ಬೆಂಗಳೂರು; ಈ ಬಾರಿ ಬೇಸಿಗೆ ಶುರುವಾಗುವುದಕ್ಕೂ ಮುನ್ನವೇ ಬಿಸಿಲಿನ ತಾಪ ಎಲ್ಲರನ್ನ ಸುಡುವುದಕ್ಕೆ ಶುರುವಾಗಿತ್ತು. ಆದರೆ ಇಂದು ಮಳೆರಾಯನ ಸ್ಪರ್ಶದಿಂದ ಕೊಂಚ ಭುವಿ ತಂಪಾಗಿರೋದಲ್ಲದೆ ಜನರು ಕೂಡ ತಂಪಾಗಿದ್ದಾರೆ. ಶೆಕೆಯಿಂದ ಬೆವರುತ್ತಿದ್ದ ಜನ ಸದ್ಯ ತಣ್ಣನೆ ಗಾಳಿಗೆ ಮೈಯೊಡ್ಡಿ ಖುಷಿಯಾಗಿದ್ದಾರೆ. ಸಂಜೆಯಾಗುತ್ತಲೆ, ಸಿಲಿಕಾನ್ ಸಿಟಿಯಾದ್ಯಂತ ಮಳೆರಾಯ ಸುರಿದಿದ್ದಾನೆ.

ಬೆಂಗಳೂರಿನ ಹೆಚ್ಎಎಲ್, ಮಾರತಳ್ಳಿ, ವೈಟ್ ಫೀಲ್ಡ್, ಲಾಲ್ ಬಾಗ್, ರಿಚ್ಮಂಡ್ ಸರ್ಕಲ್ ಸೇರಿದಂತೆ ಹಕವೆಡೆ ಮಳೆಯಾಗಿದೆ. ಮಾರ್ಚ್ 14ರವರೆಗೂ ಮಳೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. ಸೋ ನಾಳೆಯಿಂದ ಹೊರಗೆ ಹೋಗುವವರು ಕೊಡೆ ತೆಗೆದುಕೊಂಡು ಹೋಗಿ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳು, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಭಾಗದಲ್ಲಿ ಬಾರೀ ಮಳೆಯಾಗುವ ಸಾಧ್ಯತೆ ಇದೆ.

2025ರ ಮೊದಲ ಮಳೆಯಾಗಿದೆ. ಇಂದು ಮಧ್ಯಾಹ್ನದ ಹೊತ್ತಿಗೆ ನಗರದಾದ್ಯಂತ ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು. ರಾತ್ರಿಯಾಗುತ್ತಿದ್ದಂತೆ ಜೋರು ಮಳೆಯಾಗಿದೆ. ಮಳೆ ಕಂಡು ಜನ ಹರ್ಷಗೊಂಡಿದ್ದಾರೆ. ಹಲವು ಜಿಲ್ಲೆಗಳಲ್ಲೂ ಮಳೆಯಾಗಲಿದೆ. ಇನ್ನು ಎರಡ್ಮೂರು ದಿನಗಳ ಕಾಲ ಮಳೆಯಾಗಲಿದೆ. ಇನ್ನು ತಾಪಮಾನ ಕೂಡ ಇಳಿಕೆಯಾಗಿದೆ. ಸಂಜೆ ವೇಳೆಗೆ ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ಗೆ ಇಳಿಕೆಯಾಗಿದೆ. ಗರಿಷ್ಠ ತಾಪಮಾನ 31ಕ್ಕೆ ಇಳಿಕೆಯಾಗಿದೆ. ಸಮುದ್ರದ ಮೇಲ್ಮೈನಲ್ಲಿ ಉಂಟಾಗಿರುವ ಹವಮಾನ ವೈಪರೀತ್ಯದಿಂದ ತಮಿಳುನಾಡು, ಕರ್ನಾಟಕದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ತಮಿಳುನಾಡಿನಲ್ಲಿ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ.

