
ಮಂಡ್ಯ : ಕಾಂಗ್ರೆಸ್ ಹಾಗೂ ಸಂಸದೆ ಸುಮಲತಾ ಬಣದ ನಡುವೆ ಕಿತ್ತಾಟ ನಡೆದು, ಕೈಕೈ ಮಿಲಾಯಿಸಿದ ಘಟನೆ ಜಿಲ್ಲೆಯ ಬಿ ಗೌಡಗೆರೆ ಗ್ರಾಮದಲ್ಲಿ ನಡೆದಿದೆ. ದೇವಸ್ಥಾನದ ಉದ್ಘಾಟನೆಗೆಂದು ಸುಮಲತಾ ಬಂದಿದ್ದರು. ಈ ವೇಳೆ ಇಂಥ ಘಟನೆ ನಡೆದಿದೆ. ವೇದಿಕೆ ಏರುವ ವಿಚಾರಕ್ಕೆ ಎರಡು ಬಣಗಳ ನಡುವೆ ಗಲಾಟೆ ನಡೆದು, ಗಲಾಟೆ ತಾರಕಕ್ಕೇರಿದೆ.
ಗೌಡನಗೆರೆ ಗ್ರಾಮದಲ್ಲಿ ಮಹದೇಶ್ವರ ದೇವಾಲಯದ ಉದ್ಘಾಟನೆ ಇತ್ತು. ಉದ್ಘಾಟನಾ ಕಾರ್ಯಕ್ರಮಕ್ಕೆ ಸುಮಲತಾ ಅವರನ್ನು ಆಹ್ವಾನ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆಂದು ವೇದಿಕೆ ಸಿದ್ಧ ಮಾಡಲಾಗಿತ್ತು. ಈ ವೇದಿಕೆಗೆ ಯಾವುದೇ ಕಾರಣಕ್ಕೂ ರಾಜಕೀಯ ವ್ಯಕ್ತಿಗಳನ್ನು ಹತ್ತಿಸಬಾರದೆಂದು ಮೊದಲೇ ತೀರ್ಮಾನ ಮಾಡಲಾಗಿತ್ತು.
ಆದರೆ ಸುಮಲತಾ ಅವರನ್ನು ವೇದಿಕೆಗೆ ಕರೆತಂದಿದ್ದರಿಂದ ಗ್ರಾಮಸ್ಥರಿಗೆ ಕೋಪ ಬಂದಿತ್ತು. ಈ ವೇಳೆ ವೇದಿಕೆ ಮೇಲೆ ಸುಮಲತಾ ಅವರನ್ನು ಯಾಕೆ ಹತ್ತಿಸುತ್ತೀರಿ ಎಂದು ಪ್ರಶ್ನಿಸಿದರು. ಮಾತಿನ ವಾಗ್ವಾದ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಎರಡು ಬಣಗಳ ನಡುವೆ ಇದೇ ವಿಚಾರ ಬಡಿದಾಡಿಕೊಳ್ಳುವ ಹಂತಕ್ಕೂ ಹೋಯಿತು.

GIPHY App Key not set. Please check settings