ಬೆಂಗಳೂರು: 2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ವಿರುದ್ಧ ಸುಮಲತಾ ತನ್ನ ಶಕ್ತಿ ಪ್ರದರ್ಶನ ಮಾಡಿ, ಮಂಡ್ಯ ಜಿಲ್ಲೆಯ ಸಂಸದೆಯಾದ್ರೂ. ಅವರ ಗೆಲುವಿಗಾಗಿ ಕಾಂಗ್ರೆಸ್ ನಾಯಕರು ಕೂಡ ಅಂದು ಶ್ರಮವಹಿಸಿದ್ರು. ಆದ್ರೆ ಗೆದ್ದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಮೂಡಿದೆ. ನಾಗಮಂಗಲದ ಚೆಲುವರಾಯ ಸ್ವಾಮಿ ಹಾಗೂ ಮಳವಳ್ಳಿ ನರೇಂದ್ರ ಸ್ವಾಮಿ ಸುಮಲತಾ ಮೇಲೆ ಮುನಿಸು ತೋರಿದ್ದಾರೆ.
ಈ ಎಲ್ಲಾ ಭಿನ್ನಾಭಿಪ್ರಾಯಗಳ ನಡುವೆ ಸಂಸದೆ ಸುಮಲತಾ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದಾರೆ. ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಕಂಡು, ಮಂಡ್ಯ ಅಭಿವೃದ್ಧಿಗಾಗಿ ಓಡಾಡುತ್ತಿದ್ದಾರೆ. ಮಂಡ್ಯ ಜನತೆಗಾಗಿ ರಾಜ್ಯ ರಾಜಕಾರಣಕ್ಕೆ ಬರುವುದಾಗಿ ಹೇಳಿದ್ದಾರೆ. ಇದರ ಮಧ್ಯೆ ಬಿಜೆಪಿ ಕೂಡ ಸುಮಲತಾಗಾಹಿ ಗಾಳ ಹಾಕಿದೆ. ತಮ್ಮದೆ ಪಕ್ಷಕ್ಕೆ ಬನ್ನಿ ಎಂದು ಕರೆಯುತ್ತಿದ್ದಾರೆ. ಸುಮಲತಾ ಕೂಡ ಹಲವು ಬಿಜೆಪಿ ಕಾರ್ಯಕ್ರಮದಲ್ಲಿ ಗುರುತಿಸಿಕೊಂಡು, ಬಿಜೆಪಿಯನ್ನೇ ಸೇರಲಿದ್ದಾರೆ ಎಂಬ ಗುಸಗುಸು ಕ್ರಿಯೇಟ್ ಆಗುವಂತೆ ಮಾಡಿದ್ದಾರೆ.
ಆದ್ರೆ ಸದ್ಯದ ಸ್ಟ್ಯಾಟರ್ಜಿಯೇ ಬೇರೆಯಾಗಿದೆ. ಮೂಲಗಳ ಪ್ರಕಾರ ಸುಮಲತಾ, ಕಾಂಗ್ರೆಸ್ ಸೇರಲು ಬಯಸುತ್ತಿದ್ದಾರೆ ಎನ್ನಲಾಗುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ, “ನನಗೆ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಬಗ್ಗೆ ಒಲವಿದೆ. ನಾನು ಸಂಸದೆಯಾಗಿ ಆಯ್ಕೆಯಾಗಲು ಕಾಂಗ್ರೆಸ್ ನಾಯಕರ ಶ್ರಮ ಹೆಚ್ಚಾಗಿದೆ. ನಾನು ಎಂಟು ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಲು ಮುಂದಾಗಿದ್ದೆ. ಆದರೆ ಅವರೇ ಬಿಡಲಿಲ್ಲ. ಆಯಾ ಕ್ಷೇತ್ರಕ್ಕೆ ಹೋಗುವಾಗಲೂ ಕಾಂಗ್ರೆಸ್ ನಾಯಕರಿಗೆ ತಿಳಿಸಿಯೇ ಹೋಗುತ್ತಿದ್ದೆ. ಚೆಲುವರಾಯಸ್ವಾಮಿ ಭೇಟಿಗೆ ಹಲವು ಬಾರಿ ಪ್ರಯತ್ನಿಸಿದ್ದೇನೆ. ಭೇಟಿ ಸಾಧ್ಯವಾಗದೆ ಇದ್ದಾಗ ನಾನು ನನ್ನ ಕೆಲಸ ಮುಂದುವರೆಸಿಕೊಂಡು ಸುಮ್ಮನಾದೆ. ಬಿಜೆಪಿಯಿಂದ ಪ್ರತಿ ದಿನ ಕರೆ ಬರ್ತಾ ಇದೆ. ಆದ್ರೆ ನನಗೆ ಕನಿಷ್ಠ ಗೌರವ ಸಿಗುವಲ್ಲಿ ಇರಬೇಕು ಎಂಬುದೇ ನನ್ನ ಆಸೆ” ಎಂದಿದ್ದಾರೆ ಎನ್ನಲಾಗಿದೆ.
ಇನ್ನು ಕೆಲವೇ ದಿನದಲ್ಲಿಯೇ ರಣದೀಪ್ ಸುರ್ಜೇವಾಲ ಅವರು ಕೂಡ ಸುಮಲತಾ ಅವರನ್ನು ಭೇಟಿಯಾಗಲಿದ್ದಾರೆ. ಖರ್ಗೆ ಅವರೇ ಈ ವಿಚಾರದಲ್ಲಿ ಮಾತನಾಡಿರುವುದರಿಂದ ಸಿದ್ದರಾಮಯ್ಯ ಅವರು ಆಸಕ್ತಿ ತೋರಿಸುತ್ತಿದ್ದಾರೆ ಎನ್ನಲಾಗಿದೆ.