ಹಾಸನ: ಮಂತ್ರಾಕ್ಷತೆಗೆ ಬಳಸುವಂತ ಅಕ್ಕಿಯ ಬಗ್ಗೆ ರಾಜ್ಯದ ಉಪಮುಖ್ಯಮಂತ್ರಿಗಳ ಬಾಲಿಶ ಹೇಳಿಕೆ ಇದೆಯಲ್ಲ, ಅದಕ್ಕೆ ಉತ್ತರ ಕೊಡುವಂತ ಅವಶ್ಯಕತೆ ಇಲ್ಲ. ನಮ್ಮ ಅನ್ನಭಾಗ್ಯ ಯೋಜನೆಯಲ್ಲಿ ಕೊಡುವಂತಹ ಅಕ್ಕಿ ಅಂತ ಹೇಳುತ್ತಾರಲ್ಲ ಹತ್ತು ಕೆಜಿ ಅಕ್ಕಿಯನ್ನು ಕೊಡುತ್ತೀನಿ ಅಂತ ಹೇಳುತ್ತಾರೆ. ಈ ಕ್ಷಣದವರೆಗೂ ಅಕ್ಕಿ ಕೊಡುವುದಕ್ಕೆ ಆಗಿಲ್ಲ. ಎಲ್ಲಿಂದ ಕೊಟ್ಟಿದ್ದಾರೆ ಪ್ರತಿ ತಿಂಗಳು ಅಕ್ಕಿಯನ್ನು ಎಂದು ಪ್ರಶ್ನಿಸಿದ್ದಾರೆ.
ಮಂತ್ರಾಕ್ಷತೆ ಅಕ್ಕಿಯನ್ನು ಬೆಳೆದಿರುವಂತವನು ರೈತ. ಇವತ್ತು ಆ ಅಕ್ಕಿಯನ್ನು ಮಂತ್ರಾಕ್ಷತೆಯನ್ನು ಮಾಡಿ, ಮನೆ ಮನೆಗೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಅದರ ಬಗ್ಗೆ ಸಣ್ಣತನದಲ್ಲಿ ಮಾತನಾಡುವುದು ಇದೆಯಲ್ಲ ಇದು ಅನಾವಶ್ಯಕ ಎಂಬುದು ನನ್ನ ಅಭಿಪ್ರಾಯ. ಇಲ್ಲ ತನಿಖೆ ಮಾಡುವುದಕ್ಕೆ ಆದೇಶ ಕೊಟ್ಟುಬಿಡಿ. ಇವರ ಸರ್ಕಾರ ಕರ್ನಾಟಕದಲ್ಲಿ ಪ್ರತಿ ತಿಂಗಳು ಕೊಡುತ್ತಿದೆ. ಮಾರಾಟ ಮಾಡುವ ಜಾಗದಿಂದ ತೆಗೆದುಕೊಂಡು ಹೋಗಿದ್ದಾರಾ..?
ಮುಂದಿನ ಚುನಾವಣೆ ದೃಷ್ಟಿಯಿಂದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಇದೆ, ಅದಕ್ಕೆ ಸಂಬಂಧಪಟ್ಟಂತೆ ಬಿಜೆಪಿಯಲ್ಲಿ ಇರುವ ಯಾರನ್ನು ಬೇಕಾದರೂ ಭೇಟಿ ಮಾಡಿ ಚರ್ಚೆ ಮಾಡ್ತಿನಿ. ಸುಮಲತಾ ಅವರು ಬಿಜೆಪಿ ಮೆಂಬರ್ ಅಲ್ಲ ಅಂತ ಶಿಷ್ಯ ಇವತ್ತು ಹೇಳಿರಬೇಕು. ನಾನು ಯಾರನ್ನು ಬೇಕಾದರೂ ಭೇಟಿ ಮಾಡಿ ಚರ್ಚಿಸುವೆ. ಸುಮಲತಾ ಅವರು ಬಿಜೆಪಿ ಮೆಂಬರ್ ಆಗಿರದಿದ್ದರೆ ಅವರನ್ನು ಭೇಟಿ ಮಾಡುವ ಅವಶ್ಯಕತೆ ಬರಲ್ಲ. ಅವರು ಬಿಜೆಪಿಯ ಮೈತ್ರಿಯಲ್ಲಿ ಇದ್ದಾರೆ, ಹಿಂದಿನ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಬೆಂಬಲ ಕೊಟ್ಟಿದೆ. ಅದು ಈಗ ಅವರಲ್ಲಿ ಇಲ್ಲದೆ ಇದ್ದರೆ ಭೇಟಿ ಮಾಡುವ ಅವಶ್ಯಕತೆ ಇರಲ್ಲ. 28ಕ್ಕೆ 28 ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲುವ ದೃಷ್ಟಿಯಿಂದ ನಾನು ಯಾರನ್ನು ಬೇಕಾದರೂ ಭೇಟಿ ಮಾಡಲು ತಯಾರಾಗಿದ್ದೇನೆ ಎಂದಿದ್ದಾರೆ.