ಬೆಂಗಳೂರು: ಕಳೆದ ಎರಡು ದಿನದಿಂದ ದರ್ಶನ್ ಮತ್ತೆ ಸುದ್ದಿಯಲ್ಲಿದ್ದಾರೆ. ಜೈಲಿನಲ್ಲಿ ಕೂತು ಕಾಫಿ ಕುಡಿಯುತ್ತಾ, ಸಿಗರೇಟ್ ಹೊಗೆ ಬಿಡುತ್ತಾ, ರೌಡಿಶೀಟರ್ ಗಳ ಜೊತೆಗೆ ಹರಟೆ ಹೊಡೆಯುತ್ತಿದ್ದ ಫೋಟೋ ವೈರಲ್ ಆಗಿದ್ದೆ ತಡ, ದರ್ಶನ್ ವಿರುದ್ಧ ಮತ್ತೆ ಮೂರು ಎಫ್ಐಆರ್ ಬೇರೆ ದಾಖಲಾಗಿವೆ.
ದರ್ಶನ್ ಬಗ್ಗೆ ಇಂಥದ್ದೊಂದು ಫೋಟೋ ವೈರಲ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ದರ್ಶನ್ ಅವರ ಮದರ್ ಇಂಡಿಯಾ ಸುಮಲತಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಜೈಲಿನಲ್ಲಿ ಹೀಗೆ ನಡೆಯುತ್ತಿರುವುದು ಇದು ಮೊದಲೇನು ಅಲ್ಲ. ಈ ರೀತಿಯ ಪ್ರಕರಣ ಇದೇ ಮೊದಲ ಎಂಬುದನ್ನು ಮೊದಲು ನೋಡಬೇಕು. ಈ ಬಗ್ಗೆ ನಾನು ಮಾತಾಡಿದ್ರೆ ಕಾಂಟ್ರವರ್ಸಿ ಆಗಬಹುದು. ದರ್ಶನ್ ನನಗೆ ಬಹಳ ಆಪ್ತರು. ಬಹಳ ಹತ್ತಿರದವರು. ಜೈಲಿನಲ್ಲಿ ಹಣ ಕೊಟ್ರೆ ಏನು ಬೇಕಾದರೂ ಸಿಗುತ್ತದೆ ಎಂಬುದನ್ನು ಈ ಹಿಂದೆ ಐಪಿಎಸ್ ಅಧಿಕಾರಿ ಡಿ.ರೂಪಾ ಅವರೇ ತೋರಿಸಿದ್ದಾರೆ. ಇದು ಪರಪ್ಪನ ಅಗ್ರಹಾರದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಜೈಲುಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ. ಅಮೆರಿಕಾದ ಜೈಲಲ್ಲೂ ಡ್ರಗ್ಸ್ ಎಲ್ಲಾ ಸಿಗುತ್ತೆ. ಇದು ನಾನು ಸರಿ ಅಂತ ಹೇಳ್ತಿಲ್ಲ. ಸಿಸ್ಟಂನಲ್ಲಿರುವ ಸಮಸ್ಯೆ ಎಂದಿದ್ದಾರೆ.
ದರ್ಶನ್ ಫೋಟೋ ವೈರಲ್ ಆಗುತ್ತಿದ್ದಂತೆ ಪರಪ್ಪನ ಅಗ್ರಹಾರದಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಡಿಐಜಿಗಳ ಬದಲಾವಣೆಯಾಗಿದೆ. ಡಿಐಜಿಯಾಗಿ ದಿವ್ಯಶ್ರೀ ಹಾಗೂ ಮುಕಜ್ಯ ಅಧೀಕ್ಷಕರಾಗಿ ಕೆ ಸುರೇಶ್ ಅವರನ್ನು ನೇಮಕ ಮಾಡಲಾಗಿದೆ. ದರ್ಶನ್ ಅವೆಇಗೆ ರಾಜಾತಿಥ್ಯ ಸಿಗುತ್ತಿದೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ರಾಜ್ಯ ಸರ್ಕಾರ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದು, ಅಧಿಕಾರಿಗಳನ್ನು ನೇಮಿಸಿದೆ.