ಮೈಸೂರು: ಕಳೆದ ಕೆಲವು ದಿನಗಳಿಂದು ಸಂಸದೆ ಸುಮಲತಾ ಪ್ರತಿನಿಧಿಸುವ ಕ್ಷೇತ್ರದಲ್ಲಿ ಕ್ರೆಡಿಟ್ ವಿಚಾರ ಸದ್ದು ಮಾಡ್ತಾ ಇದೆ. ಈ ಬಗ್ಗೆ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಸಂಸದೆ ಸುಮಲತಾ ಅವರು, ನಾನು ಏನೇ ಮಾಡಿದ್ರು ಕ್ರೆಡಿಟ್ ಬರುತ್ತಾ ಇಲ್ವಾ ಅನ್ನೋದಕ್ಕಿಂತ ಕರ್ತವ್ಯ ಅಂತ ಮಾಡ್ತೇನೆ. ನಾನು ಮಾಡಿರೋದನ್ನ ನಾನು ಮಾಡಿಲ್ಲ ಅಂದ್ರೆ ಖಂಡಿತ ನಾನು ಸುಮ್ಮನೆ ಇರೋದಿಲ್ಲ ಎಂದಿದ್ದಾರೆ.

ನನ್ನ ಜನ ಆಯ್ಕೆ ಮಾಡಿರೋದು ಅಭಿವೃದ್ಧಿ ಮಾಡಲಿ ಅಂತಾನೆ. ಹಾಗಾಗಿ ನಾನು ನನ್ನ ಕೆಲಸವನ್ನ ಮಾಡುತ್ತೇನೆ. ನಾನು ಏನು ಮಾಡುತ್ತೇನೆ ಅನ್ನೋದು ರೆಕಾರ್ಡ್ ನಲ್ಲಿರುತ್ತೆ. ಕ್ರೆಡಿಟ್ ವಾರ್ ಶುರು ಮಾಡೋರು ಮೊದಲು ಇರುವ ಕೆಲಸವನ್ನ ಮಾಡಲಿ.

ಶಿಂಷಾ ನದಿ ವಿಚಾರಕ್ಕೆ ರೈತರ ಪ್ರತಿಭಟನೆ ವೇಳೆ ನಾನು ಹೋಗಿದ್ದೇನೆ. ಅವರಿಗೆ ಭರವಸೆ ನೀಡಿದ್ದೆ, ಈ ಹೋರಾಟ ನಿಮ್ಮ ಹೋರಾಟ ಅಲ್ಲ ನನ್ನ ಹೋರಾಟದಂತೆ ಮಾಡ್ತೇನೆ. ಈ ವಿಚಾರವಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೂ ಪತ್ರ ಬರೆದು ಮನವಿ ಮಾಡಿದ್ದೇನೆ. ಒಂದು ಜಿಲ್ಲೆಗೆ ಸಂಬಂಧಿಸಿದ ಪ್ರತಿನಿಧಿಗಳು ಅಲ್ಲಿ ಹೋಗಿ ಡಿಮ್ಯಾಂಡ್ ಮಾಡ್ತೇನೆ. ನನಗೆ ಸಂಬಂಧಿಸಿದ್ದಲ್ಲದ್ದನ್ನ ತೆಗೆದುಕೊಂಡು ಹೋದರೆ ನಿಮಗೆ ಯಾಕೆ ಅಂತ ಕೇಳಲ್ವಾ..?.
ಆದ್ರೆ ಆ ವಿಚಾರಕ್ಕೆ ಯಾರು ಬೇಕಾದರೂ ಪ್ರಶ್ನೆ ಮಾಡಬಹುದು, ಪರ್ರ ಬರೆಯಬಹುದು. ಹೀಗಾಗಿ ಇದಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿಯಾಗಲೀ, ಮೈಸೂರು ಸಂಸದರಾಗಲೀ ಪತ್ರ ಬರೆದಿರಬಹುದು. ಆ ಪತ್ರದಲ್ಲಿ ಏನು ಬರೆದಿದ್ದಾರೆಂದು ನನಗೆ ಗೊತ್ತಿಲ್ಲ. ಆದ್ರೆ ನಿತಿನ್ ಗಡ್ಕರಿ ಅವರು ಪ್ರತಿಕ್ರಿಯೆ ನೀಡಿರುವ ದಾಖಲೆ ನನ್ನ ಬಳಿ ಇದೆ ಎಂದಿದ್ದಾರೆ.


