್ ನಲ್ಲಿ ವಾದ ಮಂಡಿಸಿದ್ದು, ಕ್ಲೀನ್ ಚಿಟ್ ಸಿಕ್ಕ 90 ದಿನಗಳ ಒಳಗೆ ಪೊಲೀಸರು ಪ್ರಶ್ನೆ ಮಾಡಬೇಕಿತ್ತು. ಆದ್ರೆ ಕ್ಲೋಈನ್ ಚಿಟ್ ಸಿಕ್ಕ 15 ತಿಂಗಳ ಬಳಿಕ ಪ್ರಶ್ನೆ ಮಾಡಲಾಗಿದೆ. ಹೀಗಾಗಿ ಅರ್ಜಿಯನ್ನು ಪುರಸ್ಕಾರ ಮಾಡಬಾರದು ಎಂದು ಮನವಿ ಮಾಡಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಚಾರಣೆಯನ್ನು ಫೆಬ್ರವರಿ 7ಕ್ಕೆ ನಿಗದಿ ಮಾಡಿದೆ.
2014ರ ಜನವರಿ 17ರಂದು ಶಶಿ ತರೂರ್ ಹೆಂಡತಿ ಸುನಂದಾ ಪುಷ್ಕರ್, ಐಶರಾಮಿ ಹೊಟೇಲ್ ನಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರು. ಮೊದಲಿಗೆ ಇದು ಹತ್ಯೆ ಎMದು ಅನುಮಾನಿಸಿದ ಪೊಲೀಸರು ತನಿಖೆ ನಡೆಸಿದ್ದರು. ಬಳಿಕ ಇದೊಂದು ಆತ್ಮಹತ್ಯೆ ಎಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪುಷ್ಕರ್ ಆತ್ಮಹತ್ಯೆಗೆ ತರೂರ್ ಅವರೇ ಪ್ರಚೋದನೆ ನೀಡಿದ್ದರು ಎಂಬ ಆರೋಪ ಕೂಡ ಕೇಳಿ ಬಂದಿತ್ತು. ತನಿಖೆಯೂ ನಡೆದಿತ್ತು. ಬಳಿಕ 2021ರ ಆಗಸ್ಟ್ 18ರಂದು ಪಟಿಯಾಲ ಕೋರ್ಟ್ ಶಶಿ ತರೂರ್ ಗೆ ಕ್ಲೀನ್ ಚಿಟ್ ನೀಡಿತ್ತು.